ಅಬಕಾರಿ ಹಗರಣ ಪ್ರಕರಣ: ತಿಹಾರ್ ಜೈಲು ನಂ 2 ರಲ್ಲಿ ಅರವಿಂದ್ ಕೇಜ್ರಿವಾಲ್; ಏ.15 ರವರೆಗೆ ನ್ಯಾಯಾಂಗ ಬಂಧನ

ದೆಹಲಿ: ಅಬಕಾರಿ ಹಗರಣದಲ್ಲಿ ಇಡಿ ಸಂಸ್ಥೆಯಿಂದ ಬಂಧನಕ್ಕೊಳಗಾಗಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ವಿಚಾರಣಾಧೀನ ಕೈದಿಯಾಗಿ ತಿಹಾರ್ ಜೈಲು ನಂ. 2 ರಲ್ಲಿ ಏ.15 ರವರೆಗೆ ನ್ಯಾಯಾಂಗ ಬಂಧನದಲ್ಲಿರಲಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಜೈಲು ನಂ. 1 ರಲ್ಲಿ, ಇತರ ಸಚಿವರು ಜೈಲು ಸಂಖ್ಯೆ 7 ರಲ್ಲಿ, ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಜೈಲು ಸಂಖ್ಯೆ 5 ರಲ್ಲಿ ಅದಾಗಲೇ ಬಂಧನದಲ್ಲಿದ್ದಾರೆ. ಈ ಮಧ್ಯೆ ಕೇಜ್ರಿವಾಲ್ ಐದು ಬೇಡಿಕೆಗಳನ್ನಿಟ್ಟಿದ್ದಾರೆ. […]

ಪಶ್ಚಿಮ ಬಂಗಾಳದಲ್ಲಿ ಹಠಾತ್ ಚಂಡಮಾರುತಕ್ಕೆ 5 ಬಲಿ; 300 ಕ್ಕೂ ಹೆಚ್ಚು ಜನ ಗಾಯಾಳು

ಪಶ್ಚಿಮ ಬಂಗಾಳದಲ್ಲಿ ಹಠಾತ್ ಚಂಡಮಾರುತಕ್ಕೆ 5 ಬಲಿ; 300 ಕ್ಕೂ ಹೆಚ್ಚು ಜನ ಗಾಯಾಳು ಕೊಲ್ಕತ್ತಾ: ಉತ್ತರ ಪಶ್ಚಿಮ ಬಂಗಾಳದ ಜಲ್ಪೈಗುರಿ ಜಿಲ್ಲೆಗೆ ಭಾನುವಾರ ಅಪ್ಪಳಿಸಿದ ಹಠಾತ್ ಚಂಡಮಾರುತದಲ್ಲಿ ಕನಿಷ್ಠ 5 ಸಾವನ್ನಪ್ಪಿದ್ದಾರೆ ಮತ್ತು 300 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಮನೆಗಳು ಹಾಗೂ ಕಟ್ಟಡಗಳಿಗೂ ಹಾನಿಯಾಗಿರುವ ವರದಿಯಾಗಿದೆ. ಆಸ್ಪತ್ರೆಗೆ ದಾಖಲಾಗಿರುವ 42 ಮಂದಿಯಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ. ಬಂಗಾಳದ ಗವರ್ನರ್ ಸಿವಿ ಆನಂದ ಬೋಸ್ ಅವರು ಸೋಮವಾರ ಚಂಡಮಾರುತ ಪೀಡಿತ ಪ್ರದೇಶಕ್ಕೆ […]

ಕಂಟೈನರ್ ಹಡಗು ಬಡಿದು ಅಮೇರಿಕಾದ ಪ್ರಮುಖ ಸೇತುವೆ ಕುಸಿತ: ಹಲವು ವಾಹನಗಳು ನೀರು ಪಾಲು

ವಾಷಿಂಗ್ಟನ್: ಕಂಟೈನರ್ ಹಡಗೊಂದು ಡಿಕ್ಕಿ ಹೊಡೆದದ್ದರಿಂದ ಅಮೆರಿಕದ ಬಾಲ್ಟಿಮೋರ್ ನಗರದ ಪ್ರಮುಖ ಸೇತುವೆ ಮಂಗಳವಾರ ಕುಸಿದು ಬಿದ್ದಿದೆ. ಈ ವೇಳೆ ಸೇತುವೆಯಲ್ಲಿದ್ದ ವಾಹನಗಳು ಕೂಡಾ ನೀರಿಗೆ ಬಿದ್ದಿವೆ. ನಾಟಕೀಯ ಸಿಸಿಟಿವಿ ದೃಶ್ಯಾವಳಿಯು ಕಂಟೇನರ್ ಹಡಗು ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆಯ ಬುಡಕ್ಕೆ ಬಡಿದು, ಸೇತುವೆಯು ಪಾಲಾಪ್ಸ್ಕೋ ನದಿಯ ಪಾಲಾಗುತ್ತಿರುವುದನ್ನು ತೋರಿಸುತ್ತಿದೆ. ಸೇತುವೆ ನದಿಗೆ ಕುಸಿದಿದ್ದು, ಸುಮಾರು 20 ಮಂದಿ ನೀರಿನಲ್ಲಿ ಮುಳುಗಿರುವ ಶಂಕೆ ವ್ಯಕ್ತವಾಗಿದೆ. ಬಾಲ್ಟಿಮೋರ್ ಅಗ್ನಿಶಾಮಕ ಇಲಾಖೆಯ ಕೆವಿನ್ ಕಾರ್ಟ್‌ರೈಟ್ ಪ್ರಕಾರ ಇಡೀ ಸೇತುವೆ ಕುಸಿದಿದೆ […]

ISRO ದಿಂದ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಜಾಗೃತಿ ತರಬೇತಿ: ಏಪ್ರಿಲ್ 8 ರಿಂದ ನೋಂದಾವಣೆ

ಬೆಂಗಳೂರು: Space Science and Technology Awareness Training (START) – 2024(ಆನ್ ಲೈನ್ ಮಾದರಿ) ಅನ್ನು ಘೋಷಿಸಲಾಗಿದ್ದು, ವಿದ್ಯಾರ್ಥಿಗಳು https://jigyasa.iirs.gov.in/START ನಲ್ಲಿ ನೋಂದಾಯಿಸಿಕೊಳ್ಳಬಹುದು. ಏ. 15 ರಿಂದ ಮೇ.3 ರವರೆಗೆ ತರಬೇತಿ ನಡೆಯಲಿದೆ. ಥೀಮ್: ಸೌರ ಮಂಡಲದ ಪರಿಶೋಧನೆ ನೋಡಲ್ ಕೇಂದ್ರಗಳಾಗಿ ಕಾರ್ಯನಿರ್ವಹಿಸಲು ಆಸಕ್ತರಾಗಿರುವ ಶೈಕ್ಷಣಿಕ ಸಂಸ್ಥೆಗಳು ಏಪ್ರಿಲ್ 2, 2024 ರೊಳಗೆ ಅರ್ಜಿ ಸಲ್ಲಿಸಬಹುದು. ವಿದ್ಯಾರ್ಥಿಗಳು ಏಪ್ರಿಲ್ 8, 2024 ರಿಂದ ನೋಂದಾಯಿಸಿಕೊಳ್ಳಬಹುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ತಿಳಿಸಿದೆ.

ಪಾಕ್ ಆಕ್ರಮಿತ ಕಾಶ್ಮೀರ ನಮ್ಮದು, ಅಲ್ಲಿನ ಜನರೇ ಭಾರತದೊಂದಿಗೆ ವಿಲೀನಗೊಳ್ಳುವ ಬೇಡಿಕೆ ಇಟ್ಟಿದ್ದಾರೆ: ರಾಜನಾಥ್ ಸಿಂಗ್

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದ (POK) ಜನರೇ ಭಾರತದೊಂದಿಗೆ ವಿಲೀನಗೊಳ್ಳುವ ಬೇಡಿಕೆಯನ್ನು ಎತ್ತುತ್ತಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಭಾನುವಾರ ಹೇಳಿದ್ದಾರೆ. ಪಿಒಕೆ ಜನರು ಭಾರತದೊಂದಿಗೆ ವಿಲೀನಗೊಳ್ಳುತ್ತಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಾಶ್ಮೀರದ ಬಗ್ಗೆ ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರ ಇತ್ತೀಚಿನ ಟೀಕೆಗಳ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ರಾಜನಾಥ್ ಸಿಂಗ್, ” ಅವರು ಎಂದಾದರೂ ಕಾಶ್ಮೀರವನ್ನು ಪಡೆಯಬಹುದೆ? ಅವರು ಪಾಕ್ ಆಕ್ರಮಿತ ಕಾಶ್ಮೀರದ ಬಗ್ಗೆ ಚಿಂತಿಸಬೇಕು. ದಾಳಿ ಮಾಡುವ […]