ಪಿಟ್‌ ಬುಲ್‌ , ಬುಲ್‌ ಡಾಗ್‌, ರಾಟ್ ವೀಲರ್ ಸೇರಿದಂತೆ 23 ತಳಿಯ ನಾಯಿಗಳ ಮಾರಾಟ ಹಾಗೂ ಸಾಕಾಣೆಗೆ ನಿಷೇಧ

ಹೊಸದಿಲ್ಲಿ: ಪಿಟ್‌ ಬುಲ್‌ ಟೆರಿಯರ್‌, ಅಮೆರಿಕನ್‌ ಬುಲ್‌ ಡಾಗ್‌, ರಾಟ್‌ವೀಲರ್‌ ಮತ್ತು ಮ್ಯಾಸ್ಟಿಫ್ಸ್‌ ಸೇರಿದಂತೆ 23 ತಳಿಯ ನಾಯಿಗಳ ಮಾರಾಟ ಮತ್ತು ಸಾಕಣೆಯನ್ನು ನಿಷೇಧಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಲಾದ ನಿರ್ದೇಶನದಲ್ಲಿ ಜನರು 23 ತಳಿಗಳ ನಾಯಿಗಳನ್ನು ಸಾಕುಪ್ರಾಣಿಗಳಾಗಿ ಸಾಕುವುದನ್ನು ನಿರ್ಬಂಧಿಸುತ್ತದೆ. ಈಗಾಗಲೇ ಸಾಕು ಪ್ರಾಣಿಗಳಾಗಿ ಸಾಕಿರುವ ಈ ತಳಿಯ ನಾಯಿಗಳನ್ನು ಸಂತಾನಹರಣ ಚಿಕಿತ್ಸೆಗೆ ಒಳಪಡಿಸಿ ಮುಂದೆ ಸಂತಾನಾಭಿವೃದ್ಧಿ ಆಗದಂತೆ ನೋಡಿಕೊಳ್ಳಬೇಕು ಎಂದೂ ಕೇಂದ್ರ ಹೇಳಿದೆ. ಕೆಲವು ತಳಿಯ ನಾಯಿಗಳನ್ನು […]

ಒಂದು ರಾಷ್ಟ್ರ, ಒಂದು ಚುನಾವಣೆ: ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸಿದ ಉನ್ನತ ಮಟ್ಟದ ಸಮಿತಿ

ನವದೆಹಲಿ: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿಯು 18,626 ಪುಟಗಳನ್ನು ಒಳಗೊಂಡ ವರದಿಯನ್ನು ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದೆ. ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಗುರುವಾರ ದೇಶಾದ್ಯಂತ ಲೋಕಸಭೆ, ರಾಜ್ಯ ವಿಧಾನಸಭೆಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ಸಾಧ್ಯತೆಗಳ ಕುರಿತು ತನ್ನ ವರದಿಯನ್ನು ಸಲ್ಲಿಸಿದೆ. ವರದಿಯು ಸೆಪ್ಟೆಂಬರ್ 2, 2023 ರಂದು ಸಮಿತಿ ರಚನೆಯಾದಾಗಿನಿಂದ 191 ದಿನಗಳವರೆಗೆ ಮಧ್ಯಸ್ಥಗಾರರು, ತಜ್ಞರು ಮತ್ತು […]

ಅಯೋಧ್ಯೆಯಲ್ಲಿ ರಾಮಲಲ್ಲಾನ ದರ್ಶನಕ್ಕೆ ಹೋಗುವವರಿಗೆ ಸಲಹೆ ಸೂಚನೆ ಬಿಡುಗಡೆಗೊಳಿಸಿದ ಟ್ರಸ್ಟ್: ಹೋಗುವ ಮುನ್ನ ಇವುಗಳನ್ನು ಗಮನದಲ್ಲಿಡಿ

ಅಯೋಧ್ಯೆ: ಶ್ರೀ ರಾಮ ಜನ್ಮಭೂಮಿ ಮಂದಿರಕ್ಕೆ ಭೇಟಿ ನೀಡುವ ಎಲ್ಲಾ ಭಕ್ತರ ಗಮನಕ್ಕಾಗಿ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸಲಹೆ ಸೂಚನೆಗಳನ್ನು ಹೊರಡಿಸಿದೆ. ಅವು ಇಂತಿವೆ

ಚೀನಾದ ರೆಸ್ಟೋರೆಂಟ್‌ನಲ್ಲಿ ಸ್ಫೋಟ: ಓರ್ವ ಮೃತ್ಯು, 20ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ

ಚೀನಾದ ರೆಸ್ಟೋರೆಂಟ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಓರ್ವ ಸಾವನ್ನಪ್ಪಿ, 20 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಉತ್ತರ ಚೀನಾದ ನಗರವೊಂದರಲ್ಲಿ ಪ್ರಬಲ ಸ್ಫೋಟ ಸಂಭವಿಸಿದ್ದು, ಹೆಬೈ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ರಾಜಧಾನಿ ಬೀಜಿಂಗ್‌ನಿಂದ ಪೂರ್ವಕ್ಕೆ 50 ಕಿಮೀಗಿಂತ ಕಡಿಮೆ ದೂರದಲ್ಲಿರುವ ಸಾನ್ಹೆ ನಗರದ ವಸತಿ ಪ್ರದೇಶದಲ್ಲಿ ಸ್ಫೋಟ ಸಂಭವಿಸಿದೆ. ಚಿಕನ್ ಅಂಗಡಿಯಲ್ಲಿ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದೆ ಎಂದು ನಂಬಲಾಗಿದೆ. 36 ಆಂಬ್ಯುಲೆನ್ಸ್‌ಗಳು ಮತ್ತು 154 ತುರ್ತು ಸೇವೆಗಳು ಘಟನಾ […]

ಪೌರತ್ವ (ತಿದ್ದುಪಡಿ) ಕಾಯ್ದೆ 2019: ಮಾರ್ಗಸೂಚಿ ಪ್ರಕಟ; ಕಾನೂನಿನಲ್ಲಿ ಏನೇನಿದೆ ತಿಳಿದುಕೊಳ್ಳಿ

ನವದೆಹಲಿ: ಪೌರತ್ವ (ತಿದ್ದುಪಡಿ) ಮಸೂದೆ 2019- (CAA) ಈ ಮಸೂದೆಯು 1955 ರ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಲು ಪ್ರಸ್ತಾಪಿಸಲಾಗಿದೆ. ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ಧಾರ್ಮಿಕ ಉತ್ಪೀಡನೆಯ ಕಾರಣದಿಂದ ಪಲಾಯನಗೈದ ಹಿಂದೂ, ಸಿಖ್, ಜೈನ, ಪಾರ್ಸಿ, ಬೌದ್ದ ಹಾಗೂ ಕ್ರಿಶ್ಚಿಯನ್ ಮುಂತಾದ ಅಲ್ಪಸಂಖ್ಯಾತ ಸಮುದಾಯದ ಸಂತ್ರಸ್ತರಿಗೆ ಭಾರತೀಯ ಪೌರತ್ವವನ್ನು ನೀಡುವ ಮಸೂದೆ ಇದಾಗಿದೆ. ಹೊಸ ನಿಯಮಗಳನ್ನು ಜಾರಿಗೆ ತರುವ ಮೊದಲು, ಭಾರತದಲ್ಲಿ ಪೌರತ್ವವನ್ನು ಈ ಹಿಂದಿನ ಪೌರತ್ವ ಕಾಯಿದೆ, 1955 ರ ಮೂಲಕ ನಿಯಂತ್ರಿಸಲಾಗುತ್ತಿತ್ತು. ಈ […]