ಪರಮಾಣು ಕಲುಷಿತ ನೀರು ಜಪಾನ್ನಿಂದ ಸಮುದ್ರಕ್ಕೆ ಬಿಡುಗಡೆ; ದಕ್ಷಿಣ ಕೊರಿಯಾ ಸೇರಿದಂತೆ ನೆರೆಯ ರಾಷ್ಟ್ರಗಳಲ್ಲಿ ಆತಂಕ!

ಸಿಯೋಲ್ :ದಕ್ಷಿಣ ಕೊರಿಯಾದ ಪೂರ್ವ, ಪಶ್ಚಿಮ ಮತ್ತು ದಕ್ಷಿಣದ ಸಮುದ್ರಗಳಿಂದ, ಹಾಗೆಯೇ ದಕ್ಷಿಣದ ರೆಸಾರ್ಟ್ ನಗರವಾದ ಜೆಜು ನೀರಿನಿಂದ ಮತ್ತು ಹೆಚ್ಚು ದೂರದ ಪ್ರದೇಶಗಳಿಂದಲೂ ಮಾದರಿಗಳನ್ನು ಸಂಗ್ರಹಿಸಲಾಗುವುದು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಜಪಾನ್ ತನ್ನ ದುರ್ಬಲಗೊಂಡ ಫುಕುಶಿಮಾ ಪರಮಾಣು ಸ್ಥಾವರದಿಂದ ವಿಕಿರಣ ಕಲುಷಿತ ನೀರನ್ನು ಸಮುದ್ರಕ್ಕೆ ಬಿಡುಗಡೆ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ.ಭೂಕಂಪದಿಂದ ಸ್ಥಗಿತಗೊಂಡಿರುವ ಫುಕುಶಿಮಾ ಅಣುಸ್ಥಾವರದಲ್ಲಿ ಸಂಗ್ರಹವಾಗಿರುವ ವಿಕಿರಣಶೀಲ ನೀರನ್ನು ಜಪಾನ್ ಸಮುದ್ರಕ್ಕೆ ಬಿಡುಗಡೆ ಮಾಡಲಿದೆ. ಇದು ನೆರೆಯ ದೇಶಗಳಿಗೆ ಮಾತ್ರವಲ್ಲದೇ ವಿಶ್ವಕ್ಕೇ ಆತಂಕ ಸೃಷ್ಟಿಸಿದೆ.ಆದರೆ, […]
ಅನಾರೋಗ್ಯದಿಂದ ಬಳಲುತ್ತಿದ್ದಖ್ಯಾತ ಗಣಿತಶಾಸ್ತ್ರಜ್ಞೆ ಡಾ. ಮಂಗಳಾ ನಾರ್ಲಿಕರ್ ನಿಧನ

ಪುಣೆ(ಮಹಾರಾಷ್ಟ್ರ): ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಹಾರಾಷ್ಟ್ರದ ಪುಣೆ ನಗರದ ತಮ್ಮನಿವಾಸದಲ್ಲಿ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.ಖ್ಯಾತ ಖಗೋಳ, ಭೌತಶಾಸ್ತ್ರಜ್ಞ ಡಾ.ಜಯಂತ್ ನಾರ್ಲಿಕರ್ ಅವರ ಪತ್ನಿ ಖ್ಯಾತ ಗಣಿತಶಾಸ್ತ್ರಜ್ಞೆ ಮತ್ತು ವಿಜ್ಞಾನಿ ಡಾ.ಮಂಗಳಾ ನಾರ್ಲಿಕರ್(80) ಅವರು ವಿಧಿವಶರಾಗಿದ್ದಾರೆ. ಡಾ. ಮಂಗಳಾ ನಾರ್ಲಿಕರ್ ಅವರಿಗೆ ಕೆಲವು ವರ್ಷಗಳ ಹಿಂದೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಚಿಕಿತ್ಸೆಯ ನಂತರ ಅವರು ಗುಣಮುಖರಾಗಿದ್ದರು. ಆದರೆ, ಆ ನಂತರ ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಬಂದಿತು. ಅದಕ್ಕೆ ಕಳೆದ ಒಂದು ವರ್ಷದಿಂದ […]
ಭಾನುವಾರ ಪ್ರವಾಹಪೀಡಿತ ಕುಟುಂಬಗಳಿಗೆ 10,000 ರೂ. ಆರ್ಥಿಕ ನೆರವು ಘೋಷಿಸಿದ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ನವದೆಹಲಿ : ನದಿದಡದಲ್ಲಿ ವಾಸಿಸುವ ಅನೇಕ ಬಡ ಕುಟುಂಬಗಳು ತೀವ್ರ ತೊಂದರೆ ಅನುಭವಿಸುತ್ತಿವೆ. ಕೆಲವು ಕುಟುಂಬಗಳ ಗೃಹೋಪಯೋಗಿ ವಸ್ತುಗಳು ಸಂಪೂರ್ಣವಾಗಿ ನೀರಿನಲ್ಲಿ ಕೊಚ್ಚಿ ಹೋಗಿವೆ. ಹೀಗಾಗಿ, ಪ್ರವಾಹಪೀಡಿತ ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರಧನ ನೀಡಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದಾರೆ . ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಯಮುನಾ ನದಿ ಭಾರಿ ಪ್ರವಾಹ ಉಂಟುಮಾಡಿದೆ.ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಭಾನುವಾರ ದೆಹಲಿಯ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಸಂತ್ರಸ್ತರಿಗೆ […]
ಭೋಪಾಲ್-ದೆಹಲಿ ವಂದೇ ಭಾರತ್ ರೈಲಿನ ಬ್ಯಾಟರಿ ಬಾಕ್ಸ್ ನಲ್ಲಿ ಬೆಂಕಿ; ಪ್ರಯಾಣಿಕರು ಸುರಕ್ಷಿತ

ನವದೆಹಲಿ: ಭೋಪಾಲ್-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಒಂದು ಕೋಚ್‌ನಲ್ಲಿನ ಬ್ಯಾಟರಿ ಬಾಕ್ಸ್ ನಲ್ಲಿ ಇಂದು ಬೆಳಿಗ್ಗೆ ಬೆಂಕಿ ಕಾಣಿಸಿಕೊಂಡಿದೆ. ಆದರೆ ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಗಾಯಗಳ ಬಗ್ಗೆ ವರದಿಯಾಗಿಲ್ಲ. ಮಧ್ಯಪ್ರದೇಶದ ಕುರ್ವೈ ಕೆಥೋರಾ ನಿಲ್ದಾಣದಲ್ಲಿ ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ರೈಲು ಬೆಳಿಗ್ಗೆ 5.40 ರ ಸುಮಾರಿಗೆ ಭೋಪಾಲ್‌ನಿಂದ ಹೊರಟು ದೆಹಲಿಯ ಹಜರತ್ ನಿಜಾಮುದ್ದೀನ್ ನಿಲ್ದಾಣವನ್ನು ಮಧ್ಯಾಹ್ನ 1.10 ರ ಸುಮಾರಿಗೆ ತಲುಪುತ್ತದೆ. ಸ್ಥಳದ ದೃಶ್ಯಗಳು ಚಕ್ರಗಳ ಬಳಿಯಿಂದ ಹೊಗೆ ಹೊರಹೊಮ್ಮುವುದನ್ನು […]
ಶೀಘ್ರ ನಭಕ್ಕೆ ಹಾರಲಿದೆ ಆದಿತ್ಯ-L1 ಸೂರ್ಯನತ್ತ ಇಸ್ರೊ ಚಿತ್ತ

ಚೆನ್ನೈ :ಶುಕ್ರವಾರ ಚಂದ್ರಯಾನ-3 ನೌಕೆಯ ಉಡಾವಣೆಯ ನಂತರ ಭಾರತೀಯ ಬಾಹ್ಯಾಕಾಶ ಸಂಸ್ಥೆ ಸೂರ್ಯನತ್ತ ತನ್ನ ಚಿತ್ತ ಹರಿಸಲಿದೆ. ಆಗಸ್ಟ್ ಅಂತ್ಯದ ವೇಳೆಗೆ ಸೌರ ವಾತಾವರಣವನ್ನು ಅಧ್ಯಯನ ಮಾಡಲು ಇಸ್ರೋ ತನ್ನ ಆದಿತ್ಯ L1, ಕರೋನಾಗ್ರಫಿ ಉಪಗ್ರಹವನ್ನು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ರಾಕೆಟ್ ಮೂಲಕ ಸೂರ್ಯನತ್ತ ಕಳುಹಿಸಲಿದೆ. 2023 ರ ವರ್ಷವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಅಂತರ್ ಗ್ರಹ ಕಾರ್ಯಾಚರಣೆಯ ವರ್ಷ ಎಂದು ಗುರುತಿಸಬಹುದು.ಚಂದ್ರಯಾನ-3 ಮಿಷನ್ ನಂತರ ಇಸ್ರೊ ಈಗ ಸೂರ್ಯನತ್ತ ಬಾಹ್ಯಾಕಾಶ […]