ಸಾರ್ವಕಾಲಿಕ 19833 ಅಂಕಗಳಿಗೆ ಏರುವ ಮೂಲಕ ನಿಫ್ಟಿ ರೆಕಾರ್ಡ್​

ನವದೆಹಲಿ: ಸಕಾರಾತ್ಮಕ ಏರಿಕೆಯೊಂದಿಗೆ ದಿನದ ವಹಿವಾಟು ಪ್ರಾರಂಭವಾದ ನಂತರ 19,833.15 ಅಂಕಗಳಲ್ಲಿ ನಿಫ್ಟಿ ಹೊಸ ಸಾರ್ವಕಾಲಿಕ ಹಾಗೂ ಗರಿಷ್ಠ ಮಟ್ಟದಲ್ಲಿ ವಹಿವಾಟು ಮುಗಿಸಿತು ಎಂದಿದ್ದಾರೆ. ಎನ್‌ಎಸ್‌ಇ ನಿಫ್ಟಿ 50ಯು 83.90 ಅಂಕ ಅಥವಾ ಶೇ. 0.42ರಷ್ಟು ಏರಿಕೆ ಕಂಡು 19,833.15 ಅಂಕಗಳ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದೆ. ಬಲವಾದ ಕಾರ್ಯಕ್ಷಮತೆ ಪ್ರದರ್ಶಿಸುವ ಮೂಲಕ ಇದು ದಿನದ ವಹಿವಾಟಿನಲ್ಲಿ 102.45 ಅಂಕ ಅಥವಾ ಶೇ.0.51ರಷ್ಟು ಗಳಿಕೆ ಕಂಡು 19,851.70ರ ಮಟ್ಟಕ್ಕೂ ಮುಟ್ಟಿತ್ತು. ಎನ್‌ಎಸ್‌ಇ ನಿಫ್ಟಿ 83.90 ಅಂಕಗಳ ಏರಿಕೆ […]

ಅಮೇರಿಕಾದ ಪೆಂಟಗನ್ ಅನ್ನು ಹಿಂದಿಕ್ಕಿದ ಸೂರತ್ ಡೈಮಂಡ್ ಬೋರ್ಸ್‌ ಕಟ್ಟಡ: ವಿಶ್ವದ ಅತಿದೊಡ್ಡ ಕಚೇರಿಯೆಂಬ ಹೆಗ್ಗಳಿಕೆ

ಗಾಂಧಿನಗರ: ಪ್ರಪಂಚದ ಸುಮಾರು 90% ವಜ್ರಗಳನ್ನು ಕತ್ತರಿಸಿ ಅವುಗಳಿಗೆ ಆಕಾರ ನೀಡುವ ಗುಜರಾತಿನ ಸೂರತ್ ನಗರವು ಹೊಸ ದಾಖಲೆಯನ್ನು ಬರೆದಿದೆ. ವಿಶ್ವದ ಅತಿದೊಡ್ಡ ಕಚೇರಿಯೆಂದು ಹೆಗ್ಗಳಿಕೆ ಹೊಂದಿರುವ ಸೂರತ್ ಡೈಮಂಡ್ ಬೋರ್ಸ್‌ ಕಟ್ಟಡ ಅಮೇರಿಕಾದ ಪೆಂಟಗನ್ ಅನ್ನು ಹಿಂದಿಕ್ಕಿದೆ. ವಜ್ರದ ಬೃಹತ್ ಉದ್ಯಮವನ್ನು ಇನ್ನು ಮುಂದೆ ಸೂರತ್ ಡೈಮಂಡ್ ಬೋರ್ಸ್‌ನಲ್ಲಿ ಇರಿಸಲಾಗುವುದು. ಇದರಲ್ಲಿ ಕಟ್ಟರ್‌ಗಳು, ಪಾಲಿಷರ್‌ಗಳು ಮತ್ತು ವ್ಯಾಪಾರಿಗಳು ಸೇರಿದಂತೆ 65,000 ಕ್ಕೂ ಹೆಚ್ಚು ವಜ್ರ ವೃತ್ತಿಪರರು ಕೆಲಸ ಮಾಡಲಿದ್ದಾರೆ. The Pentagon was the world's […]

ಆಧಾರ್ ಗೆ ಲಿಂಕ್ ಮಾಡದ ಪ್ಯಾನ್ ಖಾತೆಗಳು ಹೆಚ್ಚಿನ ಟಿಡಿಎಸ್-ಟಿಸಿಎಸ್ ಗೆ ಕಾರಣವಾಗಬಹುದು: ಆದಾಯ ತೆರಿಗೆ ಇಲಾಖೆ

ನವದೆಹಲಿ: ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದ ಕಾರಣ ಕಾರ್ಯನಿರತವಲ್ಲದ(inoperative) ಶಾಶ್ವತ ಖಾತೆ ಸಂಖ್ಯೆ (ಪ್ಯಾನ್) ನಿಷ್ಕ್ರಿಯ ಪ್ಯಾನ್‌(inactive)ಗೆ ಸಮಾನವಾಗಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಕಾರ್ಯಾಚರಣೆಯಲ್ಲಿ ಇಲ್ಲದ ಪ್ಯಾನ್ ನಿಷ್ಕ್ರಿಯ ಪ್ಯಾನ್ ಅಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಪ್ಯಾನ್- ಆಧಾರ್ ಲಿಂಕ್ ಆಗಿರುವುದನ್ನು ಲೆಕ್ಕಿಸದೆ ಆದಾಯ ತೆರಿಗೆ ರಿಟರ್ನ್ (ಐಟಿಆರ್) ಅನ್ನು ಸಲ್ಲಿಸಬಹುದು ಎಂದು ತೆರಿಗೆ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ಬಾಕಿ ಉಳಿದಿರುವ ಮರುಪಾವತಿಗಳು ಮತ್ತು ಅಂತಹ ಮರುಪಾವತಿಗಳ ಮೇಲಿನ ಬಡ್ಡಿಯನ್ನು ಇಂತಹ ಪ್ಯಾನ್ ಗಳಿಗೆ […]

PUBG ಪ್ರೇಮ ಪ್ರಕರಣ: ಪಾಕಿಸ್ತಾನಿ ಗೂಢಾಚಾರಿಣಿ ಶಂಕೆ; ಉತ್ತರ ಪ್ರದೇಶದ ಎಟಿಎಸ್ ಬಲೆಯಲ್ಲಿ ಸೀಮಾ ಹೈದರ್

ಹೊಸದಿಲ್ಲಿ: PUBG ಆನಲೈನ್ ಗೇಮ್ ನಲ್ಲಿ ಭೇಟಿಯಾದ ತನ್ನ ಪ್ರಿಯಕರನೊಂದಿಗೆ ಮದುವೆಯಾಗಲು ತನ್ನ ನಾಲ್ವರು ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮವಾಗಿ ನುಸುಳಿದ್ದ ಪಾಕಿಸ್ತಾನಿ ಮಹಿಳೆ ಸೀಮಾ ಗುಲಾಮ್ ಹೈದರ್ ಅನ್ನು ಉತ್ತರ ಪ್ರದೇಶ ಎಟಿಎಸ್ ಪೊಲೀಸರು ಬಂಧಿಸಿದ್ದಾರೆ. ಏತನ್ಮಧ್ಯೆ, ಆಕೆ ದೆಹಲಿಗೆ ಪರಾರಿಯಾಗಲು ಪ್ರಯತ್ನಿಸುತ್ತಿದ್ದಳು ಎಂದು ನೋಯ್ಡಾ ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ಸೀಮಾ ತನ್ನ ನಾಲ್ಕು ಮಕ್ಕಳೊಂದಿಗೆ ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದು, ಭಾರತದ ಸಚಿನ್ ಮೀನಾ ಎಂಬ ವ್ಯಕ್ತಿಯನ್ನು 2019 ರಲ್ಲಿ ಆನ್‌ಲೈನ್ ಗೇಮ್ ಪ್ಲೇಯರ್ ಅನ್‌ನೌನ್ಸ್ […]

ಎನ್​ಡಿಎ ಮೈತ್ರಿಕೂಟದ ಸಭೆಯನ್ನು ಉದ್ದೇಶಿಸಿ ಹೊಸ ವ್ಯಾಖ್ಯಾನ ನೀಡಿದ ಪ್ರಧಾನಿ : ಮೋದಿ

ನವದೆಹಲಿ: ಎನ್‌ಡಿಎಯಲ್ಲಿ ‘ಎನ್’ ಎಂದರೆ ನವ ಭಾರತ (N – New India), ‘ಡಿ’ ಎಂದರೆ ಅಭಿವೃದ್ಧಿ ಹೊಂದಿದ ರಾಷ್ಟ್ರ (D – Developed Nation), ‘ಎ’ ಎಂದರೆ ಜನರು ಮತ್ತು ಪ್ರದೇಶಗಳ ಆಕಾಂಕ್ಷೆಗಳು (A – Aspirations of people and regions) ಎಂದು ಮೋದಿ ವಿವರಿಸಿದ್ದಾರೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ)ಕ್ಕೆ ಪ್ರಧಾನಿ ಮೋದಿ ಹೊಸ ವ್ಯಾಖ್ಯಾನ ನೀಡಿದ್ದಾರೆ. ಎನ್​ಡಿಎ ಮೈತ್ರಿಕೂಟದ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದ್ದಾರೆ. ಎನ್‌ಡಿಎಯಲ್ಲಿ ಯಾವುದೇ […]