ಕಾನ್ಪುರ: 10 ಅಡಿ ಉದ್ದದ ಸುರಂಗ ಕೊರೆದು ಬ್ಯಾಂಕ್ ನಿಂದ 1 ಕೋಟಿ ಮೌಲ್ಯದ ಚಿನ್ನಾಭರಣ ದೋಚಿದ ಕಳ್ಳರು

ಕಾನ್ಪುರ: ಉತ್ತರ ಪ್ರದೇಶದ ಕಾನ್ಪುರದ ಬ್ಯಾಂಕ್ ಒಂದರಲ್ಲಿ ಕಳ್ಳರು 1 ಕೋಟಿ ರೂ ಮೌಲ್ಯದ ಚಿನ್ನಾಭರಣ ದೋಚಿರುವ ಬಗ್ಗೆ ವರದಿಯಾಗಿದೆ. 10 ಅಡಿ ಉದ್ದದ ಸುರಂಗದ ಮೂಲಕ ಬ್ಯಾಂಕ್‌ನ ಲಾಕರ್ ರೂಂ ಪ್ರವೇಶಿಸಿರುವ ಕಳ್ಳರು 1.8 ಕೆ.ಜಿ ಬಂಗಾರ ದೋಚಿದ್ದಾರೆ. ಇದರ ಮೌಲ್ಯ ಸುಮಾರು 1 ಕೋಟಿ ರೂ ಆಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಭಾನುತಿ ಶಾಖೆಯ ಪಕ್ಕದಲ್ಲಿರುವ ಖಾಲಿ ಜಾಗದಿಂದ ಅವರು 4 ಅಡಿ ಅಗಲ 10 ಅಡಿ ಉದ್ದದ […]
ಸಿಕ್ಕಿಂನಲ್ಲಿ ಸೇನಾ ವಾಹನ ಪಲ್ಟಿ: 16 ಯೋಧರ ಸಾವು; ನಾಲ್ವರಿಗೆ ಗಾಯ

ನವದೆಹಲಿ: ಸಿಕ್ಕಿಂನಲ್ಲೊಂದು ಹೃದಯ ಕಲಕುವ ಘಟನೆ ನಡೆದಿದೆ. ಶುಕ್ರವಾರ ಉತ್ತರ ಸಿಕ್ಕಿಂ ಬಳಿ ಕಡಿದಾದ ಇಳಿಜಾರಿನಲ್ಲಿ ಸೇನಾ ವಾಹನವು ಜಾರಿ ಕೆಳಗುರುಳಿ 16 ಸೇನಾ ಯೋಧರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ. ಬೆಳಿಗ್ಗೆ ಚಾಟೆನ್‌ನಿಂದ ಥಾಂಗು ಕಡೆಗೆ ಸಾಗುತ್ತಿದ್ದ ಈ ವಾಹನವು ಮೂರು ವಾಹನಗಳ ಬೆಂಗಾವಲು ಪಡೆಯ ಭಾಗವಾಗಿತ್ತು ಮತ್ತು ಝೀಮಾ ಮಾರ್ಗದಲ್ಲಿ ವಾಹನವು ಅಪಘಾತಕ್ಕೀಡಾಯಿತು. ರಕ್ಷಣಾ ಕಾರ್ಯಾಚರಣೆಯನ್ನು ತಕ್ಷಣವೇ ಪ್ರಾರಂಭಿಸಲಾಯಿತು ಮತ್ತು ಗಾಯಗೊಂಡ ನಾಲ್ವರು ಸೈನಿಕರನ್ನು ಏರ್ ಲಿಫ್ಟ್ ಮೂಲಕ ಸ್ಥಳಾಂತರಿಸಲಾಗಿದೆ. ದುರದೃಷ್ಟವಶಾತ್, ಮೂವರು ಜೂನಿಯರ್ […]
ಕನ್ಹಯ್ಯ ಲಾಲ್ ತೇಲಿ ಹತ್ಯೆ ಪ್ರಕರಣ: 11 ಆರೋಪಿಗಳ ವಿರುದ್ದ ಚಾರ್ಜ್ ಶೀಟ್ ಸಲ್ಲಿಸಿದ ಎನ್‌ಐಎ

ನವದೆಹಲಿ: ಈ ವರ್ಷ ಜೂನ್ 28 ರಂದು ಇಬ್ಬರು ಭಯೋತ್ಪಾದಕರಿಂದ ಕನ್ಹಯ್ಯ ಲಾಲ್ ತೇಲಿ ಎಂಬ ಟೈಲರ್ ನ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಗುರುವಾರ ರಾಜಸ್ಥಾನದ ಜೈಪುರದ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ (ಆರ್‌ಸಿ-27/2022/ಎನ್‌ಐಎ/ಡಿಎಲ್‌ಐ) ಸಲ್ಲಿಸಿದೆ. ರಿಯಾಜ್ ಅಟ್ಟಾರಿ ಮತ್ತು ಗೋಸ್ ಮೊಹಮ್ಮದ್ ಎನ್ನುವ ಆರೋಪಿಗಳು ದೇಶಾದ್ಯಂತ ಜನಸಾಮಾನ್ಯರಲ್ಲಿ ಭಯ ಮತ್ತು ಆತಂಕವನ್ನು ಸೃಷ್ಟಿಸಲು ಸಾಮಾಜಿಕ ಮಾಧ್ಯಮದಲ್ಲಿ ಹತ್ಯೆಯ ವೀಡಿಯೊವನ್ನು ಪ್ರಸಾರ ಮಾಡಿದ್ದಾರೆ ಎಂದು ಸಂಸ್ಥೆ ಹೇಳಿದೆ. ಭಯೋತ್ಪಾದಕ […]
ಮುಚ್ಚಿದ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ; ಕೋವಿನ್ ನಲ್ಲಿ ಮೂಗಿನ ಲಸಿಕೆ ಇಂಕೋವಾಕ್ ಲಭ್ಯ

ಬೆಂಗಳೂರು: ಚೀನಾ ಸೇರಿದಂತೆ ವಿಶ್ವದ ಕೆಲವು ಭಾಗಗಳಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಫ್ಲ್ಯೂ ಮಾದರಿ ಮತ್ತು ತೀವ್ರ ಉಸಿರಾಟದ ಕಾಯಿಲೆಗೆ ಕಡ್ಡಾಯ ಕೋವಿಡ್ ಪರೀಕ್ಷೆಯನ್ನು ನಡೆಸಲು ಕರ್ನಾಟಕ ಸರ್ಕಾರ ಗುರುವಾರ ನಿರ್ಧರಿಸಿದೆ. ರಾಜ್ಯಕ್ಕೆ ಆಗಮಿಸುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಶೇಕಡಾ ಎರಡರಷ್ಟು ಯಾದೃಚ್ಛಿಕ ಪರೀಕ್ಷೆಯು ಕೇಂದ್ರದಿಂದ ಪರಿಷ್ಕೃತ ನಿರ್ದೇಶನಗಳವರೆಗೆ ಮುಂದುವರಿಯುತ್ತದೆ ಎಂದು ರಾಜ್ಯ ಆರೋಗ್ಯ ಸಚಿವ ಡಾ ಕೆ ಸುಧಾಕರ್ ತಿಳಿಸಿದ್ದಾರೆ. ಮುಚ್ಚಿದ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ಪಬ್‌ಗಳು, ಬಾರ್‌ಗಳು, ಕಚೇರಿಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು, ಬಸ್‌ಗಳು, […]
ಮಹಿಳೆಯರ ಉನ್ನತ ಶಿಕ್ಷಣ ನಿಷೇಧಿಸಿದ ತಾಲಿಬಾನ್: ಪರೀಕ್ಷೆ ಬಹಿಷ್ಕರಿಸಿ ಒಗ್ಗಟ್ಟು ಪ್ರದರ್ಶಿಸಿದ ವಿದ್ಯಾರ್ಥಿಗಳು

ಕಾಬುಲ್: ಅಫ್ಘಾನಿಸ್ತಾನದ ನಂಗರ್‌ಹಾರ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ತಾಲಿಬಾನ್ ಸರ್ಕಾರದ ಮಹಿಳೆಯರ ಶಿಕ್ಷಣ ನಿಷೇಧ ನಿರ್ಧಾರದ ವಿರುದ್ದ ಪ್ರತಿಭಟಿಸಿದ್ದಾರೆ. ವಿದ್ಯಾರ್ಥಿನಿಯರ ಜೊತೆ ಒಗ್ಗಟ್ಟಿನ ಪ್ರದರ್ಶನದಲ್ಲಿ ತಮ್ಮ ಪರೀಕ್ಷೆಗಳನ್ನು ಬಹಿಷ್ಕರಿಸಿ ತರಗತಿಗಳಿಂದ ಹೊರನಡೆದಿದ್ದಾರೆ. ನಂಗರ್‌ಹಾರ್ ಮತ್ತು ಕಂದಹಾರ್‌ನಲ್ಲಿ ವಿದ್ಯಾರ್ಥಿಗಳು ತಾಲಿಬಾನ್ ಆದೇಶದ ವಿರುದ್ಧ ಫಲಕಗಳನ್ನು ಪ್ರದರ್ಶಿಸಿದ್ದಾರೆ. ತಾಲಿಬಾನ್‌ನ ಉನ್ನತ ಶಿಕ್ಷಣ ಸಚಿವಾಲಯವು ಮಹಿಳಾ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳ ಮೇಲಿನ ಇತ್ತೀಚಿನ ದಬ್ಬಾಳಿಕೆಯಲ್ಲಿ ಅಫ್ಘಾನಿಸ್ತಾನದಲ್ಲಿ ಮಹಿಳೆಯರಿಗೆ ವಿಶ್ವವಿದ್ಯಾಲಯ ಶಿಕ್ಷಣದ ಮೇಲೆ ಅನಿರ್ದಿಷ್ಟಾವಧಿಯ ನಿಷೇಧವನ್ನು ಆದೇಶಿಸಿದ್ದು, ಇದು ಅಂತರರಾಷ್ಟ್ರೀಯ ಖಂಡನೆಗೆ ಕಾರಣವಾಗಿದೆ. Male […]