ಯುಕೆ ಯಿಂದ ತಾಯ್ನಾಡಿಗೆ ಮರಳಲಿದೆ ಛತ್ರಪತಿ ಶಿವಾಜಿ ಮಹಾರಾಜರ ‘ವಾಘ್ ನಖ್’ ಕಠಾರಿ: ತಿಳುವಳಿಕೆ ಒಪ್ಪಂದಕ್ಕೆ ಶೀಘ್ರ ಅಂಕಿತ

ನವದೆಹಲಿ: ಬಿಜಾಪುರ ಸುಲ್ತಾನರ ಸೇನಾಪತಿಯನ್ನು ಕೊಲ್ಲಲು ಛತ್ರಪತಿ ಶಿವಾಜಿ ಮಹಾರಾಜರು ಬಳಸಿದ ‘ವಾಘ್ ನಖ್’ (ಹುಲಿಯ ಉಗುರಿನಂತಹ ಆಯುಧ) ಅನ್ನು ಹಿಂದಿರುಗಿಸಲು ಯುಕೆ ಅಧಿಕಾರಿಗಳು ಒಪ್ಪಿಕೊಂಡ ನಂತರ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ರಾಜ್ಯ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂಟಿವಾರ್ ಈ ತಿಂಗಳ ಕೊನೆಯಲ್ಲಿ ಲಂಡನ್‌ಗೆ ಭೇಟಿ ನೀಡಲಿದ್ದಾರೆ. ವಾಘ್ ನಖ್ ಹುಲಿ ಉಗುರುಗಳ ಆಕಾರದ ಕಠಾರಿಯಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರು 1659 ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ […]

ಚಂದ್ರನನ್ನು ಅನ್ವೇಷಿಸಲು ರಾಕೆಟ್​ ಉಡಾವಣೆ ಮಾಡಿದ ಜಪಾನ್​

ಟೋಕಿಯೊ (ಜಪಾನ್​): ಮೊದಲ ಬಾರಿಗೆ ಚಂದ್ರನ ಮೇಲೆ ಇಳಿಯುವ ಕನಸನ್ನು ನನಸು ಮಾಡಿಕೊಳ್ಳಲು ಜಪಾನ್ ಪ್ರಮುಖ ಪ್ರಯೋಗವನ್ನು ಕೈಗೊಂಡಿದೆ.ಮತ್ತೊಂದು ದೇಶವು ಚಂದ್ರನ ಮೇಲೆ ಇಳಿಯಲು ಸಿದ್ಧವಾಗಿದೆ. ಹಲವು ಬಾರಿ ಮುಂದೂಡಲ್ಪಟ್ಟ ಈ ರಾಕೆಟ್ ಉಡಾವಣೆ ಗುರುವಾರ ಬೆಳಗ್ಗೆ ಯಶಸ್ವಿಯಾಗಿ ನಿಗದಿತ ಕಕ್ಷೆಯನ್ನು ಪ್ರವೇಶಿಸಿತು. ನೈಋತ್ಯ ಜಪಾನಿನ ತನೆಗಾಶಿಮಾ ಬಾಹ್ಯಾಕಾಶ ನಿಲ್ದಾಣದಿಂದ ಎಕ್ಸ್ ರೇ ಟೆಲಿಸ್ಕೋಪ್ ಮತ್ತು ಚಂದ್ರನ ಲ್ಯಾಂಡರ್ ಅನ್ನು ಹೊತ್ತ H-2A ರಾಕೆಟ್ ಆಗಸಕ್ಕೆ ಹಾರಿತು.ಜಪಾನ್ ಚಂದ್ರನ ಮೇಲೆ ಇಳಿಯಲು ನಿರ್ಣಾಯಕ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ರಾಕೆಟ್​ […]

ವಿವಿಧ ರಾಷ್ಟ್ರಗಳ ಮುಖ್ಯಸ್ಥರನ್ನು ಸ್ವಾಗತಿಸಲು ಸಜ್ಜಾದ ನವದೆಹಲಿ: ಐತಿಹಾಸಿಕ ಜಿ-20 ಶೃಂಗಸಭೆ

ನವದೆಹಲಿ : ಭಾರತದ ಅಧ್ಯಕ್ಷತೆಯಲ್ಲಿ ನಡೆಯುವ ಐತಿಹಾಸಿಕ ಜಿ20 ಶೃಂಗಸಭೆಗೆ ಹಾಜರಾಗಲು ಭಾರತಕ್ಕೆ ಆಗಮಿಸುತ್ತಿರುವ ವಿವಿಧ ರಾಷ್ಟ್ರಗಳ ನಾಯಕರಿಗೆ ಉಳಿದುಕೊಳ್ಳಲು ಸೂಕ್ತ ವ್ಯವಸ್ಥೆಯನ್ನು ಸರ್ಕಾರ ಮಾಡಿದೆ. ನವದೆಹಲಿಯಲ್ಲಿ ಸೆಪ್ಟೆಂಬರ್​ 9 ರಿಂದ ಆರಂಭವಾಗುವ ಜಿ-20 ಶೃಂಗಸಭೆಗೆ ಆಗಮಿಸುವ ವಿವಿಧ ರಾಷ್ಟ್ರಗಳ ನಾಯಕರ ಸ್ವಾಗತಕ್ಕೆ ಸಕಲ ಸಿದ್ಧತೆ ಮಾಡಲಾಗಿದೆ. ಮೂಲಗಳ ಪ್ರಕಾರ, ಅಧ್ಯಕ್ಷ ಜೋ ಬೈಡನ್ ಮತ್ತು ಅವರ ಜೊತೆಯಲ್ಲಿರುವ ಪ್ರತಿನಿಧಿಗಳಿಗಾಗಿ 400 ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಹೋಟೆಲ್ ಈ ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷರಾದ ಜಾರ್ಜ್ ಬುಷ್, ಬಿಲ್ […]

ಇಂಡೋನೇಷ್ಯಾದಿಂದ ಭಾರತಕ್ಕೆ ವಾಪಸ್​ ಆದ ಪ್ರಧಾನಿ ಮೋದಿ : ಆಸಿಯಾನ್​ ಶೃಂಗಸಭೆ

ಜಕಾರ್ತ: ‘ಆಸಿಯಾನ್’ ಭಾರತದ ಆಯಕ್ಟ್ ಈಸ್ಟ್ ಸಿದ್ಧಾಂತದ ಪ್ರಮುಖ ಕೇಂದ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳುವ ಮೂಲಕ ಚೀನಾಕ್ಕೆ ಗುದ್ದು ನೀಡಿದ್ದಾರೆ.ಜಕಾರ್ತದಲ್ಲಿ ಗುರುವಾರ ನಡೆದ 20ನೇ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಮಹತ್ವದ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಶೃಂಗಸಭೆಯು 10 ಸದಸ್ಯರ ಆಸಿಯಾನ್ ಗುಂಪಿನ ನಾಯಕರನ್ನು ಒಟ್ಟುಗೂಡಿಸಿತು. ಭಾರತದ ‘ಆಯಕ್ಟ್ ಈಸ್ಟ್’ ನೀತಿಯಲ್ಲಿ ಆಸಿಯಾನ್​ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದು ಹೇಳಿದರು . ದಕ್ಷಿಣ ಚೀನಾ ಸಮುದ್ರದಲ್ಲಿ ಹಿಡಿತ ಮತ್ತು ಹಲವು ರಾಷ್ಟ್ರಗಳ ಮೇಲೆ […]

ಹೊಸ ನಿಯಮ : 30ದಿನಕ್ಕಿಂತ ಹೆಚ್ಚು ಗಳಿಕೆ ರಜೆಗೆ ವೇತನ

ನವದೆಹಲಿ: ಸೆಪ್ಟೆಂಬರ್ 07; ಉದ್ಯೋಗಿಗಳಿಗೆ ರಜೆಯ ವಿಚಾರದಲ್ಲಿ ನೆರವಾಗುವ ಹೊಸ ಕಾನೂನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ಕ್ಯಾಲೆಂಡರ್ ವರ್ಷದಲ್ಲಿ 30ಕ್ಕಿಂತ ಹೆಚ್ಚು ಗಳಿಕೆ ರಜೆ ಇದ್ದರೆ ಕಂಪನಿಗಳು ಹೆಚ್ಚುವರಿ ವೇತನ ಪಾವತಿ ಮಾಡಬೇಕು ಎಂದು ನಿಯಮ ಹೇಳುತ್ತದೆ. ಶೀಘ್ರವೇ ಬರಲಿರುವ ಹೊಸ ಕಾನೂನು ಉದ್ಯೋಗಿಗಳಿಗೆ ಮತ್ತು ಉದ್ಯೋಗದಾತರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಿದೆ. ಟೇಕ್ ಹೋಮ್ ವೇತನ ಮತ್ತು ಇಪಿಎಫ್‌ ಖಾತೆಗಳಿಗೆ ಸಹ ಹೆಚ್ಚಿನ ಲಾಭವಾಗಲಿದೆ ಎಂದು ಅಂದಾಜಿಸಲಾಗಿದೆ. ಅಧಿಸೂಚನೆ ಪ್ರಕಟಗೊಂಡ ಬಳಿಕ ಹೆಚ್ಚಿನ ಮಾಹಿತಿ ತಿಳಿಯಲಿದೆ.ಈ […]