ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ದೊಡ್ಡ ಹೆಸರಿಸದ ದ್ವೀಪಗಳಿಗೆ ಪರಮವೀರ ಚಕ್ರ ಪುರಸ್ಕೃತರ ಹೆಸರು

ನವದೆಹಲಿ: ಪರಾಕ್ರಮ್ ದಿವಸ್ ದಿನದಂದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇಂದು ವೀಡಿಯೊ ಕಾನ್ಫರೆನ್ಸಿಂಗ್ ಮೂಲಕ 21 ಪರಮವೀರ ಚಕ್ರ ಪ್ರಶಸ್ತಿ ಪುರಸ್ಕೃತರ ಹೆಸರನ್ನು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ 21 ದೊಡ್ಡ ಹೆಸರಿಸದ ದ್ವೀಪಗಳನ್ನು ಹೆಸರಿಸುವ ಸಮಾರಂಭದಲ್ಲಿ ಭಾಗವಹಿಸಿದರು. ಕಾರ್ಯಕ್ರಮದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ದ್ವೀಪದಲ್ಲಿ ನಿರ್ಮಿಸಲಿರುವ ನೇತಾಜಿಯ ರಾಷ್ಟ್ರೀಯ ಸ್ಮಾರಕದ ಮಾದರಿಯನ್ನು ಪ್ರಧಾನಿ ಅನಾವರಣಗೊಳಿಸಿದರು. ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೆ ಇಂದು ಐತಿಹಾಸಿಕ ದಿನವಾಗಿದೆ ಎಂದ ಪ್ರಧಾನಿ ಮೋದಿ, “ಇತಿಹಾಸವನ್ನು ರಚಿಸುವಾಗ, ಭವಿಷ್ಯದ […]

ಹಿಜಾಬ್ ಅರ್ಜಿ ಆಲಿಕೆಗೆ ಸುಪ್ರೀಂ ಕೋರ್ಟ್ ನಿಂದ ತ್ರಿಸದಸ್ಯ ಪೀಠ ಸ್ಥಾಪನೆ ಸಾಧ್ಯತೆ

ನವದೆಹಲಿ: ಕಳೆದ ವರ್ಷದ ವಿಭಜಿತ ತೀರ್ಪಿನ ನಂತರ ಕರ್ನಾಟಕ ಶಾಲೆಗಳಲ್ಲಿ ಹಿಜಾಬ್ ಧರಿಸುವುದಕ್ಕೆ ಸಂಬಂಧಿಸಿದ ಪ್ರಕರಣದ ತೀರ್ಪು ನೀಡಲು ತ್ರಿಸದಸ್ಯ ಪೀಠವನ್ನು ಸ್ಥಾಪಿಸಲು ಪರಿಗಣಿಸುವುದಾಗಿ ಸುಪ್ರೀಂ ಕೋರ್ಟ್ ಸೋಮವಾರ ಹೇಳಿದೆ. ಸುಪ್ರೀಂ ಕೋರ್ಟ್‌ನ ದ್ವಿಸದಸ್ಯ ಪೀಠವು ಕಳೆದ ವರ್ಷ ಅಕ್ಟೋಬರ್ 13 ರಂದು ಹಿಜಾಬ್ ವಿವಾದದಲ್ಲಿ ವಿರುದ್ಧ ತೀರ್ಪುಗಳನ್ನು ನೀಡಿತ್ತು ಮತ್ತು ಪ್ರಕರಣದ ತೀರ್ಪು ನೀಡಲು ಸೂಕ್ತ ಪೀಠವನ್ನು ರಚಿಸುವಂತೆ ಸಿಜೆಐ ಅವರನ್ನು ಒತ್ತಾಯಿಸಿತ್ತು. ಫೆಬ್ರವರಿ 6 ರಿಂದ ರಾಜ್ಯದಲ್ಲಿ ಕೆಲವು ತರಗತಿಗಳಿಗೆ ನಿಗದಿಯಾಗಿರುವ ಪ್ರಾಯೋಗಿಕ ಪರೀಕ್ಷೆಗಳನ್ನು […]

ಲಾಸ್ ಏಂಜಲೀಸ್‌ ನಲ್ಲಿ ಚೀನೀ ನಾಗರಿಕರನ್ನು ಗುರಿಯಾಗಿಸಿ ಗುಂಡಿನ ದಾಳಿ: 10 ಜನರ ಸಾವು; ಹಲವರಿಗೆ ಗಾಯ

ಮಾಂಟೆರೆ ಪಾರ್ಕ್: ಟೆಕ್ಸಾಸ್‌ನ ಪ್ರಾಥಮಿಕ ಶಾಲೆಯಲ್ಲಿ 19 ಮಕ್ಕಳು ಮತ್ತು ಇಬ್ಬರು ಶಿಕ್ಷಕರನ್ನು ಕೊಂದ ಉವಾಲ್ಡೆ ಹತ್ಯಾಕಾಂಡದ ನಂತರದ ಅತಿ ದೊಡ್ಡ ಸಾಮೂಹಿಕ ಹತ್ಯೆ ಲಾಸ್ ಏಂಜಲೀಸ್‌ ಅನ್ನು ಬೆಚ್ಚಿ ಬೀಳಿಸಿದೆ. ಲಾಸ್ ಏಂಜಲೀಸ್‌ನ ಏಷ್ಯಾದ ಅಮೆರಿಕದ ಉಪನಗರವಾದ ಮಾಂಟೆರಿ ಪಾರ್ಕ್‌ನ ನಿವಾಸಿಗಳಿಗೆ “ಇಯರ್ ಆಫ್ ರ ರಾಬಿಟ್” ಭಾನುವಾರದಂದು ಭಯಾನಕವಾಗಿ ಆರಂಭವಾಗಿದೆ. ಇಲ್ಲಿನ ಸಾಮೂಹಿಕ ಗುಂಡಿನ ದಾಳಿಯಲ್ಲಿ 10 ಜನರು ಸಾವನ್ನಪ್ಪಿ, ಇನ್ನುಳಿದ ಹಲವರು ಗಾಯಗೊಂಡಿದ್ದಾರೆ. 60,000 ಜನರಿರುವ ಈ ನಗರದಲ್ಲಿ, ಚಾಂದ್ರಮನ ಹೊಸ ವರ್ಷವನ್ನು […]

8 ವರ್ಷ ವಯಸ್ಸಿಗೆ ಸನ್ಯಾಸ ದೀಕ್ಷೆ ತೆಗೆದುಕೊಂಡ ಸೂರತ್ ನ ಬಹುಕೋಟಿ ವಜ್ರವ್ಯಾಪಾರಿಯ ಮಗಳು

ಸೂರತ್‌: ಗುಜರಾತ್‌ನ ಶ್ರೀಮಂತ ವಜ್ರದ ವ್ಯಾಪಾರಿಯ ಎಂಟು ವರ್ಷದ ಮಗಳು ಎಲ್ಲ ಸುಖ ಸೌಕರ್ಯಗಳನ್ನು ತ್ಯಜಿಸಿ ಸನ್ಯಾಸತ್ವವನ್ನು ಸ್ವೀಕರಿಸಿದ್ದಾರೆ. ದೇವಾಂಶಿ ಸಾಂಘ್ವಿ ಅವರು ಇಂದು ಸೂರತ್‌ನಲ್ಲಿ ವಿದ್ಯುಕ್ತವಾಗಿ ದೀಕ್ಷೆ ತೆಗೆದುಕೊಳ್ಳಲಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಧನೇಶ್ ಸಾಂಘ್ವಿ ಮತ್ತು ಅವರ ಪತ್ನಿ ಅಮಿಯ ಹಿರಿಯ ಮಗಳು ದೇವಾಂಶಿ. ಇವರ ಕುಟುಂಬವು ವಿಶ್ವದ ಅತ್ಯಂತ ಹಳೆಯ ವಜ್ರ ಕಂಪನಿಗಳಲ್ಲಿ ಒಂದಾದ ಸಾಂಘ್ವಿ ಮತ್ತು ಸನ್ಸ್ ಅನ್ನು ನಡೆಸುತ್ತಿದೆ. ಪ್ರಸ್ತುತ ರೂ 100 ಕೋಟಿ ವಾರ್ಷಿಕ ವಹಿವಾಟು […]

ಹಿಂದೂ ವಿವಾಹ ಕಾಯ್ದೆಯಡಿ ಅಂತರ್ ಧರ್ಮೀಯ ಜೋಡಿಯ ವಿವಾಹಗಳು ಅಸಿಂಧು: ಸುಪ್ರೀಂಕೋರ್ಟ್

ನವದೆಹಲಿ: ಹಿಂದೂ ವಿವಾಹ ಕಾಯ್ದೆಯಡಿ ಅಂತರ್ ಧರ್ಮೀಯ ಜೋಡಿಗಳ ನಡುವಿನ ಯಾವುದೇ ವಿವಾಹವು ಅಸಿಂಧು ಮತ್ತು ಹಿಂದೂಗಳು ಮಾತ್ರ ಅದೇ ಕಾನೂನಿನ ಅಡಿಯಲ್ಲಿ ಮದುವೆಯಾಗಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. 2017ರ ಆಗಸ್ಟ್‌ನಲ್ಲಿ ತೆಲಂಗಾಣ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠ ಶುಕ್ರವಾರ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಂದಿನ ವಿಚಾರಣೆಯನ್ನು ನ್ಯಾಯಾಲಯವು ಫೆಬ್ರವರಿಗೆ ಮುಂದೂಡಿದೆ. ಅರ್ಜಿದಾರರು ಕ್ರಿಶ್ಚಿಯನ್ ಮತದವರಾಗಿದ್ದು, ದೂರುದಾರ ಮಹಿಳೆ ಹಿಂದೂ ಧರ್ಮಕ್ಕೆ ಸೇರಿದವರಾಗಿದ್ದಾರೆ. […]