ಮೊರಾಕೊದಲ್ಲಿ 6.8 ತೀವ್ರತೆಯ ಪ್ರಬಲ ಭೂಕಂಪ: 300 ಜನ ಸಾವನ್ನಪ್ಪಿರುವ ಅಂದಾಜು

ಶುಕ್ರವಾರ ತಡರಾತ್ರಿ ಮೊರಾಕೊದಲ್ಲಿ 6.8 ತೀವ್ರತೆಯ ಪ್ರಬಲವಾದ ಅಪ್ಪಳಿಸಿದ ನಂತರ ಸುಮಾರು 300 ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ಆಂತರಿಕ ಸಚಿವಾಲಯ ತಿಳಿಸಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಅಲ್ ಜಜೀರಾ ಸುದ್ದಿ ಸಂಸ್ಥೆಯ ಪ್ರಕಾರ, ಭೂಕಂಪದ ಕೇಂದ್ರವು ಮರ್ರೆಕೇಶ್‌ನ ಪಶ್ಚಿಮಕ್ಕೆ 72 ಕಿಲೋಮೀಟರ್ ದೂರದಲ್ಲಿದ್ದು, ಇದು ಇಲ್ಲಿನ ಪ್ರಮುಖ ಆರ್ಥಿಕ ಕೇಂದ್ರವಾಗಿದೆ. UNESCO ವಿಶ್ವ ಪರಂಪರೆಯ ತಾಣವಾಗಿರುವ ಹಳೆಯ ನಗರವನ್ನು ಸುತ್ತುವರೆದಿರುವ ಕೆಂಪು ಗೋಡೆಗಳು ಸಹ ಹಾನಿಗೊಳಗಾಗಿವೆ. #WATCH : Moment of […]

ಇಟಲಿ ಪ್ರಧಾನಿಯನ್ನು ಸ್ವಾಗತಿಸಿದ ಸಚಿವೆ ಶೋಭಾ ಕರಂದ್ಲಾಜೆ : ಜಿ20 ಶೃಂಗಸಭೆಗೆ ಜಾಗತಿಕ ನಾಯಕರ ಆಗಮನ

ನವದೆಹಲಿ: ಮಹತ್ವದ ಜಿ20 ಶೃಂಗಸಭೆಗೆ ರಾಷ್ಟ್ರ ರಾಜಧಾನಿ ದೆಹಲಿ ಸಜ್ಜಾಗಿದೆ.G20 summit: ದೆಹಲಿಯಲ್ಲಿ ನಡೆಯುತ್ತಿರುವ ಜಿ20 ಶೃಂಗಸಭೆಗಾಗಿ ವಿವಿಧ ರಾಷ್ಟ್ರಗಳ ನಾಯಕರು ಭಾರತಕ್ಕೆ ಬಂದಿಳಿದಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮ ಮೂಲಕ ನಾಯಕರನ್ನು ಸ್ವಾಗತಿಸಲಾಗುತ್ತಿದೆ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಬರಮಾಡಿಕೊಂಡರು. ಈ ವೇಳೆ, ಕಲಾ ತಂಡಗಳೊಂದಿಗೆ ಇಟಲಿ ಪ್ರಧಾನಿ ಫೋಟೋ ತೆಗೆಸಿಕೊಂಡರು. ಯೂನಿಯನ್ ಆಫ್ ಕೊಮೊರೊಸ್ ಅಧ್ಯಕ್ಷ ಮತ್ತು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಹಾಗೂ ಮಾರಿಷಸ್ ಪ್ರಧಾನಿ ಪ್ರವೀಂದ್ […]

140 ವರ್ಷಗಳ ಬಳಿಕ ಹಾಂಕಾಂಗ್ ನಲ್ಲಿ ಜಳಪ್ರಳಯ.

ಹಾಂಕಾಂಗ್ : ದಕ್ಷಿಣ ಚೀನಾದ ಆರ್ಥಿಕ ಕೇಂದ್ರವಾಗಿರುವ ಹಾಂಕಾಂಗ್ ನಲ್ಲಿ ಭಾರೀ ಮಳೆ ಬೀಳುತ್ತಿದೆ. ರಸ್ತೆಗಳು ಮತ್ತು ಸುರಂಗಮಾರ್ಗಗಳು ಜಲಾವೃತಗೊಂಡಿದ್ದರಿಂದ ಶುಕ್ರವಾರ ಬೆಳಗ್ಗೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.ಹಾಂಕಾಂಗ್‌ನಲ್ಲಿ ಜಲ ಪ್ರಳಯವೇ ಉಂಟಾಗಿದೆ. ಒಂದು ಗಂಟೆಯೊಳಗೆ ಸುರಿದ ಮಳೆಯಿಂದ ನಗರವೇ ತತ್ತರಿಸಿ ಹೋಗಿದೆ. ಹಾಂಕಾಂಗ್ ಮಹಾನಗರವು 140 ವರ್ಷಗಳಲ್ಲಿ ಈ ಪ್ರಮಾಣದ ಮಳೆಯನ್ನು ಕಂಡಿಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಭುಗಿಲೆದ್ದ ಪ್ರವಾಹ..: ಗುರುವಾರ ರಾತ್ರಿ 11 ರಿಂದ 12 ರ ನಡುವೆ 158.1 ಮಿಲಿಮೀಟರ್ (6.2 […]

ಯುಕೆ ಯಿಂದ ತಾಯ್ನಾಡಿಗೆ ಮರಳಲಿದೆ ಛತ್ರಪತಿ ಶಿವಾಜಿ ಮಹಾರಾಜರ ‘ವಾಘ್ ನಖ್’ ಕಠಾರಿ: ತಿಳುವಳಿಕೆ ಒಪ್ಪಂದಕ್ಕೆ ಶೀಘ್ರ ಅಂಕಿತ

ನವದೆಹಲಿ: ಬಿಜಾಪುರ ಸುಲ್ತಾನರ ಸೇನಾಪತಿಯನ್ನು ಕೊಲ್ಲಲು ಛತ್ರಪತಿ ಶಿವಾಜಿ ಮಹಾರಾಜರು ಬಳಸಿದ ‘ವಾಘ್ ನಖ್’ (ಹುಲಿಯ ಉಗುರಿನಂತಹ ಆಯುಧ) ಅನ್ನು ಹಿಂದಿರುಗಿಸಲು ಯುಕೆ ಅಧಿಕಾರಿಗಳು ಒಪ್ಪಿಕೊಂಡ ನಂತರ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಲು ರಾಜ್ಯ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂಟಿವಾರ್ ಈ ತಿಂಗಳ ಕೊನೆಯಲ್ಲಿ ಲಂಡನ್‌ಗೆ ಭೇಟಿ ನೀಡಲಿದ್ದಾರೆ. ವಾಘ್ ನಖ್ ಹುಲಿ ಉಗುರುಗಳ ಆಕಾರದ ಕಠಾರಿಯಾಗಿದ್ದು, ಛತ್ರಪತಿ ಶಿವಾಜಿ ಮಹಾರಾಜರು 1659 ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ […]

ಚಂದ್ರನನ್ನು ಅನ್ವೇಷಿಸಲು ರಾಕೆಟ್​ ಉಡಾವಣೆ ಮಾಡಿದ ಜಪಾನ್​

ಟೋಕಿಯೊ (ಜಪಾನ್​): ಮೊದಲ ಬಾರಿಗೆ ಚಂದ್ರನ ಮೇಲೆ ಇಳಿಯುವ ಕನಸನ್ನು ನನಸು ಮಾಡಿಕೊಳ್ಳಲು ಜಪಾನ್ ಪ್ರಮುಖ ಪ್ರಯೋಗವನ್ನು ಕೈಗೊಂಡಿದೆ.ಮತ್ತೊಂದು ದೇಶವು ಚಂದ್ರನ ಮೇಲೆ ಇಳಿಯಲು ಸಿದ್ಧವಾಗಿದೆ. ಹಲವು ಬಾರಿ ಮುಂದೂಡಲ್ಪಟ್ಟ ಈ ರಾಕೆಟ್ ಉಡಾವಣೆ ಗುರುವಾರ ಬೆಳಗ್ಗೆ ಯಶಸ್ವಿಯಾಗಿ ನಿಗದಿತ ಕಕ್ಷೆಯನ್ನು ಪ್ರವೇಶಿಸಿತು. ನೈಋತ್ಯ ಜಪಾನಿನ ತನೆಗಾಶಿಮಾ ಬಾಹ್ಯಾಕಾಶ ನಿಲ್ದಾಣದಿಂದ ಎಕ್ಸ್ ರೇ ಟೆಲಿಸ್ಕೋಪ್ ಮತ್ತು ಚಂದ್ರನ ಲ್ಯಾಂಡರ್ ಅನ್ನು ಹೊತ್ತ H-2A ರಾಕೆಟ್ ಆಗಸಕ್ಕೆ ಹಾರಿತು.ಜಪಾನ್ ಚಂದ್ರನ ಮೇಲೆ ಇಳಿಯಲು ನಿರ್ಣಾಯಕ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ರಾಕೆಟ್​ […]