ಚಿತ್ರಗಳಲ್ಲಡಗಿದೆ ಕನ್ನಡದ ಅಕ್ಷರಮಾಲೆ: ಸೃಜನಶೀಲ ಕಲಿಕಾ ವಿಧಾನ ಎಂದ ಪ್ರಧಾನಿ ಮೋದಿ

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕನ್ನಡ ಕಲಿಕೆಯ ಬಗ್ಗೆ ಕನ್ನಡಿಗರಲ್ಲೇ ನಿರುತ್ಸಾಹ ಕಂಡುಬರುತ್ತಿದೆ. ಚಿಕ್ಕ ಮಕ್ಕಳಿಗಂತೂ ಇವತ್ತು ಕನ್ನಡವೆಂದರೆ ಕಬ್ಬಿಣದ ಕಡಲೆಯಂತಾಗಿದೆ. ಇಂಗ್ಲೀಷ್ ಭಾಷಾ ವ್ಯಾಮೋಹದಿಂದಾಗಿ ಕನ್ನಡ ನಿರಂತರ ಸೊರಗುತ್ತಿದೆ. ಈ ಮಧ್ಯೆ ಟ್ವಿಟರ್ ನಲ್ಲಿ ಬಳಕೆದಾರರೊಬ್ಬರು ವಿನೂತನ ವಿಧಾನದಲ್ಲಿ ಕನ್ನಡದ ಅಕ್ಷರಮಾಲೆಯನ್ನು ಕಲಿಸಬಹುದಾದ ಚಿತ್ರವನ್ನು ಹಂಚಿಕೊಂಡಿದ್ದಾರೆ. ” 49 ರಲ್ಲಿ 46 ಅಕ್ಷರಗಳು ಚಿತ್ರಗಳ ಸುಳಿವುಗಳನ್ನು ಹೊಂದಿವೆ. ಮಕ್ಕಳಿಗೆ ಕನ್ನಡ ವರ್ಣಮಾಲೆಗಳನ್ನು ಕಲಿಸುವ ಅದ್ಭುತ ವಿಧಾನ. (ಆದರೂ ನನಗೆ ಇದರ ರಚನಕಾರರು ಗೊತ್ತಿಲ್ಲ) ನೀವು ಎಷ್ಟನ್ನು ಊಹಿಸಬಹುದು? […]
ಪಾಕಿಸ್ತಾನದ ಮಾಜಿ ಪ್ರಧಾನಿ ಪರ್ವೇಜ್ ಮುಷರಫ್ ನಿಧನ

ದುಬೈ: ಕಾರ್ಗಿಲ್ ಯುದ್ಧದ ರೂವಾರಿ, ಪಾಕಿಸ್ತಾನದ ಮಾಜಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ದೀರ್ಘಕಾಲದ ಅನಾರೋಗ್ಯದ ನಂತರ ಭಾನುವಾರ ದುಬೈ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಅವರಿಗೆ 79 ವರ್ಷವಯಸ್ಸಾಗಿತ್ತು. 1999 ರಲ್ಲಿ, ಜನರಲ್ ಮುಷರಫ್ ಆಗಿನ ಪ್ರಧಾನಿ ನವಾಜ್ ಷರೀಫ್ ಅವರನ್ನು ಅಧಿಕಾರದಿಂದ ಹೊರದಬ್ಬಿ ತಾನೇ ಪ್ರಧಾನಿ ಪಟ್ಟಕ್ಕೇರಿ ಸರ್ವಾಧಿಕಾರ ಮೆರೆದಿದ್ದರು. ಒಂಬತ್ತು ವರ್ಷಗಳ ನಂತರ, ಆಸಿಫ್ ಅಲಿ ಜರ್ದಾರಿ ನೇತೃತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಸರ್ಕಾರ ಮತ್ತು ಪ್ರತಿಪಕ್ಷ ಪಾಕಿಸ್ತಾನ್ ಮುಸ್ಲಿಂ ಲೀಗ್ (ಎನ್) ಷರೀಫ್‌ನ […]
14 ವರ್ಷಗಳ ಹಿಂದೆ ಪನ್ನಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ತಂದ ಮೊದಲ ಹುಲಿ ‘ಟಿ-1’ ಇನ್ನಿಲ್ಲ

ಪನ್ನಾ: 14 ವರ್ಷಗಳ ಹಿಂದೆ ಮಧ್ಯಪ್ರದೇಶದ ಪನ್ನಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ತಂದ ಮೊದಲ ಹುಲಿ ‘ಟಿ-1’ ತನ್ನ ಸುದೀರ್ಘ ಪಯಣವನ್ನು ಮುಗಿಸಿ, ಕೊನೆಯುಸಿರೆಳೆದಿದೆ. 2009 ರಲ್ಲಿ ವಿಶೇಷ ಯೋಜನೆಯಡಿ ಪನ್ನಾ ಹುಲಿ ಸಂರಕ್ಷಿತ ಪ್ರದೇಶಕ್ಕೆ (ಪಿಟಿಆರ್) ತರಲಾದ ಮೊದಲ ಹುಲಿ ಟಿ-1 ಒಟ್ಟು 13 ಮರಿಗಳಿಗೆ ಜನ್ಮ ನೀಡಿತ್ತು. ಮಧ್ಯಪ್ರದೇಶದಲ್ಲಿ ಹುಲಿಗಳ ಮರುಪರಿಚಯ ಯೋಜನೆಯಡಿ 14 ವರ್ಷಗಳ ಹಿಂದೆ ಬಾಂಧವಗಢ ಹುಲಿ ಸಂರಕ್ಷಿತ ಪ್ರದೇಶದಿಂದ ಈಕೆಯನ್ನು ಇಲ್ಲಿಗೆ ಕರೆತರಲಾಗಿತ್ತು. ಆಕೆ 13 ಮರಿಗಳಿಗೆ ಜನ್ಮ ನೀಡಿದ್ದು, […]
ಕಾರಿನಲ್ಲಿ ಆಕಸ್ಮಿಕ ಬೆಂಕಿ: ಗರ್ಭಿಣಿ ಮಹಿಳೆ ಮತ್ತು ಪತಿ ಸಜೀವ ದಹನ

ಕುಟ್ಟಿಯತ್ತೂರು: ಕೇರಳದ ಕುಟ್ಟಿಯತ್ತೂರು ಜಿಲ್ಲಾ ಸರ್ಕಾರಿ ಆಸ್ಪತ್ರೆ ಬಳಿ ಗುರುವಾರ ಸಂಭವಿಸಿದ ಭೀಕರ ದುರ್ಘಟನೆಯೊಂದರಲ್ಲಿ ಗರ್ಭಿಣಿ ಮಹಿಳೆ ಹಾಗೂ ಆಕೆಯ ಪತಿ ಪ್ರಯಾಣಿಸುತ್ತಿದ್ದ ಕಾರಿಗೆ ಬೆಂಕಿ ತಗುಲಿ ಸಜೀವ ದಹನರಾದ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಲಿಯಾದವರನ್ನು ಜಿಲ್ಲೆಯ ಕುಟ್ಟಿಯತ್ತೂರು ಮೂಲದ ಪ್ರಿಜಿತ್ (35) ಮತ್ತು ಅವರ ಪತ್ನಿ ರೀಷಾ (26) ಎಂದು ಗುರುತಿಸಲಾಗಿದೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ರೀಷಾಳು ಇನ್ನಿತರರೊಂದಿಗೆ ಕಾರಿನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣ […]
ಪರೀಕ್ಷಾ ಕೊಠಡಿಯಲ್ಲಿ 500 ವಿದ್ಯಾರ್ಥಿನಿಯರನ್ನು ಕಂಡು ಮೂರ್ಛೆ ಹೋದ ಹುಡುಗ: ಬಿಹಾರದಲ್ಲೊಂದು ಅಡ್ಮಿಟ್ ಕಾರ್ಡ್ ಅವಾಂತರ

ಪಟ್ನಾ: ಪರೀಕ್ಷಾ ಕೊಠಡಿಯಲ್ಲಿ 500 ವಿದ್ಯಾರ್ಥಿನಿಯರ ನಡುವೆ ಏಕಾಂಗಿಯಾಗಿದ್ದ ವಿದ್ಯಾರ್ಥಿಯೊಬ್ಬ ಪ್ರಜ್ಞೆ ತಪ್ಪಿ ಬಿದ್ದ ಪ್ರಕರಣವೊಂದು ಬಿಹಾರದಿಂದ ವರದಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಬಹಳ ಸದ್ದು ಮಾಡುತ್ತಿದೆ. 12ನೇ ತರಗತಿಯ ಮನೀಷ್ ಶಂಕರ್ ಎನ್ನುವ ಈ ವಿದ್ಯಾರ್ಥಿಯ ಪ್ರವೇಶ ಪತ್ರದಲ್ಲಿ ಆತನ ಲಿಂಗದ ಜಾಗದಲ್ಲಿ ‘ಗಂಡು’ ಬದಲಿಗೆ ‘ಹೆಣ್ಣು’ ಎಂದು ತಪ್ಪಾಗಿ ಬರೆದಿರುವುದೆ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ತಪ್ಪಾಗಿ ನಮೂದಾದ ಲಿಂಗದ ಕಾರಣದಿಂದಾಗಿ ಅವನು ಬರೇ ಹುಡುಗಿಯರೇ ತುಂಬಿದ್ದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯಬೇಕಾಗಿ ಬಂದಿದೆ. […]