ಮನ್ನಾರ್ ಕೊಲ್ಲಿಯಲ್ಲಿ 20 ಕೋಟಿ ರೂ. ಮೌಲ್ಯದ 33 ಕೆಜಿ ಚಿನ್ನ ವಶ: ಭಾರತೀಯ ಕೋಸ್ಟ್ ಗಾರ್ಡ್- ಕಂದಾಯ- ಗುಪ್ತಚರ ಇಲಾಖೆ ಜಂಟಿ ಕಾರ್ಯಾಚರಣೆ

ಚೆನ್ನೈ: ಭಾರತೀಯ ಕೋಸ್ಟ್ ಗಾರ್ಡ್ ಮತ್ತು ಕಂದಾಯ- ಗುಪ್ತಚರ ನಿರ್ದೇಶನಾಲಯ ಗುರುವಾರ ಜಂಟಿ ಕಾರ್ಯಾಚರಣೆ ನಡೆಸಿದ್ದು, ಮನ್ನಾರ್ ಕೊಲ್ಲಿ ಪ್ರದೇಶದಲ್ಲಿ ಎರಡು ಮೀನುಗಾರಿಕಾ ದೋಣಿಗಳಿಂದ ಸುಮಾರು ₹20.2 ಕೋಟಿ ಮೌಲ್ಯದ 32.6 ಕೆಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಈ ಚಿನ್ನವು ಶ್ರೀಲಂಕಾದಿಂದ ಭಾರತಕ್ಕೆ ಕಳ್ಳಸಾಗಣೆಯಾಗುತ್ತಿತ್ತು ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಭಾರತೀಯ ಕೋಸ್ಟ್ ಗಾರ್ಡ್‌ನ ಡೆಪ್ಯುಟಿ ಡೈರೆಕ್ಟರ್ ಜನರಲ್ (ಕಾರ್ಯಾಚರಣೆ) ಆಗಿರುವ ಇನ್ಸ್‌ಪೆಕ್ಟರ್ ಜನರಲ್ ಮನೀಶ್ ಪಾಠಕ್ ಮಾಹಿತಿ ನೀಡಿ, “ಡಿಆರ್‌ಐನಿಂದ ನಿರ್ದಿಷ್ಟ ಮಾಹಿತಿಯ ಆಧಾರದ […]

ಪುರುಷರ ಜೂನಿಯರ್ ಏಷ್ಯಾ ಕಪ್ ಹಾಕಿ ಫೈನಲ್: 2-1 ಗೋಲುಗಳಿಂದ ಪಾಕಿಸ್ತಾನವನ್ನು ಮಣಿಸಿ ಪ್ರಶಸ್ತಿ ಗೆದ್ದ ಭಾರತ

ಒಮಾನ್‌ನ ಸಲಾಲಾದಲ್ಲಿ ಗುರುವಾರ ನಡೆದ ಪುರುಷರ ಜೂನಿಯರ್ ಏಷ್ಯಾ ಕಪ್ 2023 ರ ಫೈನಲ್‌ನಲ್ಲಿ ಭಾರತೀಯ ಹಾಕಿ ತಂಡವು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ 2-1 ಅಂತರದ ಗೆಲುವು ಸಾಧಿಸಿದೆ. ಸಲಾಲಾ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಸಹಸ್ರಾರು ಪ್ರೇಕ್ಷಕರ ಮುಂದೆ ಆಡಿದ ಎರಡೂ ತಂಡಗಳು ಆರಂಭದಿಂದಲೂ ಒಬ್ಬರಿಗೊಬ್ಬರು ಸಮಬಲದ ಪೈಪೋಟಿ ನೀಡಿದ್ದರು. ಆದರೆ ಆಟದ13 ನೇ ನಿಮಿಷದಲ್ಲಿ ಅಂಗದ್ ಬೀರ್ ಸಿಂಗ್ ಅವರ ಸ್ಟ್ರೈಕ್ ಭಾರತಕ್ಕೆ ಪ್ರಶಸ್ತಿ ಗೆಲ್ಲಲು ಸಹಾಯಕವಾಯಿತು. ಪುರುಷರ ಜೂನಿಯರ್ ಏಷ್ಯಾ ಕಪ್ ಹಾಕಿ 2023 […]

ಸೇವಾವಲಯದಿಂದಾಗಿ ಚತುರ್ಥ ತ್ರೈಮಾಸಿಕದಲ್ಲಿ ಶೇ. 6.1 ಜಿಡಿಪಿ ದಾಖಲಿಸಿದ ಭಾರತ: ಪೂರ್ಣ ವರ್ಷದ ಬೆಳವಣಿಗೆ 7.2 ಶೇ ಸಾಧ್ಯತೆ

ನವದೆಹಲಿ: ಭಾರತದ ಒಟ್ಟು ದೇಶೀಯ ಉತ್ಪನ್ನ (GDP) 2023 ರ ಜನವರಿ-ಮಾರ್ಚ್‌ನಲ್ಲಿ ನಿರೀಕ್ಷಿತಕ್ಕಿಂತ ಹೆಚ್ಚಿನ ಬೆಳವಣಿಗೆಯ ದರ ಅಂದರೆ 6.1 ಶೇಕಡಾ ಗಳಿಸಿದ್ದು ಇದು 2022-23 ರ ಪೂರ್ಣ ವರ್ಷದ ಬೆಳವಣಿಗೆಯ ಅಂದಾಜನ್ನು 7.2 ಶೇಕಡಾಕ್ಕೆ ತಳ್ಳಲಿದೆ ಎಂದು ಬುಧವಾರ ರಾಷ್ಟ್ರೀಯ ಅಂಕಿಅಂಶ ಕಚೇರಿ ಬಿಡುಗಡೆ ಮಾಡಿದ ಮಾಹಿತಿ ತಿಳಿಸಿದೆ. ಇದು 2022-23 ವರ್ಷಕ್ಕೆ ಕಚೇರಿಯ ಶೇ.7 ಬೆಳವಣಿಗೆ ದರದ ಮುಂಗಡ ಅಂದಾಜಿನ ಪ್ರತಿಶತಕ್ಕಿಂತ ಹೆಚ್ಚಾಗಿದೆ. ನಿರ್ಮಾಣ, ವ್ಯಾಪಾರ, ಹೋಟೆಲ್‌ಗಳು, ಸಾರಿಗೆ ವಲಯಗಳ ನೇತೃತ್ವದ ಸೇವಾ ವಲಯದ […]

19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ 83 ರೂಪಾಯಿಗಳಷ್ಟು ಕಡಿತ

ನವದೆಹಲಿ: ಇಂಡಿಯನ್ ಆಯಿಲ್ 19 ಕೆ.ಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಸುಮಾರು 83 ರೂಪಾಯಿಗಳಷ್ಟು ಕಡಿತಗೊಳಿಸಿದೆ. ತನ್ನ ವೆಬ್‌ಸೈಟ್‌ನಲ್ಲಿ ಸುದ್ದಿಯನ್ನು ಪ್ರಕಟಿಸಿದ ತೈಲ ಮಾರುಕಟ್ಟೆ ಕಂಪನಿಯು ಹೊಸ ಬೆಲೆಗಳು ಜೂನ್ 1 ರಿಂದ ಅನ್ವಯವಾಗಲಿದೆ ಎಂದು ಹೇಳಿದೆ. ಆದಾಗ್ಯೂ ದೇಶೀಯ ಎಲ್‌ಪಿಜಿ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಅದೇ ರೀತಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ವರ್ಷ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದ ನಂತರ ಅಂತರಾಷ್ಟ್ರೀಯ ತೈಲ ಬೆಲೆಗಳು ಏರಿದಾಗ […]

ದೆಹಲಿ ಅಬಕಾರಿ ನೀತಿ ಪ್ರಕರಣ: ಮನೀಶ್ ಸಿಸೋಡಿಯಾ ಜಾಮೀನು ಅರ್ಜಿ ತಿರಸ್ಕರಿಸಿದ ದೆಹಲಿ ಹೈಕೋರ್ಟ್

ನವದೆಹಲಿ: ದೆಹಲಿ ಸರ್ಕಾರದ ಅಬಕಾರಿ ನೀತಿಯಲ್ಲಿ ಹಗರಣ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳದ (ಸಿಬಿಐ) ತನಿಖೆಗೆ ಸಂಬಂಧಿಸಿ ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ಮಂಗಳವಾರ ತಿರಸ್ಕರಿಸಿದೆ. ನ್ಯಾಯಮೂರ್ತಿ ದಿನೇಶ್ ಕುಮಾರ್ ಶರ್ಮಾ ಅವರ ಏಕಸದಸ್ಯ ಪೀಠವು, ಸಿಸೋಡಿಯಾ ವಿರುದ್ದದ ಆರೋಪಗಳು “ಗಂಭೀರ ಸ್ವರೂಪದ್ದಾಗಿವೆ” ಎಂದು ಗಮನಿಸಿ ಜಾಮೀನು ನಿರಾಕರಿಸಿದೆ. “ಅರ್ಜಿದಾರರ ವಿರುದ್ಧದ ಆರೋಪಗಳು ತುಂಬಾ ಗಂಭೀರ ಸ್ವರೂಪದ್ದಾಗಿವೆ. ಅಬಕಾರಿ ನೀತಿಯನ್ನು ಸೌತ್ ಗ್ರೂಪ್‌ನ ನಿದರ್ಶನದಲ್ಲಿ ರಚಿಸಲಾಗಿದೆ ಮತ್ತು […]