ರಾಹುಲ್ ಗಾಂಧಿ ಜಾಲಿ ಬೈಕ್ ರೈಡ್ :ಲೇಹ್ನಿಂದ ಪ್ಯಾಂಗಾಂಗ್ ಸರೋವರದವರೆಗೆ

ಲೇಹ್ (ಲಡಾಖ್): ಬೈಕ್ ರೈಡಿಂಗ್ಗೆ ಪ್ರಸಿದ್ಧಿಯಾಗಿರುವ ಲಡಾಖ್ನಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಶನಿವಾರ ಬೈಕ್ ಓಡಿಸಿ ಗಮನ ಸೆಳೆದರು. ಲಡಾಖ್ ಪ್ರವಾಸದಲ್ಲಿರುವ ಕಾಂಗ್ರೆಸ್ ಸಂಸದ ಕೆಟಿಎಂ 390 ಡ್ಯೂಕ್ ಬೈಕ್ ಅನ್ನು ಸವಾರಿ ಮಾಡಿದರು. ಇದರ ಚಿತ್ರಗಳನ್ನು ಸಾಮಾಜಿಕ ಜಾಲತಾಣವಾದ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.ಪ್ರವಾಸದಲ್ಲಿರುವ ರಾಹುಲ್ ಗಾಂಧಿ ಅವರು ಲೇಹ್ನಿಂದ ಪ್ಯಾಂಗಾಂಗ್ ಸರೋವರದವರೆಗೆ ಡ್ಯೂಕ್ ಬೈಕ್ ಓಡಿಸಿದರು. ಭಾನುವಾರ ಪ್ಯಾಂಗಾಂಗ್ ಸರೋವರದಲ್ಲಿ ನಡೆಯುವ ರಾಜೀವ್ ಗಾಂಧಿ ಜನ್ಮದಿನದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ, ಕಾರ್ಗಿಲ್‌ಗೆ ಭೇಟಿ ನೀಡಿ […]
‘ಜಿ20 ಡಿಜಿಟಲ್ ಇನೋವೇಶನ್ ಅಲೈಯನ್ಸ್ ಶೃಂಗಸಭೆ : ಭಾರತಕ್ಕೆ ಗೇಮ್ ಚೇಂಜರ್

ಬೆಂಗಳೂರು: ಜಿ20 ಡಿಜಿಟಲ್ ಇನೋವೇಶನ್ ಅಲೈಯನ್ಸ್ ಶೃಂಗಸಭೆ ಭಾರತಕ್ಕೆ ಗೇಮ್ ಚೇಂಜರ್ ಆಗಲಿದೆ. ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯುತ್ತಿರುವ ಜಿ20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ ಶೃಂಗಸಭೆಯ ಕುರಿತ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಟಾರ್ಟ್‌ಅಪ್ ಭಾರತದ ಭವಿಷ್ಯವಾಗಿದೆ. ಹೊಸ ಪೀಳಿಗೆಯು ತಂತ್ರಜ್ಞಾನದ ಸ್ಟಾರ್ಟ್‌ಅಪ್‌ಗಳು ಭಾರತವನ್ನು ಮುನ್ನಡೆಸಲಿವೆ. ಅವರಿಗೆ ತಾಂತ್ರಿಕ ಸಹಾಯ ಮತ್ತು ಸರಬರಾಜು ಸರಪಳಿಯನ್ನು ಸರಿಪಡಿಸುವುದು ಮುಖ್ಯವಾಗಿದೆ. ವಾಸ್ತವದಲ್ಲಿ ಸ್ಟಾರ್ಟ್ ಅಪ್ಗಳಿಗೆ ಕನಸುಗಳಿವೆ. ಇದರ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ. ಇವು ಎಲ್ಲವನ್ನು ಜಿ20 ಡಿಜಿಟಲ್ ಇನ್ನೋವೇಶನ್ ಅಲೈಯನ್ಸ್ […]
ಸಾಲದಾತ ಬ್ಯಾಂಕುಗಳಿಗೆ ಆರ್‌ಬಿಐ ಹೊಸ ಮಾರ್ಗಸೂಚಿ: ಸಾಲಗಾರರ ಮೇಲೆ ‘ದಂಡದ ಬಡ್ಡಿ’ ವಿಧಿಸುವಂತಿಲ್ಲ

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (RBI) ವಾಣಿಜ್ಯ ಮತ್ತು ಇತರ ಬ್ಯಾಂಕುಗಳು, ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳು (NBFC ಗಳು), ನಿಯಂತ್ರಿತ ಘಟಕಗಳು (REs) ಮತ್ತು ಇತರ ಸಾಲದಾತರು ದಂಡದ ಬಡ್ಡಿಯನ್ನು ಬಹಿರಂಗಪಡಿಸುವಲ್ಲಿ ಸಮಂಜಸತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಹೊಸ ಮಾರ್ಗಸೂಚಿಗಳನ್ನು ನೀಡಿದೆ. ಕ್ರೆಡಿಟ್ ಸೌಲಭ್ಯಗಳನ್ನು ಮಂಜೂರು ಮಾಡಿದ ನಿಯಮಗಳೊಂದಿಗೆ ಸಾಲಗಾರನು ಡೀಫಾಲ್ಟ್/ಅನುಸರಣೆ ಮಾಡದಿದ್ದಲ್ಲಿ, ಅನ್ವಯವಾಗುವ ಬಡ್ಡಿದರಗಳ ಮೇಲೆ ಮತ್ತು ಹೆಚ್ಚಿನ ಬಡ್ಡಿ ದರಗಳನ್ನು ಅನೇಕ ನಿಯಂತ್ರಿತ ಘಟಕಗಳು ಬಳಸುತ್ತಿವೆ ಎಂಬ ಸಂಶೋಧನೆಗಳನ್ನು ಇದು ಅನುಸರಿಸುತ್ತದೆ. ದಂಡದ […]
ಬೆಂಗಳೂರು : ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡ ಉದ್ಘಾಟನೆ

ಬೆಂಗಳೂರು: ದೇಶದ ಮೊದಲ 3ಡಿ ಮುದ್ರಿತ ಅಂಚೆ ಕಚೇರಿ ಕಟ್ಟಡವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ವರ್ಚುವಲ್ ಮೂಲಕ ಇಂದು ಉದ್ಘಾಟಿಸಿದ್ದಾರೆ.3ಡಿ ಪ್ರಿಂಟಿಂಗ್ ಟೆಕ್ನಾಲಜಿ ಬಳಸಿ ನಿರ್ಮಿಸಲಾಗಿರುವ ಅಂಚೆ ಕಚೇರಿ ಕಟ್ಟಡವನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಬೆಂಗಳೂರಿನಲ್ಲಿ ಇಂದು ಉಧ್ಘಾಟನೆ ಮಾಡಿದರು.ಇದು ಸಂಪೂರ್ಣ ಸ್ವಯಂಚಾಲಿತ ಕಟ್ಟಡ ನಿರ್ಮಾಣ ತಂತ್ರಜ್ಞಾನವಾಗಿದ್ದು, ಇದರಲ್ಲಿ ರೊಬೊಟಿಕ್ ಪ್ರಿಂಟರ್ ಅನುಮೋದನೆ ನೀಡಿರುವ ವಿನ್ಯಾಸದ ಪ್ರಕಾರ ವಿಶೇಷ ದರ್ಜೆಯ ಕಾಂಕ್ರೀಟ್ ಅನ್ನು ಲೇಯರ್-ಬೈ-ಲೇಯರ್ ಜೋಡಿಸುತ್ತಾ ಹೋಗುತ್ತದೆ. ಪದರಗಳ ನಡುವಿನ ಬಂಧವನ್ನು ಖಚಿತಪಡಿಸಿಕೊಳ್ಳಲು ತ್ವರಿತವಾಗಿ […]
ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮ ನೇರ ಪ್ರಸಾರಕ್ಕಾಗಿ ಮಾಧ್ಯಮಗಳಿಗೆ ಆಹ್ವಾನವಿತ್ತ ISRO

ಬೆಂಗಳೂರು: ಚಂದ್ರಯಾನ -3 ಪ್ರಪಂಚದಾದ್ಯಂತ ವಿಶೇಷ ಕುತೂಹಲವನ್ನು ಹುಟ್ಟುಹಾಕಿದ್ದು, 140 ಕೋಟಿ ಭಾರತೀಯರು ಆ.23 ರಂದು ಚಂದ್ರನ ಅಂಗಳವನ್ನು ಮೊದಲ ಬಾರಿಗೆ ನೋಡುವ ತವಕದಲ್ಲಿದ್ದಾರೆ. ದೇಶದ ಮಾಧ್ಯಮಗಳೂ ಚಂದ್ರಯಾನ-3 ರ ಕ್ಷಣ ಕ್ಷಣದ ಮಾಹಿತಿಯನ್ನು ನೀಡುತ್ತಿವೆ. ಈ ಬಗ್ಗೆ ಇಸ್ರೋ ಟ್ವೀಟ್ ಮಾಡಿದ್ದು, ಮಾಧ್ಯಮಗಳಿಗೆ ಚಂದ್ರಯಾನ-3 ಲ್ಯಾಂಡಿಗ್ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡುವ ಆಹ್ವಾನ ನೀಡಿದೆ. “ದೇಶಾದ್ಯಂತ ಮಾಧ್ಯಮಗಳು ತೋರಿಸಿದ ಆಸಕ್ತಿಯ ಆಧಾರದ ಮೇಲೆ ಚಂದ್ರಯಾನ-3 ಲ್ಯಾಂಡಿಂಗ್ ಕಾರ್ಯಕ್ರಮವನ್ನು ಉಪಗ್ರಹ ನಿಯಂತ್ರಣ ಕೇಂದ್ರ (SCC) ಕಟ್ಟಡ, ISRO […]