ನವವಧುವಿನಂತೆ ಶೃಂಗಾರಗೊಂಡ ಐತಿಹಾಸಿಕ ಹಂಪಿಯಲ್ಲಿ ಜಿ-20 ಶೃಂಗಸಭೆ

ವಿಜಯನಗರ: ಜಿ-20 ಶೃಂಗಸಭೆಗೆ ಈ ಬಾರಿಯ ಅಧ್ಯಕ್ಷೀಯ ರಾಷ್ಟ್ರ ಭಾರತವಾಗಿದೆ. ಅದಕ್ಕಾಗಿಯೇ ಅತೀ ಮುಖ್ಯವಾದ ಜಿ 20 ಶೃಂಗಸಭೆಯ ಮೂರನೇ ಪ್ರಮುಖ ಸಭೆ ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಇಂದಿನಿಂದ 16ರ ವರೆಗೆ ನಡೆಯಲಿದೆ. ಮೂರು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೂರು ದಿನಗಳ ಕಾಲ ಅಂತಾರಾಷ್ಟ್ರೀಯ ಮಟ್ಟದ ಹಲವಾರು ಉನ್ನತ ಸಭೆಗಳು ಹಂಪಿಯಲ್ಲಿ ನಡೆಯಲಿವೆ ವಿಶ್ವ ಪರಂಪರೆಯ ತಾಣವಾಗಿರುವ ಹಂಪಿ ದೇಶ ವಿದೇಶಗಳಲ್ಲಿಯೂ ಪ್ರಸಿದ್ಧಿ ಪಡೆದಿದೆ. ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ಇಂದಿನಿಂದ 16 ರವರೆಗೆ ಜಿ-20 […]

PUBG ಮೂಲಕ ಭೇಟಿಯಾದವನ ಜೊತೆ ಮದುವೆಯಾಗಲು ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತ ಪ್ರವೇಶಿಸಿದ ಪಾಕಿಸ್ತಾನಿ ಮಹಿಳೆ!!

ನವದೆಹಲಿ: ಜನಪ್ರಿಯ ಆನ್‌ಲೈನ್ ಗೇಮ್ PUBG ಮೂಲಕ ಭೇಟಿಯಾದ ಪಾಕಿಸ್ತಾನಿ ಮಹಿಳೆ ಮತ್ತು ಭಾರತೀಯ ಪುರುಷನ ಪ್ರೇಮಕಥೆಯು ಇಬ್ಬರನ್ನೂ ಜೈಲು ಸೇರುವಂತೆ ಮಾಡಿದೆ. 27 ವರ್ಷದ ಸೀಮಾ ಗುಲಾಮ್ ಹೈದರ್, 22 ವರ್ಷದ ಸಚಿನ್ ಮೀನಾ ಅವರನ್ನು ಒಂದೆರಡು ವರ್ಷಗಳ ಹಿಂದೆ ವರ್ಚುವಲ್ ಗೇಮಿಂಗ್ ಪ್ಲಾಟ್‌ಫಾರ್ಮ್ PUBG ಮೂಲಕ ಭೇಟಿಯಾಗಿದ್ದಾರೆ ಮತ್ತು ಭಾರತದಲ್ಲಿ ನೆಲೆಸಲು ಆಕೆ ತನ್ನ ನಾಲ್ಕು ಮಕ್ಕಳೊಂದಿಗೆ ಬಂದಿಳಿದಿದ್ದಾಳೆ. ಮೇ ತಿಂಗಳಲ್ಲಿ ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ ಆಕೆ ಮತ್ತು ಆಕೆಯ ಪ್ರೇಮಿ ಉತ್ತರ ಪ್ರದೇಶದ […]

ಅಮರನಾಥ ಯಾತ್ರೆಯಲ್ಲಿ ಹವಾಮಾನ ವೈಪರೀತ್ಯದ ಪರಿಣಾಮ ಸಂಕಷ್ಟಕ್ಕೆ ಸಿಲುಕಿದ ಕನ್ನಡಿಗರ ಅಗತ್ಯ ಕ್ರಮಕ್ಕೆ ಸೂಚನೆ ನೀಡಿದ ಸಿಎಂ

ಬೆಂಗಳೂರು: ಗದಗನಿಂದ ತೆರಳಿರುವ 23 ಮಂದಿ ಸೇರಿ ಒಟ್ಟು 80 ಮಂದಿ ಕನ್ನಡಿಗರು ಅಮರನಾಥ ಮಂದಿರದಿಂದ 6 ಕಿ.ಮೀ ದೂರದಲ್ಲಿರುವ ಪಂಚತಾರ್ನಿ ಟೆಂಟ್​​ನಲ್ಲಿ ಸಿಲುಕಿದ್ದಾರೆ ಎನ್ನುವ ಮಾಹಿತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಅಗತ್ಯ ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.ಜೈನಮುನಿ ಹತ್ಯೆ ಪ್ರಕರಣದ ಸಮಗ್ರ ತನಿಖೆ: ಹಿರೇಕೋಡಿಯ ಜೈನಮುನಿ ಹತ್ಯೆ ಪ್ರಕರಣದ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಆಗುವಂತೆ ಕಾನೂನು ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಪವಿತ್ರ ಅಮರನಾಥ […]

ವಂದೇ ಭಾರತ್ ಸೇರಿ, ಎಲ್ಲ ಎಸಿ ರೈಲುಗಳ ಟಿಕೆಟ್‌ ದರ ಕಡಿತ

ನವದೆಹಲಿ:ವಸತಿ ಸೌಕರ್ಯದ ಬಳಕೆಯನ್ನು ಉತ್ತಮಗೊಳಿಸುವ ಉದ್ದೇಶದಿಂದ, ಎಸಿ ಆಸನಗಳನ್ನು ಹೊಂದಿರುವ ರೈಲುಗಳಲ್ಲಿ ರಿಯಾಯಿತಿ ಶುಲ್ಕ ಯೋಜನೆಗಳನ್ನು ಪರಿಚಯಿಸಲು ರೈಲ್ವೆ ವಲಯಗಳ ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಿಗೆ ಅಧಿಕಾರವನ್ನು ನೀಡಲು ರೈಲ್ವೆ ಸಚಿವಾಲಯ ನಿರ್ಧರಿಸಿದೆ ವಂದೇ ಭಾರತ್ ಸೇರಿದಂತೆ ಎಲ್ಲ ರೈಲುಗಳ ಎಸಿ ಚೇರ್ ಕಾರ್‌ಗಳು ಮತ್ತು ಎಕ್ಸಿಕ್ಯೂಟಿವ್ ಕ್ಲಾಸ್‌ಗಳು ಹಾಗೂ ಅನುಭೂತಿ, ವಿಸ್ಟಾಡೋಮ್ ಕೋಚ್‌ಗಳ ದರವನ್ನು ಸೀಟುಗಳಿಗೆ ಅನುಗುಣವಾಗಿ ಶೇ.25 ರಷ್ಟು ಕಡಿಮೆ ಮಾಡಲಾಗುವುದು ಎಂದು ರೈಲ್ವೆ ಮಂಡಳಿ ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ದರಗಳು ಸಹ ಸ್ಪರ್ಧಾತ್ಮಕ […]

ಪಶ್ಚಿಮ ಬಂಗಾಳ ಪಂಚಾಯತ್ ಚುನಾವಣೆ: ಭುಗಿಲೆದ್ದ ಹಿಂಸಾಚಾರ; ಮತಗಟ್ಟೆ ಧ್ವಂಸಗೊಳಿಸಿದ ದುಷ್ಕರ್ಮಿಗಳು

ಕೋಲ್ಕತಾ: ಪಂಚಾಯತ್ ಚುನಾವಣೆಗೆ ಮತದಾನ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು ಉತ್ತರ 24 ಪರಗಣಗಳ ಪಿರ್ಗಾಚಾ ಪಂಚಾಯತ್‌ನಲ್ಲಿ ಶನಿವಾರ ಮುಂಜಾನೆ ಹಿಂಸಾಚಾರ ಪ್ರಾರಂಭವಾಗಿದೆ. ಶುಕ್ರವಾರ ರಾತ್ರಿ ಟಿಎಂಸಿ ಕಾರ್ಯಕರ್ತರ ಥಳಿತದಿಂದಾಗಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾನೆ. ಕೂಚ್‌ಬಿಹಾರ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಗುಂಡು ಹಾರಿಸಲಾಗಿದ್ದು, ತೀವ್ರವಾಗಿ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 44, 45, ನೂರ್ಪುರ್ ಪಂಚಾಯತ್ ನ ಮತಪೆಟ್ಟಿಗೆಗಳನ್ನು ಒಯ್ದು ಮತ ಪತ್ರಗಳನ್ನು ಹಾಳುಮಾಡಲಾಗಿದೆ. ಇಂದು ಮುಂಜಾನೆ ದಿನ್ಹಟಾ ಬ್ಲಾಕ್ ನಂಬರ್ 1 ಮತಗಟ್ಟೆಗೆ ನುಗ್ಗಿದ ಯನ್ನು […]