ಆರ್‌ಎಸ್‌ಎಸ್ ನಾಯಕ ರುದ್ರೇಶ್ ಕೊಲೆಗಾರ ಮೊಹಮ್ಮದ್ ಘೌಸ್ ನಯಾಜಿ ಬಂಧನ: ದ. ಆಫ್ರಿಕಾದಿಂದ ಭಾರತಕ್ಕೆ ಹಸ್ತಾಂತರ

ನವದೆಹಲಿ: ಬೆಂಗಳೂರಿನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪದಾಧಿಕಾರಿಯನ್ನು ಕೊಂದ ಆರೋಪಿ ಮೊಹಮ್ಮದ್ ಘೌಸ್ ನಯಾಜಿಯನ್ನು ಬಂಧಿಸಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಸ್ತಾಂತರಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ನಿಷೇಧಿತ ಉಗ್ರಗಾಮಿ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸಕ್ರಿಯ ಸದಸ್ಯ ನಯಾಜಿ 2016ರಲ್ಲಿ ಬೆಂಗಳೂರಿನಲ್ಲಿ ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಆರ್ ರನ್ನು ಸಂಚು ರೂಪಿಸಿ ಹತ್ಯೆಗೈದಿದ್ದ. 35 ವರ್ಷದ ರುದ್ರೇಶ್ ಆರ್‌ಎಸ್‌ಎಸ್‌ನ ಶಿವಾಜಿನಗರ ಶಾಖೆಯ ಮಂಡಲ ಅಧ್ಯಕ್ಷ ಮತ್ತು ಬಿಜೆಪಿ ಶಿವಾಜಿನಗರ ಕಾರ್ಯದರ್ಶಿಯಾಗಿದ್ದರು. ಘಟನೆಯ ನಂತರ, […]

ರಷ್ಯಾದ “ಡ್ಯಾಡಿ” ಬಾಟ್ಸ್ ಅನ್ನು ಸೋಲಿಸಿದ ಭಾರತದ “ಗಾಡ್‌ಸ್ಪೀಡ್”: ರೋಬೋಟ್ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ ಡಿಎಸ್ ರೋಬೋಟಿಕ್ಸ್

ಮಾಸ್ಕೋ: ಕೌಶಲ್ಯ ಮತ್ತು ಕಾರ್ಯತಂತ್ರದ ಅದ್ಭುತ ಪ್ರದರ್ಶನದಲ್ಲಿ, ಭಾರತದ ಡಿಎಸ್ ರೋಬೋಟಿಕ್ಸ್ ರೋಬೋಟ್ ಯುದ್ಧದಲ್ಲಿ ರಷ್ಯಾದ ಅತ್ಯುತ್ತಮ ತಂಡ ಡ್ಯಾಡಿ ಬಾಟ್ಸ್ ಅನ್ನು ಸೋಲಿಸಿ ವಿಜಯಶಾಲಿಯಾಗಿ ಹೊರಹೊಮ್ಮಿದೆ. ರಷ್ಯಾದಲ್ಲಿ ನಡೆದ ‘ಗೇಮ್ಸ್ ಆಫ್ ದಿ ಫ್ಯೂಚರ್’ ಪಂದ್ಯಾವಳಿಯಲ್ಲಿ ಮಾಸ್ಕೋದ ಟರ್ಬೊಮೆಕಾಟ್ರೊನಿಕಿ ನಂತರದ ಸ್ಥಾನವನ್ನು ಗಳಿಸಿದ ರಷ್ಯಾದ ಡ್ಯಾಡಿ ಬಾಟ್ಸ್ ತಂಡವನ್ನು ಹಿಂದಿಕ್ಕಿ ಭಾರತದ ಡಿಎಸ್ ರೋಬೋಟಿಕ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಫಿನಾಲೆಯಲ್ಲಿ, ಭಾರತದ ಡಿಎಸ್ ರೋಬೋಟಿಕ್ಸ್, ತಮ್ಮ “ಗಾಡ್‌ಸ್ಪೀಡ್” ಎಂಬ ರೋಬೋಟ್‌ನೊಂದಿಗೆ, ರಷ್ಯಾದ “ಡ್ಯಾಡಿ” ಎಂಬ […]

ಮಹೀಂದ್ರಾ ಥಾರ್‌ ಎಸ್‌ಯುವಿಯ ಅರ್ಥ್‌ ಎಡಿಷನ್ ಬಿಡುಗಡೆ: 15.40 ಲಕ್ಷ ರೂ. ನಿಂದ ಆರಂಭ

ಭಾರತದ ದೇಶೀಯ ವಾಹನ ತಯಾರಿಕಾ ಸಂಸ್ಥೆಗಳ ದಿಗ್ಗಜ ಮಹೀಂದ್ರಾ ಆಂಡ್ ಮಹೀಂದ್ರಾ ತನ್ನ ಜನಪ್ರಿಯ ಥಾರ್‌ ಎಸ್‌ಯುವಿಯ ಅರ್ಥ್‌(Thar Earth) ಎಡಿಷನ್ ಅನ್ನು ಬಿಡುಗಡೆ ಮಾಡಿದೆ. ಇದು ಥಾರ್‌ ಡೆಸರ್ಟ್‌ನಿಂದ ಸ್ಫೂರ್ತಿ ಪಡೆದಿದೆ ಹಾಗೂ ಈ ಎಸ್‌ಯುವಿ ಡೆಸರ್ಟ್ ಫ್ಯೂರಿ ಸ್ಯಾಟಿನ್ ಮ್ಯಾಟ್ ಪೇಂಟ್ ಸ್ಕೀಮ್‌ ಅನ್ನು ಹೊಂದಿದೆ ಎಂದು ಮಹೀಂದ್ರಾ (Mahindra & Mahindra) ಹೇಳಿಕೊಂಡಿದೆ. ಥಾರ್‌ ಅರ್ಥ್‌ ಎಡಿಷನ್ ನಾಲ್ಕು ರೂಪಾಂತರಗಳಲ್ಲಿ ಲಭ್ಯವಿದ್ದು, ಇದರ ಎಕ್ಸ್‌ ಶೋರೂಮ್ ಬೆಲೆ 15.40 ಲಕ್ಷ ರೂಪಾಯಿಯಿಂದ ಪ್ರಾರಂಭವಾಗುತ್ತದೆ. […]

ಚುನಾವಣಾ ಬೂತ್ ಗಳಲ್ಲಿ ವೀಡಿಯೊ ರೆಕಾರ್ಡಿಂಗ್ ಶೇ 100 ಕ್ಕೆ ಹೆಚ್ಚಿಸಲು ಚುನಾವಣಾ ಆಯೋಗಕ್ಕೆ ಬಿಜೆಪಿ ಮನವಿ

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯ (Loksabha Election) ವೇಳೆ ಎಲ್ಲಾ ಮತಗಟ್ಟೆಗಳಲ್ಲಿ ನಡೆಯುವ ಮತದಾನ ಪ್ರಕ್ರಿಯೆಯನ್ನು ವಿಡಿಯೋಗ್ರಾಫ್ ಮಾಡುವಂತೆ ಬಿಜೆಪಿಯು ಚುನಾವಣಾ ಆಯೋಗವನ್ನು(ECI) ಒತ್ತಾಯಿಸಿದೆ. ಬುಧವಾರದಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ನೇತೃತ್ವದ ಪಕ್ಷದ ನಿಯೋಗವು ಈ ವಿಚಾರವಾಗಿ ನವದೆಹಲಿಯಲ್ಲಿ ಆಯೋಗವನ್ನು ಭೇಟಿ ಮಾಡಿದೆ. ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ವೈಷ್ಣವ್, ಮುಂಬರುವ ಚುನಾವಣೆಯಲ್ಲಿ ಬೂತ್‌ಗಳಲ್ಲಿ ಮಾಡುವ ವೀಡಿಯೊ ರೆಕಾರ್ಡಿಂಗ್ ಪ್ರಮಾಣವನ್ನು ಶೇಕಡಾ 50 ರಿಂದ 100 ಕ್ಕೆ ಹೆಚ್ಚಿಸಬೇಕು ಎಂದು ಚುನಾವಣಾ ಸಂಸ್ಥೆಯನ್ನು ಒತ್ತಾಯಿಸಿದ್ದೇವೆ. ಮತಗಟ್ಟೆಗಳಲ್ಲಿ […]

ಸಂದೇಶಖಾಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿ ಟಿಎಂಸಿ ನಾಯಕ ಶೇಖ್ ಷಹಜಹಾನ್ ಬಂಧನ

ಕೋಲ್ಕತ್ತಾ: ಸಂದೇಶಖಾಲಿ ಪ್ರಕರಣದ ಪ್ರಮುಖ ಆರೋಪಿ ತೃಣಮೂಲ ಕಾಂಗ್ರೆಸ್ ನಾಯಕ ಶೇಖ್ ಷಹಜಹಾನ್ ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶೇಖ್ ಷಹಜಹಾನ್ ಮತ್ತು ಆತನ ಸಹಚರರು ಸಂದೇಶಖಾಲಿಯಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಭೂಕಬಳಿಕೆಯ ಆರೋಪ ಹೊಂದಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯಲ್ಲಿ ಶೇಖ್ ಷಹಜಹಾನ್ ನನ್ನು ಬಂಗಾಳದ ವಿಶೇಷ ಪೊಲೀಸ್ ತಂಡವು ಮಧ್ಯರಾತ್ರಿ ಬಂಧಿಸಿದೆ ಎಂದು ಮಾಧ್ಯಮ ವರದಿ ಹೇಳಿದೆ. ಈತ ಕಳೆದ 55 ದಿನಗಳಿಂದ ಪರಾರಿಯಾಗಿದ್ದ. ಬಂಧನದ ನಂತರ, ಈತನನ್ನು ಬಸಿರ್ಹತ್ […]