ಕೆಟ್ಟ ಹವಾಮಾನದಿಂದಾಗಿ ಪಾಕಿಸ್ತಾನದ ವಾಯುಪ್ರದೇಶಕ್ಕೆ ತೆರಳಿದ್ದ ಇಂಡಿಗೋ ವಿಮಾನ!

ನವದೆಹಲಿ: ಅಮೃತಸರದಿಂದ ವಿಮಾನವು ಸುಮಾರು ರಾತ್ರಿ 8 ಗಂಟೆಗೆ ಹೊರಟಿತ್ತು. ಪಾಕಿಸ್ತಾನದ ವಾಯುಪ್ರದೇಶಕ್ಕೆ ಸ್ವಲ್ಪ ಸಮಯದವರೆಗೆ ದಾರಿ ತಪ್ಪಿದ ನಂತರ ಸುಮಾರು ರಾತ್ರಿ 9:40 ಗಂಟೆಗೆ ಅಹಮದಾಬಾದ್‌ನಲ್ಲಿ ಸುರಕ್ಷಿತವಾಗಿ ಇಳಿಯಿತು. ಕೆಟ್ಟ ಹವಾಮಾನದಿಂದಾಗಿ ಅಟ್ಟಾರಿಯಿಂದ ಪಾಕಿಸ್ತಾನದ ವಾಯುಪ್ರದೇಶಕ್ಕೆ ವಿಮಾನದ ವಿಚಲನವನ್ನು ತೆಗೆದುಕೊಳ್ಳಬೇಕಾಯಿತು ಎಂದು ಇಂಡಿಗೋ ವಿಮಾಯಯಾನ ಸಂಸ್ಥೆ ತನ್ನ ಹೇಳಿಕೆ ಬಿಡುಗಡೆ ಮಾಡಿದೆ. ಶನಿವಾರ ಪಂಜಾಬ್ನ ಅಮೃತಸರ ವಿಮಾನ ನಿಲ್ದಾಣದಿಂದ ಗುಜರಾತ್ನ ಅಹಮದಾಬಾದ್ಗೆ ಇಂಡಿಗೋ ವಿಮಾನ- 6ಇ-645 ಹಾರಾಟ ಆರಂಭಿಸಿತ್ತು. ಆದರೆ, ಕೆಟ್ಟ ಹವಾಮಾನದಿಂದಾಗಿ ಪಾಕಿಸ್ತಾನದ ವಾಯುಪ್ರದೇಶಕ್ಕೆ […]
ಮುಂದಿನ 6 ಗಂಟೆ ಗುಡುಗು ಸಹಿತ ಮಳೆ ಸಾಧ್ಯತೆ :ಬಿಪೊರ್‌ಜಾಯ್ ಚಂಡಮಾರುತ ತೀವ್ರ, ಉತ್ತರ ದಿಕ್ಕಿನತ್ತ ಸಂಚಾರ

ನವದೆಹಲಿ: ತೀವ್ರಗೊಂಡಿರುವ ಬಿಪೊರ್‌ಜಾಯ್ ಚಂಡಮಾರುತ ಪೂರ್ವ ಕೇಂದ್ರ ಅರಬ್ಬಿ ಸಮುದ್ರ ಭಾಗದಲ್ಲಿ ನೆಲೆಗೊಂಡು ಉತ್ತರದ ಕಡೆಗೆ ಚಲಿಸುತ್ತಿದೆ. ಗಂಟೆಗೆ 5 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದೆ. ಮುಂದಿನ 6 ಗಂಟೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪೂರ್ವ-ಮಧ್ಯ ಅರಬ್ಬಿ ಸಮುದ್ರದ ಮೇಲೆ ಸೃಷ್ಟಿಯಾಗಿರುವ ಅತ್ಯಂತ ತೀವ್ರವಾದ ಚಂಡಮಾರುತ ‘ಬಿಪೊರ್‌ಜಾಯ್’ ಗಂಟೆಗೆ 5 ಕಿ.ಮೀ ವೇಗದಲ್ಲಿ ದೇಶದ ಉತ್ತರದ ಕಡೆಗೆ ಚಲಿಸುತ್ತಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಭಾನುವಾರ ತಿಳಿಸಿದೆ. ಮುಂದಿನ […]
ಜೂನ್ 15 ರವರೆಗೆ ಮಣಿಪುರದಲ್ಲಿ ಇಂಟರ್ನೆಟ್ ನಿಷೇಧ ವಿಸ್ತರಣೆ

ಮಣಿಪುರ: ಇಂಟರ್ನೆಟ್ ಸೇವೆಗಳ ಮೇಲಿನ ನಿಷೇಧವನ್ನು ಮಣಿಪುರ ಸರ್ಕಾರ ಇನ್ನೂ ಐದು ದಿನಗಳವರೆಗೆ (ಜೂನ್ 15 ರವರೆಗೆ) ವಿಸ್ತರಿಸಿದೆ. “ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆಯಿರುವ ಕಾರಣ ಸಾಮಾಜಿಕ ಜಾಲತಾಣಗಳ ಮೂಲಕ ಸುಳ್ಳು ಸುದ್ದಿ, ವದಂತಿ ಮತ್ತು ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಅಂತರ್ಜಾಲ ನಿಷೇಧವನ್ನು ಮುಂದಿನ ಐದು ದಿನಗಳವರೆಗೆ ವಿಸ್ತರಿಸಲಾಗಿದೆ” ಎಂದು ಅಧಿಕೃತ ಪ್ರಕಟಣೆ ಮೂಲಕ ತಿಳಿಸಲಾಗಿದೆ.ಕೆಲವು ಸಮಾಜ ವಿರೋಧಿ ಚಟುವಟಿಕೆಗಳನ್ನು ಪ್ರಚೋದಿಸುವ ಫೋಟೋಗಳು, ದ್ವೇಷದ ವಿಡಿಯೋ ಸಂದೇಶಗಳು ಮತ್ತು ಭಾಷಣ ಪ್ರಸಾರ ಮಾಡಲು ಸಾಮಾಜಿಕ […]
ಕಣ್ಮರೆಯಾಗಿದ್ದ 40 ದಿನಗಳ ಬಳಿಕ ಜೀವಂತವಾಗಿ ಪತ್ತೆಯಾದ ನಾಲ್ವರು ಮಕ್ಕಳು

ಒಂದಲ್ಲ, ಎರಡಲ್ಲ ಬರೋಬ್ಬರಿ 40 ದಿನಗಳ ಹಿಂದೆ ಅಮೆಜಾನ್ ಕಾಡಿನಲ್ಲಿ ಘಟಿಸಿದ ವಿಮಾನ ದುರಂತದಲ್ಲಿ ನಾಲ್ವರು ಬಾಲಕರು ಕಣ್ಮರೆಯಾಗಿದ್ದರು. ಇದೀಗ ಅವರು ಜೀವಂತವಾಗಿ ಪತ್ತೆಯಾಗಿದ್ದಾರೆ. ಇದು ಇಡೀ ಕೊಲಂಬಿಯನ್ನರನ್ನೇ ಅಚ್ಚರಿಗೀಡು ಮಾಡಿದೆ. ಕೊಲಂಬಿಯಾದ ಅಮೆಜಾನ್ ಕಾಡಿನಲ್ಲಿ ಮೇ 1 ರಂದು ವಿಮಾನ ದುರಂತ ಸಂಭವಿಸಿತ್ತು. ಈ ವೇಳೆ ಪೈಲಟ್, ಮಹಿಳೆ ಮತ್ತೊಬ್ಬರು ಸಾವನ್ನಪ್ಪಿದ್ದರು. ನಾಪತ್ತೆಯಾಗಿದ್ದ ನಾಲ್ವರು ಬಾಲಕರು 40 ದಿನಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದಾರೆ. ನ್ಯಾಷನಲ್ ಲಿಬರೇಷನ್ ಆರ್ಮಿಯ ಬಂಡಾಯದ ವೇಳೆ ಸಣ್ಣ ವಿಮಾನದಲ್ಲಿ 4 ಮಕ್ಕಳು […]
ಮೇ.1 ರಂದು ಅಮೆಜಾನ್ ಕಾಡಿನಲ್ಲಿ ವಿಮಾನ ಪತನ: 40 ದಿನಗಳ ಬಳಿಕ ವಿಮಾನದಲ್ಲಿದ್ದ ನಾಲ್ಕು ಮಕ್ಕಳ ಪತ್ತೆ

ಕೊಲಂಬಿಯಾ: ಇಲ್ಲಿನ ಅಮೆಜಾನ್ ಕಾಡಿನಲ್ಲಿ ವಿಮಾನ ಪತನಗೊಂಡ 40 ದಿನಗಳ ನಂತರ ನಾಲ್ಕು ಮಕ್ಕಳು ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಅಲ್ಲಿನ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಹೇಳಿದ್ದಾರೆ. ಮೇ 1 ರಂದು ವಿಮಾನ ಪತನಗೊಂಡಾಗ 13, 9, 4 ಮತ್ತು 1 ವರ್ಷ ವಯಸ್ಸಿನ ಒಡಹುಟ್ಟಿದ ನಾಲ್ಕು ಮಕ್ಕಳು ತಮ್ಮ ತಾಯಿ, ಪೈಲಟ್ ಮತ್ತು ಸಹ ಪೈಲಟ್‌ನೊಂದಿಗೆ ವಿಮಾನದಲ್ಲಿದ್ದರು. ಅವರ ತಾಯಿ ಮತ್ತು ವಿಮಾನದಲ್ಲಿದ್ದ ಪೈಲಟ್ ಗಳು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಹಲವು ವಾರಗಳ ಹುಡುಕಾಟದ ನಂತರ ಮಕ್ಕಳನ್ನು ಕಂಡುಹಿಡಿದಿರುವುದು […]