ಒಡಿಶಾದ ಟಾಟಾ ಸ್ಟೀಲ್ ಪ್ಲಾಂಟ್‌ನಲ್ಲಿ ಸ್ಫೋಟದ ಪರಿಣಾಮ 19 ಕಾರ್ಮಿಕರಿಗೆ ಗಾಯ

ಧೆಂಕನಲ್ (ಒಡಿಶಾ): ಧೆಂಕನಲ್ ಜಿಲ್ಲೆಯ ಮೆರಮಂಡಲಿಯಲ್ಲಿರುವ ಟಾಟಾ ಸ್ಟೀಲ್‌ ಸ್ಥಾವರದಲ್ಲಿ ಸ್ಫೋಟ ಸಂಭವಿಸಿ, 19 ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.ಧೆಂಕನಾಲ್‌ನಲ್ಲಿರುವ ಟಾಟಾ ಸ್ಟೀಲ್ BFPP2 ವಿದ್ಯುತ್ ಸ್ಥಾವರದಲ್ಲಿ ಸ್ಫೋಟ ಸಂಭವಿಸಿದೆ ಎಂದು ಟಾಟಾ ಸ್ಟೀಲ್ಸ್‌ ತಿಳಿಸಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಅಪಘಾತ ಸಂಭವಿಸಿತು. ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕೆಲವರಿಗೆ ಗಂಭೀರ ಸ್ವರೂಪದ ಗಾಯಗಳಾಗಿವೆ. ಗಾಯಾಳುಗಳನ್ನು ತಕ್ಷಣವೇ ಸ್ಥಾವರದ ಆವರಣದಲ್ಲಿರುವ ಆರೋಗ್ಯ ಕೇಂದ್ರ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಕಟಕ್‌ನ ಅಶ್ವಿನಿ ಆಸ್ಪತ್ರೆಗೆ ರವಾನಿಸಲಾಗಿದೆ. ಧೆಂಕನಾಲ್‌ನಲ್ಲಿರುವ ಟಾಟಾ ಸ್ಟೀಲ್ BFPP2 […]

ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟ: ೨ ಟಾಪರ್ಸ್‌ಗಳಿಗೆ 99.99% ರಷ್ಟು ಅಂಕ

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್​) ಯಜಿ 2023ರ ಫಲಿತಾಂಶ ಪ್ರಕಟಗೊಂಡಿದೆ. ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಇಂದು ರಾಷ್ಟ್ರೀಯ ವೈದ್ಯಕೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ (ನೀಟ್) ಯಜಿ 2023ರ ಫಲಿತಾಂಶ ಪ್ರಕಟಿಸಿದೆ. ಯುಪಿಯಿಂದ ಹೆಚ್ಚು ವಿದ್ಯಾರ್ಥಿಗಳು ಅರ್ಹ: ರಾಜ್ಯಗಳ ಪೈಕಿ ಉತ್ತರ ಪ್ರದೇಶವು ಅತ್ಯಧಿಕ ಸಂಖ್ಯೆಯಲ್ಲಿ (1.39 ಲಕ್ಷ), ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (1.31 ಲಕ್ಷ) ಮತ್ತು ರಾಜಸ್ಥಾನದ ವಿದ್ಯಾರ್ಥಿಗಳು (1 ಲಕ್ಷಕ್ಕೂ ಹೆಚ್ಚು) ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ್ದಾರೆ. ಒಟ್ಟು 11,45,976 ಅಭ್ಯರ್ಥಿಗಳು […]

ವಿಧಾನಪರಿಷತ್ ಚುನಾವಣೆಗೆ ೧೩ರಿಂದ ನಾಮಪತ್ರ ಸಲ್ಲಿಕೆ ಆರಂಭ

ಬೆಂಗಳೂರು : ಕಳೆದ ಮೇ ತಿಂಗಳಲ್ಲಿ ರಾಜ್ಯ ವಿಧಾನಸಭಾ ಚುನಾವಣೆ ಮುಗಿದಿತ್ತು. ಈ ಚುನಾವಣೆಯಲ್ಲಿ ರಾಜ್ಯದ ಜನರು ಕಾಂಗ್ರೆಸ್​ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡುವ ಮೂಲಕ ಅಧಿಕಾರ ಕೊಟ್ಟಿದ್ದಾರೆ.ಸಚಿವ ಸಂಪುಟ ರಚನೆ ಕೂಡ ಆಗಿದೆ. ಆದರೇ, ಇದೀಗವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗುವ ಮೂರು ಸ್ಥಾನಕ್ಕೆ ಚುನಾವಣಾ ವೇಳಾಪಟ್ಟಿ ಈಗಾಗಲೇ ಪ್ರಕಟವಾಗಿದ್ದು, ಇಂದು ಅಧಿಸೂಚನೆ ಪ್ರಕಟವಾಗಿದೆ. ವಿಧಾನ ಪರಿಷತ್ ಚುನಾವಣೆ ವೇಳಾಪಟ್ಟಿ ಈಗಾಗಲೇ ಪ್ರಕಟವಾಗಿದ್ದು, ಇಂದು ಅಧಿಸೂಚನೆ ಪ್ರಕಟವಾಗಿದೆ. ಇಂದಿನಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಜೂನ್ 20 ನಾಮಪತ್ರ […]

ಪ್ರಧಾನಿ ಮೋದಿಯವರಿಂದ 70,000 ನೇಮಕಾತಿ ಪತ್ರ ವಿತರಣೆ

ನವದೆಹಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಇಂದು 10:30 ಕ್ಕೆ ವಿಡಿಯೋ ಕಾನ್ಫರೆನ್ಸ್​​ ಮೂಲಕ ಉದ್ಯೋಗಕ್ಕೆ ಹೊಸದಾಗಿ ಸೇರ್ಪಡೆಗೊಂಡ ಸುಮಾರು 70,000 ಉದ್ಯೋಗಿಗಳಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದರು. ಈ ಬಗ್ಗೆ ಪ್ರಧಾನ ಮಂತ್ರಿ ಕಚೇರಿ (ಪಿಎಂಒ) ಅಧಿಕೃತವಾಗಿ ಮೊದಲೇ ಪ್ರಕಟಣೆ ಹೊರಡಿಸಿ ತಿಳಿಸಿತ್ತು. ಸರ್ಕಾರದ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಪಡೆದ 70 ಸಾವಿರ ಜನರಿಗೆ ಪಿಎಂ ನರೇಂದ್ರ ಮೋದಿ ಅವರು ‘ನೇಮಕಾತಿ ಪತ್ರ’ವನ್ನು ವರ್ಚುಯಲ್​ ವೇದಿಕೆಯಲ್ಲಿ ವಿತರಿಸಿದ್ದು, ಈ ಸಂದರ್ಭದಲ್ಲಿ ಪ್ರಧಾನಿಯವರು ನೇಮಕಗೊಂಡವರನ್ನು ಉದ್ದೇಶಿಸಿ […]

ರಾಜ್ಯಗಳಿಗೆ ತೆರಿಗೆ ಹಂಚಿಕೆಯ 3ನೇ ಕಂತು 1,18,280 ಕೋಟಿ ರೂ ಬಿಡುಗಡೆ ಮಾಡಿದ ಕೇಂದ್ರ: ಕರ್ನಾಟಕಕ್ಕೆ 4,314 ಕೋಟಿ ಬಿಡುಗಡೆ

ನವದೆಹಲಿ: ಕೇಂದ್ರ ಸರ್ಕಾರವು ಸೋಮವಾರ ರಾಜ್ಯಗಳಿಗೆ ಮೂರನೇ ಕಂತಿನ ತೆರಿಗೆ ಹಂಚಿಕೆಯ ಮೂರನೇ ಕಂತಾಗಿ 1,18,280 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಸಾಮಾನ್ಯ ಮಾಸಿಕ ಹಂಚಿಕೆ 59,140 ಕೋಟಿ ರೂ. ಗಳಿಗಿಂತ ಇದು ಹೆಚ್ಚಾಗಿದೆ. ಬಂಡವಾಳ ವೆಚ್ಚವನ್ನು ವೇಗಗೊಳಿಸಲು, ಅಭಿವೃದ್ಧಿ ಮತ್ತು ಕಲ್ಯಾಣ ಸಂಬಂಧಿತ ವೆಚ್ಚಗಳಿಗೆ ಹಣಕಾಸು ಒದಗಿಸಲು ಮತ್ತು ಆದ್ಯತೆಯ ಯೋಜನೆಗಳಿಗೆ ಸಂಪನ್ಮೂಲ ಲಭ್ಯವಾಗುವಂತೆ ಮಾಡಲು ಜೂನ್ 2023 ರಲ್ಲಿ ನಿಯಮಿತ ಕಂತಿಗೆ ಹೆಚ್ಚುವರಿಯಾಗಿ ಒಂದು ಮುಂಗಡ ಕಂತನ್ನು ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಅಧಿಕೃತ […]