ಔರಂಗಾಬಾದ್ ಮತ್ತು ಉಸ್ಮಾನಾಬಾದ್ ಇನ್ನು ಮುಂದೆ ಛತ್ರಪತಿ ಸಂಭಾಜಿ ನಗರ ಮತ್ತು ಧಾರಾಶಿವ್ ನಗರ

ಮುಂಬೈ:ಮಹಾರಾಷ್ಟ್ರದ ಔರಂಗಾಬಾದ್ ಮತ್ತು ಉಸ್ಮಾನಾಬಾದ್ ನಗರಗಳನ್ನು ಕ್ರಮವಾಗಿ ಛತ್ರಪತಿ ಸಂಭಾಜಿ ನಗರ ಮತ್ತು ಧಾರಾಶಿವ್ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಗೃಹ ಸಚಿವಾಲಯ ಶುಕ್ರವಾರ ತಿಳಿಸಿದೆ. ನಗರಗಳ ಮರುನಾಮಕರಣಕ್ಕೆ ಯಾವುದೇ ಆಕ್ಷೇಪಣೆಯಿಲ್ಲದ ಕಾರಣ ಪ್ರಸ್ತಾವನೆಯನ್ನು ಅನುಮೋದಿಸಿದೆ ಎಂದು ಸಚಿವಾಲಯ ಹೇಳಿದೆ. ಫೆಬ್ರವರಿಯಲ್ಲಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಸಿಂಗ್ ಅವರು ಒಸ್ಮಾನಾಬಾದ್ ಅನ್ನು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಬಾಂಬೆ ಹೈಕೋರ್ಟ್‌ಗೆ ತಿಳಿಸಿದ್ದರು. ಆದಾಗ್ಯೂ, ಔರಂಗಾಬಾದ್ ಅನ್ನು ಮರುನಾಮಕರಣ ಮಾಡುವ ಬಗ್ಗೆ ಇನ್ನೂ […]

ಜರ್ಮನಿಯಲ್ಲಿ 1.5 ವರ್ಷದ ಮಗುವಿಗಾಗಿ ಮೊರೆಯಿಡುತ್ತಿರುವ ಭಾರತೀಯ ದಂಪತಿಗಳು: ಟ್ವಿಟರ್ ನಲ್ಲಿ ಬಾಯ್ ಕಾಟ್ ಜರ್ಮನಿ ಟ್ರೆಂಡ್

ರ್ಲಿನ್: ಅಹಮದಾಬಾದ್ ಮೂಲದ ಪೋಷಕರಾದ ಭಾವೇಶ್ ಮತ್ತು ಧಾರಾ ಶಾ ಕಳೆದ 1.5 ವರ್ಷದಿಂದ ತಮ್ಮ ಮಗಳು ಅರಿಹಾ ನನ್ನು ವಾಪಾಸು ಕೊಡುವಂತೆ ಜರ್ಮನಿ ಸರಕಾರವನ್ನು ಅಂಗಲಾಚುತ್ತಿದ್ದಾರೆ. ಆದರೆ, ಅಲ್ಲಿನ ಮಕ್ಕಳ ರಕ್ಷಣಾ ಸಂಸ್ಥೆಯು ಪೋಷಕರಿಂದ ಮಗುವನ್ನು ಬಲವಂತವಾಗಿ ಕಿತ್ತುಕೊಂಡು ಪ್ರಕರಣವಿಲ್ಲದಿದ್ದರೂ ಮಗುವನ್ನು ಹಿಂತಿರುಗಿಸದೆ ದಿನದೂಡುತ್ತಿದೆ. ಅರಿಹಾ ತಂದೆ ಕೆಲಸದ ವೀಸಾದಲ್ಲಿ ಯುರೋಪಿಯನ್ ರಾಷ್ಟ್ರವಾದ ಜರ್ಮನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅರಿಹಾಳ ಅಜ್ಜಿ 2021ರ ಸೆಪ್ಟೆಂಬರ್‌ನಲ್ಲಿ ಆಕಸ್ಮಿಕವಾಗಿ ಮಗುವಿಗೆ ನೋವುಂಟು ಮಾಡಿದ್ದರು ಎನ್ನುವ ಕಾರಣಕ್ಕೆ […]

ಟರ್ಕಿಯಲ್ಲಿ ಮತ್ತೊಮ್ಮೆ 6.4 ತೀವ್ರತೆಯ ಭೂಕಂಪ; ಹಟಾಯ್ ಪ್ರಾಂತ್ಯದಲ್ಲಿ ಕಟ್ಟಡ ಕುಸಿತ

ಹಟಾಯ್: ಎರಡು ವಾರಗಳ ಹಿಂದೆ ದೇಶವನ್ನು ಅಪ್ಪಳಿಸಿ ಬದುಕನ್ನು ನುಚ್ಚುನೂರಾಗಿಸಿದ ಭೂಕಂಪಗಳಿಂದ ನೆಲಸಮವಾದ ಕಟ್ಟಡಗಳ ಅಡಿಯಲ್ಲಿ ಸಿಲುಕಿರುವ ಜನರ ರಕ್ಷಣಾ ಕಾರ್ಯಾಚರಣೆಯನ್ನು ಟರ್ಕಿ ಸರ್ಕಾರವು ಮುಂದುವರೆಸುತ್ತಿರುವ ಬೆನ್ನಲ್ಲೇ, ಸೋಮವಾರ ಸಂಜೆ ದೇಶದ ದಕ್ಷಿಣ ಹಟಾಯ್ ಪ್ರಾಂತ್ಯದಲ್ಲಿ ಮತ್ತೊಂದು 6.4 ತೀವ್ರತೆಯ ಕಂಪನ ಸಂಭವಿಸಿದೆ ಎಂದು ವಿಪತ್ತು ನಿರ್ವಹಣಾ ಸಂಸ್ಥೆ ಹೇಳಿದೆ. Breaking News: Another earthquake hits Turkey-Syria border. Oh my God 😢 pic.twitter.com/iG4tZMEULu — Nation's Blogger (@EmpiresNtakor) February 20, 2023 […]

ತೆರಿಗೆ ವಂಚನೆ ತನಿಖೆ: ಬಿಬಿಸಿ ಯ ದೆಹಲಿ, ಮುಂಬೈ ಕಚೇರಿಗಳಲ್ಲಿ ಆದಾಯ ತೆರಿಗೆ ಇಲಾಖೆಯಿಂದ ಸಮೀಕ್ಷೆ

ನವದೆಹಲಿ: ಆದಾಯ ತೆರಿಗೆ ಇಲಾಖೆಯ 15 ಅಧಿಕಾರಿಗಳ ತಂಡ ಮಂಗಳವಾರ ದೆಹಲಿ ಮತ್ತು ಮುಂಬೈನಲ್ಲಿರುವ ಬಿಬಿಸಿ ಕಚೇರಿಗಳಲ್ಲಿ ಸಮೀಕ್ಷೆ ನಡೆಸಿತು. ಅಂತಾರಾಷ್ಟ್ರೀಯ ತೆರಿಗೆ ಮತ್ತು ವರ್ಗಾವಣೆ ಬೆಲೆ ಅಕ್ರಮಗಳ ಆರೋಪಗಳಿಗೆ ಸಂಬಂಧಿಸಿದಂತೆ ಬಿಬಿಸಿ ಕಚೇರಿಗಳಲ್ಲಿ ಶೋಧ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇಲಾಖೆಯು ಕಂಪನಿಯ ವ್ಯವಹಾರ ಕಾರ್ಯಾಚರಣೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಮತ್ತು ಅದರ ಭಾರತೀಯ ಅಂಗಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ. ಸಮೀಕ್ಷೆಯ ಭಾಗವಾಗಿ, ಆದಾಯ ತೆರಿಗೆ ಇಲಾಖೆಯು ಕಂಪನಿಯ […]

ಇಂಡಿಯಾ ಗೇಟ್ ಅನ್ನು ಗೇಟ್ ವೇ ಆಫ್ ಇಂಡಿಯಾಗೆ ಬೆಸೆಯಲಿರುವ 1,386 ಕಿಮೀ ಉದ್ದದ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ

ನವದೆಹಲಿ: ಇಂಡಿಯಾ ಗೇಟ್ ಅನ್ನು ಗೇಟ್ ವೇ ಆಫ್ ಇಂಡಿಯಾಗೆ ಬೆಸೆಯುವ 1,386 ಕಿಮೀ ಉದ್ದದ ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ವೇ ಭಾರತದ ರಾಷ್ಟ್ರೀಯ ರಾಜಧಾನಿ ದೆಹಲಿಯನ್ನು ವಾಣಿಜ್ಯ ರಾಜಧಾನಿ ಮುಂಬೈಗೆ ಸಂಪರ್ಕಿಸಲಿದೆ. ಈ ಎಕ್ಸ್‌ಪ್ರೆಸ್‌ವೇ ದೆಹಲಿ ಮತ್ತು ಮುಂಬೈ ನಡುವಿನ ಪ್ರಯಾಣದ ಸಮಯವನ್ನು 12 ಗಂಟೆಗಳಿಗೆ ಕಡಿತಗೊಳಿಸುತ್ತದೆ. ಎಕ್ಸ್‌ಪ್ರೆಸ್‌ವೇ ನಿರ್ಮಾಣಕ್ಕಾಗಿ ಸುಮಾರು 12 ಲಕ್ಷ ಟನ್ ಉಕ್ಕು ಬಳಸಲಾಗುತ್ತದೆ ಮತ್ತು ಈ ಯೋಜನೆಯು 10 ಕೋಟಿ ಮಾನವ ದಿನಗಳ ಉದ್ಯೋಗವನ್ನು ಸೃಷ್ಟಿಸಲಿದೆ. ನಿರ್ಮಾಣಕ್ಕೆ […]