ನೀಟ್ ಯುಜಿ, ಕ್ಯೂಎಟ್ ಜೆಇಇ ಮೈನ್ಸ್ ಪರೀಕ್ಷಾ ದಿನಾಂಕ ಪ್ರಕಟಣೆ

ನವದೆಹಲಿ: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿಯು ಮೇ 7 ರಂದು ನೀಟ್(NEET) ಯುಜಿ ಮತ್ತು ಮೇ 21 ಮತ್ತು 31 ರ ನಡುವೆ ಕ್ಯೂಎಟ್(CUET) ಪರೀಕ್ಷೆಯನ್ನು ನಡೆಸಲಿದೆ. ಪರೀಕ್ಷೆ ನಡೆಸುವ ಸಂಸ್ಥೆ ಇಂದು ಕ್ಯಾಲೆಂಡರ್ ಅನ್ನು ಬಿಡುಗಡೆ ಮಾಡಿದೆ ಮತ್ತು ಜೆಇಇ(JEE) ಮೈನ್ಸ್ 2023 ರ ನೋಂದಣಿ ಪ್ರಕ್ರಿಯೆಯನ್ನು ಸಹ ಪ್ರಾರಂಭಿಸಿದೆ. ಜೆಇಇ ಮೈನ್ಸ್ ನ ಜನವರಿ ಸೆಶನ್ ನ ಕಾಯ್ದಿರಿಸಿದ ದಿನಾಂಕಗಳು ಫೆಬ್ರವರಿ 1, 2 ಮತ್ತು 3 ರಂದು ಮತ್ತು ಎರಡನೇ ಸೆಶನ್ಸ್ – ಏಪ್ರಿಲ್ […]

ಅಗ್ನಿ V ಕ್ಷಿಪಣಿ ಯಶಸ್ವಿ ಪರೀಕ್ಷೆ: ಉತ್ತರ ಚೀನಾ ವ್ಯಾಪ್ತಿವರೆಗೂ ನಿಖರ ಗುರಿ ಸಾಧಿಸುವ ಸಾಮರ್ಥ್ಯ ಸಾಬೀತು

ನವದೆಹಲಿ: ಭಾರತವು ಗುರುವಾರ ಅತ್ಯಂತ ಹೆಚ್ಚಿನ ನಿಖರತೆಯೊಂದಿಗೆ 5,000 ಕಿಲೋಮೀಟರ್ ವ್ಯಾಪ್ತಿಯ ಗುರಿಗಳನ್ನು ಹೊಡೆಯುವ ಸಾಮರ್ಥ್ಯವನ್ನು ಹೊಂದಿರುವ ಪರಮಾಣು ಸಾಮರ್ಥ್ಯದ ಅಗ್ನಿ V ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ. ಭಾರತವು ಅಗ್ನಿ V ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿಯ ರಾತ್ರಿ ಪ್ರಯೋಗಗಳನ್ನು ಯಶಸ್ವಿಯಾಗಿ ನಡೆಸಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಡಿ. 9 ರಂದು ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವೆ ಘರ್ಷಣೆ ನಡೆದಿದ್ದು, ಇದೀಗ ಅಗ್ನಿ V ಕ್ಷಿಪಣಿಯ ಯಶಸ್ವಿ ಪರೀಕ್ಷೆಯು […]

ತವಾಂಗ್ ನಲ್ಲಿ 300 ಕ್ಕೂ ಹೆಚ್ಚು ಚೀನೀ ಸೈನಿಕರ ಜೊತೆ ಕಾದಾಡಿ ಹಿಮ್ಮೆಟಿಸಿದ ಭಾರತೀಯ ಸೈನಿಕರು

ನವದೆಹಲಿ: ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನಲ್ಲಿ ಭಾರತ ಮತ್ತು ಚೀನಾದ ಸೈನಿಕರ ನಡುವಿನ ಘರ್ಷಣೆ ಬಗ್ಗೆ ಮಂಗಳವಾರ ಸಂಸತ್ತಿನಲ್ಲಿ ಚರ್ಚೆಗೆ ಒತ್ತಾಯಿಸಲಾಗಿದ್ದು, ಗಡಿಯಲ್ಲಿನ ಪರಿಸ್ಥಿತಿಯ ಕುರಿತು ಹಲವಾರು ಕಾಂಗ್ರೆಸ್ ಸಂಸದರು ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ನೀಡುವಂತೆ ಒತ್ತಾಯಿಸಿದರು. ಡಿಸೆಂಬರ್ 9 ರಂದು ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್‌ನ ಯಾಂಗ್ಟ್ಸೆ ಪ್ರದೇಶದ ಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಚೀನಾದ ಪಿಎಲ್‌ಎಯ ಪ್ರಯತ್ನಗಳನ್ನು ಭಾರತೀಯ ಸೇನೆ ಧೈರ್ಯದಿಂದ ತಡೆದಿದೆ ಮತ್ತು ಅದನ್ನು ದೃಢವಾಗಿ ಎದುರಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ […]

ವಿದ್ಯಾರ್ಥಿನಿಯಂತೆ ಬಂದು ರ‍್ಯಾಗಿಂಗ್ ಗ್ಯಾಂಗ್ ಅನ್ನು ಪತ್ತೆ ಹಚ್ಚಿದ ರಹಸ್ಯ ಪೊಲೀಸ್: ಇಂದೋರ್ ನಲ್ಲಿ ಸಿನಿಮೀಯ ಕಾರ್ಯಾಚರಣೆ

ಭೋಪಾಲ್: ಥೇಟ್ ವಿದ್ಯಾರ್ಥಿನಿಯಂತೆಯೆ ಕಾಲೇಜಿಗೆ ಬಂದು ಕ್ಯಾಂಪಸ್ ನಲ್ಲಿ ಅಡ್ಡಾಡುತ್ತಿದ್ದ ಆಕೆ ವಿದ್ಯಾರ್ಥಿನಿಯಲ್ಲ, ಬದಲಿಗೆ ರ‍್ಯಾಗಿಂಗ್ ಬಗ್ಗೆ ಪುರಾವೆಗಳನ್ನು ಸಂಗ್ರಹಿಸುವ ರಹಸ್ಯ ಪೊಲೀಸ್ ಆಗಿದ್ದಳು! ಕಾಲೇಜಿಗೆ ಭೇಟಿ ನೀಡುತ್ತಿದ್ದ ಮೂರು ತಿಂಗಳ ಅವಧಿಯಲ್ಲಿ ಮೊದಲ ವರ್ಷದ ವಿದ್ಯಾರ್ಥಿಗಳ ಕ್ರೂರ ರ‍್ಯಾಗಿಂಗ್ ನಲ್ಲಿ ಭಾಗಿಯಾಗಿದ್ದ 11 ಹಿರಿಯ ವಿದ್ಯಾರ್ಥಿಗಳನ್ನು ಈಕೆ ಗುರುತಿಸಿದ್ದಾಳೆ. ಇದೀಗ ಆ 11 ಹಿರಿಯ ವಿದ್ಯಾರ್ಥಿಗಳನ್ನು ಮೂರು ತಿಂಗಳ ಕಾಲ ಕಾಲೇಜು ಮತ್ತು ಹಾಸ್ಟೆಲ್‌ನಿಂದ ಅಮಾನತುಗೊಳಿಸಲಾಗಿದೆ. ಇಂದೋರ್‌ನ ಮಹಾತ್ಮಾ ಗಾಂಧಿ ಸ್ಮಾರಕ ವೈದ್ಯಕೀಯ ಕಾಲೇಜಿನಲ್ಲಿ ಇತ್ತೀಚೆಗೆ […]

ಯೂಟರ್ನ್ ಹೊಡೆದ ದೆಹಲಿ ಪಾಲಿಕೆ ಸದಸ್ಯರು: ಆಪ್ ಗೆ ಕೈಕೊಟ್ಟು ಮತ್ತೆ ಕಾಂಗ್ರೆಸ್ ಗೆ ಮರಳಿದ ಕೌನ್ಸಿಲರ್ ಗಳು

ದೆಹಲಿ: ಆಮ್ ಆದ್ಮಿ ಪಕ್ಷಕ್ಕೆ ಸೇರಿದ ಕೆಲವೇ ಗಂಟೆಗಳ ನಂತರ, ಹೊಸದಾಗಿ ಚುನಾಯಿತರಾದ ಇಬ್ಬರು ಕಾಂಗ್ರೆಸ್ ಕೌನ್ಸಿಲರ್‌ಗಳು ಮತ್ತು ಪಕ್ಷದ ನಾಯಕ ಅಲಿ ಮೆಹದಿ ತಮ್ಮ ಹಳೆಯ ಪಕ್ಷಕ್ಕೆ ಮರಳಿದ್ದಾರೆ ಮತ್ತು ಕ್ಷಮೆಯಾಚಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಮೆಹದಿ, ತಾನು ಆಪ್ ಗೆ ಸೇರುವ ಮೂಲಕ ತಪ್ಪು ಮಾಡಿದೆ ಮತ್ತು ತಾನು ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯ ನಿಷ್ಠಾವಂತ ಕಾರ್ಯಕರ್ತ ಎಂದು ಪ್ರತಿಪಾದಿಸಿದ್ದಾರೆ. “ನಾನು ದೊಡ್ಡ ತಪ್ಪು ಮಾಡಿದ್ದೇನೆ. ನನ್ನ ತಪ್ಪನ್ನು ನಾನು ಒಪ್ಪಿಕೊಳ್ಳುತ್ತೇನೆ […]