ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟ: ೨ ಟಾಪರ್ಸ್‌ಗಳಿಗೆ 99.99% ರಷ್ಟು ಅಂಕ

ನವದೆಹಲಿ: ರಾಷ್ಟ್ರೀಯ ವೈದ್ಯಕೀಯ ಪ್ರವೇಶ ಪರೀಕ್ಷೆ (ನೀಟ್​) ಯಜಿ 2023ರ ಫಲಿತಾಂಶ ಪ್ರಕಟಗೊಂಡಿದೆ.
ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಇಂದು ರಾಷ್ಟ್ರೀಯ ವೈದ್ಯಕೀಯ ಅರ್ಹತೆ ಹಾಗೂ ಪ್ರವೇಶ ಪರೀಕ್ಷೆ (ನೀಟ್) ಯಜಿ 2023ರ ಫಲಿತಾಂಶ ಪ್ರಕಟಿಸಿದೆ.

ಯುಪಿಯಿಂದ ಹೆಚ್ಚು ವಿದ್ಯಾರ್ಥಿಗಳು ಅರ್ಹ: ರಾಜ್ಯಗಳ ಪೈಕಿ ಉತ್ತರ ಪ್ರದೇಶವು ಅತ್ಯಧಿಕ ಸಂಖ್ಯೆಯಲ್ಲಿ (1.39 ಲಕ್ಷ), ನಂತರದ ಸ್ಥಾನದಲ್ಲಿ ಮಹಾರಾಷ್ಟ್ರ (1.31 ಲಕ್ಷ) ಮತ್ತು ರಾಜಸ್ಥಾನದ ವಿದ್ಯಾರ್ಥಿಗಳು (1 ಲಕ್ಷಕ್ಕೂ ಹೆಚ್ಚು) ಪರೀಕ್ಷೆಯಲ್ಲಿ ಅರ್ಹತೆ ಗಳಿಸಿದ್ದಾರೆ. ಒಟ್ಟು 11,45,976 ಅಭ್ಯರ್ಥಿಗಳು ಕೌನ್ಸೆಲಿಂಗ್ ಪ್ರಕ್ರಿಯೆಗೆ ಅರ್ಹತೆ ಪಡೆದಿದ್ದಾರೆ.

ನೀಟ್​- ಯುಜಿ ಪರೀಕ್ಷೆ ಟಾಪರ್ಸ್‌(ಪುರುಷ):
ಪ್ರಬಂಜನ್ ಜೆ
ಬೋರಾ ವರುಣ್ ಚಕ್ರವರ್ತಿ
ಕೌಸ್ತವ್ ಬೌರಿ
ಧ್ರುವ ಅಡ್ವಾಣಿ
ಸೂರ್ಯ ಸಿದ್ಧಾರ್ಥ್ ಎನ್
ಶ್ರೀನಿಕೇತ್ ರವಿ
ಸ್ವಯಂ ಶಕ್ತಿ ತ್ರಿಪಾಠಿ
ವರುಣ್ ಎಸ್
ಪಾರ್ತ್ ಖಂಡೇಲ್ವಾಲ್
ಸಾಯನ್ ಪ್ರಧಾನ್
ನೀಟ್​- ಯುಜಿ ಪರೀಕ್ಷೆ ಟಾಪರ್ಸ್ (ಮಹಿಳೆ)
ಪ್ರಾಂಜಲ್ ಅಗರ್ವಾಲ್
ಆಶಿಕಾ ಅಗರ್ವಾಲ್
ಆರ್ಯ ಆರ್.ಎಸ್
ಮೀಮಾಂಸಾ ಮೌನ್
ಸುಮೇಘ ಸಿನ್ಹಾ
ಕಣಿ ಯಸಶ್ರೀ
ಬರೀರಾ ಅಲಿ
ರಿದ್ಧಿ ವಾಜರಿಂಗ್ಕರ್
ಕವಲಕುಂಟ್ಲ ಪ್ರಣತಿ ರೆಡ್ಡಿ
ಜಾಗೃತಿ ಬೊಡೆದ್ದುಲ

ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಅಧಿಕೃತ ವೆಬ್‌ಸೈಟ್: neet.nta.nic.in ನಲ್ಲಿ ಚೆಕ್​ ಮಾಡಿಕೊಳ್ಳಬಹುದು. ತಮಿಳುನಾಡಿನ ಪ್ರಬಂಜನ್ ಜೆ ಮತ್ತು ಆಂಧ್ರಪ್ರದೇಶದ ಬೋರಾ ವರುಣ್ ಚಕ್ರವರ್ತಿ ಶೇ 99.99 ಅಂಕಗಳನ್ನು ಗಳಿಸುವ ಮೂಲಕ ನೀಟ್​-ಯುಜಿನಲ್ಲಿ ಅಗ್ರಸ್ಥಾನ ಪಡೆದಿದ್ದಾರೆ. ಒಟ್ಟು 20.38 ಲಕ್ಷ ಮಂದಿ ಪರೀಕ್ಷೆಗೆ ನೋಂದಾಯಿಸಿದ್ದು, 11.45 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ.