ದಿವಾಳಿ ಪಾಕಿಸ್ತಾನಕ್ಕೆ ನೆರೆಹೊರೆ ಕಿರಿಕಿರಿ: ಅಫಘಾನಿಸ್ಥಾನದಿಂದ ನುಸುಳುಕೋರ ಬಾಧೆ; ವಿದ್ಯುತ್ ಬಿಲ್ ಬಾಕಿ ಪಾವತಿಗೆ ದುಂಬಾಲು ಬಿದ್ದ ಚೀನಾ

ಇಸ್ಲಾಮಾಬಾದ್: ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನದ ನಂತರ ಮೇ 9 ರಂದು ದೇಶವನ್ನು ಬೆಚ್ಚಿಬೀಳಿಸಿದ ಭಾರೀ ಹಿಂಸಾಚಾರದ ಹಿನ್ನೆಲೆಯಲ್ಲಿ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಅಕ್ರಮವಾಗಿ ತಂಗಿರುವ ಆಫ್ಘನ್ ಪ್ರಜೆಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಪಾಕಿಸ್ತಾನದ ಆಂತರಿಕ ಸಚಿವಾಲಯ ನಿರ್ಧರಿಸಿದೆ. ಪಾಕ್ ನ ವಿದೇಶಿ ಕಾಯಿದೆಯಡಿಯಲ್ಲಿ ಈಗ ವಿಚಾರಣೆಗೆ ಒಳಪಟ್ಟಿರುವ 200 ಕ್ಕೂ ಹೆಚ್ಚು ಆಫ್ಘನ್ನರನ್ನು ಪೊಲೀಸರು ಬಂಧಿಸಿದ್ದಾರೆ. ದೇಶದ ಆಂತರಿಕ ಸಚಿವಾಲಯವು ಇಸ್ಲಾಮಾಬಾದ್‌ನಲ್ಲಿರುವ ಎಲ್ಲಾ ಆಫ್ಘನ್ ವಸಾಹತುಗಳ ಲೆಕ್ಕಪರಿಶೋಧನೆಯನ್ನು ಬಯಸುತ್ತಿದೆ ಎನ್ನಲಾಗಿದ್ದು ಇದು ನೆರೆಯ […]
ಕೇಂದ್ರ ವನ ಧನ್ ಯೋಜನೆಯ ಉಪಕ್ರಮದಡಿ ಮಾರುಕಟ್ಟೆಗೆ ಬರಲಿದೆ ಮಾಲವೇದನ್ ಬುಡಕಟ್ಟು ಜನಾಂಗ ತಯಾರಿಸುವ ಜೇನು ನೆಲ್ಲಿಕಾಯಿ

ತಿರುವನಂತಪುರ: ಸ್ಥಳೀಯ ಸಮುದಾಯವನ್ನು ಅದರಲ್ಲೂ ವಿಶೇಷವಾಗಿ ಬುಡಕಟ್ಟು ಜನರನ್ನು ಒಳಗೊಳ್ಳುವ ದೃಷ್ಟಿಯಿಂದ, ಕೇಂದ್ರ ಸರ್ಕಾರವು ವನ್ ಧನ್ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಅಡಿಯಲ್ಲಿ ಬುಡಕಟ್ಟು ಜನಾಂಗದವರು ಉದ್ಯಮಿಗಳಾಗುವ ಮೂಲಕ ಆರ್ಥಿಕವಾಗಿ ಸಬಲರಾಗಲು ಸರ್ಕಾರವು ಸಹಾಯ ಮಾಡುತ್ತಿದೆ. ಈ ಯೋಜನೆಯ ಅಂತರ್ಗತ ಇದೀಗ ಕೇರಳದ ರನ್ನಿ ಪ್ರದೇಶದ ಮಾಲವೇದನ್ ಬುಡಕಟ್ಟು ಜನಾಂಗದವರು ತಯಾರಿಸಿದ ಜನಪ್ರಿಯ ಜೇನು ನೆಲ್ಲಿಕಾಯಿ ಕೇರಳ ರಾಜ್ಯದಾದ್ಯಂತ ಲಭ್ಯವಿರಲಿದೆ. ಚಿತ್ತಾರದ ಓಲಿಕಲ್ಲು ಕುಗ್ರಾಮದಲ್ಲಿ ವಾಸವಾಗಿರುವ ಈ ಬುಡಕಟ್ಟು ಜನಾಂಗದವರು ಹಲವು ವರ್ಷಗಳಿಂದ ತಯಾರಿಸುವ ಈ […]
ಮುಂಬೈ : ಭಾರತದ ಪ್ರಪ್ರಥಮ ಸಮುದ್ರದೊಳಗಿನ ರೈಲ್ವೆ ಸುರಂಗದ ಕೆಲಸ ಶೀಘ್ರದಲ್ಲೇ ಪ್ರಾರಂಭ

ಮುಂಬೈ: ಇಲ್ಲಿನ ಥಾಣೆ ಖಾರಿ ಮೂಲಕ 21 ಕಿಮೀ ಉದ್ದದ ಸುರಂಗ ನಿರ್ಮಾಣಕ್ಕಾಗಿ ನ್ಯಾಷನಲ್ ಹೈ-ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ (ಎನ್‌ಎಚ್‌ಎಸ್‌ಆರ್‌ಸಿಎಲ್) ಅಫ್ಕಾನ್ಸ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್‌ನೊಂದಿಗೆ ಗುರುವಾರ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಭಾರತದ ಮೊದಲ ಸಮುದ್ರದೊಳಗಿನ 7ಕಿಮೀ ಉದ್ದದ ರೈಲ್ವೆ ಸುರಂಗದ ಕೆಲಸ ಶೀಘ್ರದಲ್ಲೇ ಪ್ರಾರಂಭವಾಗುವ ನಿರೀಕ್ಷೆಯಿದೆ. ಈ ಸುರಂಗವು ಮುಂಬೈ-ಅಹಮದಾಬಾದ್ ಬುಲೆಟ್ ಟ್ರೈನ್ ಯೋಜನೆಯ ಭಾಗವಾಗಿದೆ. ಥಾಣೆ ಖಾರಿಯಲ್ಲಿ ದೇಶದ ಮೊದಲ ಸಮುದ್ರದೊಳಗಿನ ಅವಳಿ-ರೈಲು ಸುರಂಗವನ್ನು ಒಳಗೊಂಡಿರುವ 21 ಕಿಮೀ ಸುರಂಗದ ನಿರ್ಮಾಣವು ಮುಂಬೈ-ಅಹಮದಾಬಾದ್ ಹೈಸ್ಪೀಡ್ […]
ಅಮೆರಿಕದ COVID ಸಂಯೋಜಕ ಹುದ್ದೆಯಿಂದ ಡಾ.ಆಶಿಶ್ ಝಾ ಮರಳಿ ಡೀನ್ ಹುದ್ದೆಗೆ

ಷಿಂಗ್ಟನ್ (ಅಮೆರಿಕ): ಭಾರತೀಯ – ಅಮೆರಿಕನ್ ವೈದ್ಯ ಡಾ. ಆಶಿಶ್ ಝಾ ಅವರು ಜೂನ್ ಅಂತ್ಯದ ವೇಳೆಗೆ ತಮ್ಮ ಹುದ್ದೆ COVID-19 ಸಂಯೋಜಕ ಹುದ್ದೆಯನ್ನು ತೊರೆದು, ಹಿಂದಿನ ಡೀನ್ ಹುದ್ದೆಗೆ ಮರಳಲಿದ್ದಾರೆ ಎಂದು ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ. ಅಮೆರಿಕದ COVID-19 ಸಂಯೋಜಕ (response coordinator) ಭಾರತೀಯ – ಅಮೆರಿಕನ್ ವೈದ್ಯ ಡಾ ಆಶಿಶ್ ಝಾ ಅವರು ಜೂನ್ ಅಂತ್ಯದ ವೇಳೆಗೆ ತಮ್ಮ ಹುದ್ದೆಯನ್ನು ತೊರೆಯಲಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ. 52 […]
ಕರ್ನಾಟಕದ ಗ್ರಾಮವೂ ಈ ಪಟ್ಟಿಯಲ್ಲಿದೆ – ಭಾರತದ 10 ಸುಂದರ ಹಳ್ಳಿಗಳಿಗೆ ಭೇಟಿ ಕೊಡಲಿದ್ದಾರೆ ಆನಂದ್ ಮಹೀಂದ್ರಾ

ಅವರು ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಭಾರತದ 10 ಅತ್ಯಂತ ಸುಂದರವಾದ ಹಳ್ಳಿಗಳನ್ನು ಪಟ್ಟಿ ಮಾಡಲಾಗಿದೆ. ಹಿಮಾಚಲ ಪ್ರದೇಶದ ಕಲ್ಪಾ ಹಳ್ಳಿಯಿಂದ ಮೇಘಾಲಯದ ಮಾವ್ಲಿನ್ನಾಂಗ್‌ವರೆಗಿನ ಹಳ್ಳಿಗಳ ಚಿತ್ರಗಳು ಈ ಲಿಸ್ಟ್ನಲ್ಲಿದೆ.ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಶೇರ್ ಮಾಡಿರುವ ಸುಂದರ 10 ಹಳ್ಳಿಗಳ ಲಿಸ್ಟ್ ನೆಟ್ಟಿಗರ ಗಮನ ಸೆಳೆದಿದೆ. ಉದ್ಯಮಿ ಆನಂದ್ ಮಹೀಂದ್ರಾ ಅವರು ಕಲರ್ಸ್ ಆಫ್ ಭಾರತ್ಎಂಬ ಟ್ವಿಟರ್ ಪೇಜ್ ಪೋಸ್ಟ್ ಅನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ ನೀವು ಕೇವಲ ಪ್ರವಾಸಿ ತಾಣಗಳಿಗೆ ಭೇಟಿ ಕೊಡುವುದು ಮಾತ್ರವಲ್ಲದೇ, […]