ಒಂದೇ ವಾರದಲ್ಲಿ 1000 ಕೋಟಿ ರೂ. ಕ್ಲಬ್ ಸೇರಿದ `ಧುರಂಧರ್ 2′: ಕಡಿಮೆ ಅವಧಿಯಲ್ಲಿ ರೆಕಾರ್ಡ್ ಮಾಡಿದ ಎರಡನೇ ಭಾರತೀಯ ಸಿನಿಮಾ.!

ಆದಿತ್ಯ ಧರ್ ನಿರ್ದೇಶನದ, ರಣವೀರ್ ಸಿಂಗ್ ಅಭಿನಯದ `ಧುರಂಧರ್ 2′ ಸಿನಿಮಾ ಬಿಡುಗಡೆಯಾದ ಒಂದೇ ವಾರದಲ್ಲಿ 1000 ಕೋಟಿ ರೂ. ಕ್ಲಬ್ ಸೇರಿದೆ. ಯಶಸ್ವಿ ಪ್ರದರ್ಶನದೊಂದಿಗೆ ಒಂದರ ನಂತರ ಒಂದರಂತೆ ದಾಖಲೆಗಳನ್ನು ಮುರಿಯುತ್ತಿದೆ. ವಿಶ್ವದಾದ್ಯಂತ ಒಟ್ಟು 1,006 ಕೋಟಿ ರೂ.ಗಳಷ್ಟು ಗಳಿಕೆ ಮಾಡಿದೆ. ಕಡಿಮೆ ಅವಧಿಯಲ್ಲಿ ಈ ರೆಕಾರ್ಡ್ ಮಾಡಿದ ಎರಡನೇ ಭಾರತೀಯ ಚಿತ್ರವಾಗಿ ಗುರುತಿಸಿಕೊಂಡಿದೆ. ಆರು ದಿನಗಳಲ್ಲಿ 1,000 ಕೋಟಿ ರೂ.ಗಳ ಗಡಿ ದಾಟಿದ್ದ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ ನಟನೆಯ ‘ಪುಷ್ಪಾ 2′ ಮೊದಲ […]
ಮಾಹೆಯ ಬಿಎಸ್‌ಎಲ್-3 ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಮಾನ್ಯತೆ

ಮಣಿಪಾಲ್: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯ ಬಯೋಸೇಫ್ಟಿ ಲೆವೆಲ್-3 (ಬಿಎಸ್‌ಎಲ್-3) ಪ್ರಯೋಗಾಲಯಕ್ಕೆ ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯು ಅಧಿಕೃತ ಪ್ರಮಾಣೀಕರಣ ನೀಡಿದೆ.ಜೀವವೈದ್ಯಕೀಯ ಸಂಶೋಧನೆ, ಸಾಂಕ್ರಾಮಿಕ ರೋಗ ನಿಯಂತ್ರಣ ಹಾಗೂ ಜಾಗತಿಕ ಆರೋಗ್ಯ ಸುರಕ್ಷೆಯಲ್ಲಿ ಶ್ರೇಷ್ಠತೆ ಸಾಧಿಸುವ ವಿಶ್ವವಿದ್ಯಾಲಯದ ಬದ್ಧತೆಯ ಹಾದಿಯಲ್ಲಿ ಇದೊಂದು ಪ್ರಮುಖ ಮೈಲಿಗಲ್ಲಾಗಿದೆ. ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಯ (ಎಂಐವಿ) ಸಂಶೋಧನೆ, ರೋಗ ಪತ್ತೆ ಮತ್ತು ತರಬೇತಿ ಕಾರ್ಯಗಳಿಗೆ ಈ ಸಾಧನೆ ಮಹತ್ತರ ಬಲ […]
ಆದಿತ್ಯ ಬಿರ್ಲಾ ಪಾಲಾದ RCB; IPL ಇತಿಹಾಸದಲ್ಲೇ ಅತಿದೊಡ್ಡ ಮಾರಾಟ.!

ಬೆಂಗಳೂರು: ಹಾಲಿ ಚಾಂಪಿಯನ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಐಪಿಎಲ್ ಇತಿಹಾಸದಲ್ಲೇ ಭಾರೀ ದೊಡ್ಡ ಮೊತ್ತಕ್ಕೆ ಮಾರಾಟವಾಗಿದೆ ಎಂದು ವರದಿಯಾಗಿದೆ. ನಾಲ್ಕು ದೈತ್ಯ ಕಂಪನಿಗಳು ಜಂಟಿಯಾಗಿ ಆರ್ ಸಿಬಿ ಫ್ರಾಂಚೈಸಿಯನ್ನು ಬರೋಬ್ಬರಿ 178 ಬಿಲಿಯನ್ ಡಾಲರ್(16,600 ಕೋಟಿ ರೂ.)ಗೆ ಖರೀದಿ ಮಾಡಿದೆ ಎಂದು ವರದಿಯಾಗಿದೆ. ಡಿಯಾಜಿಯೊ ಸಂಸ್ಥೆಯಿಂದ ಆರ್ ಸಿಬಿ ತಂಡವನ್ನು ಬಿರ್ಲಾ ಗ್ರೂಪ್, ಟೈಮ್ಸ್ ಆಫ್ ಇಂಡಿಯಾ ಗ್ರೂಪ್, ಬೋಲ್ಡ್ ವೆಂಚರ್ಸ್ ಮತ್ತು ಅಮೆರಿಕದ ಖಾಸಗಿ ಇಕ್ವಿಟಿ ದೈತ್ಯ ಬ್ಲ್ಯಾಕ್‌ಸ್ಟೋನ್ ಜಂಟಿಯಾಗಿ ಖರೀದಿ ಮಾಡಿದೆ […]
RCB’ಗೆ ಅಧಿಕೃತ ಡೈರಿ ಪಾರ್ಟ್ನರ್ ಆದ ಕೆಎಂಎಫ್ ನಂದಿನಿ.

ಬೆಂಗಳೂರು: ಪ್ರತಿಷ್ಠಿತ ಐಪಿಎಲ್ ಟಿ-20 ಲೀಗ್ ಪಂದ್ಯಾವಳಿಯು ಇದೇ 28ರಿಂದ ಆರಂಭವಾಗುತ್ತಿದ್ದು, ರಾಜ್ಯದ ಹೆಮ್ಮಯ ಕರ್ನಾಟಕ ಹಾಲು ಮಹಾಮಂಡಳ (ಕೆಎಂಎಫ್) ನಂದಿನಿ ಬ್ರ್ಯಾಂಡ್ ಅನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಧಿಕೃತ ಡೇರಿ ಪಾಲುದಾರರಾಗಿ ಕೈಜೋಡಿಸಿದೆ. ನಂದಿನಿ ಬ್ರ್ಯಾಂಡ್ ಸದಾ ಕ್ರೀಡೆ ಮತ್ತು ಯುವ ಜನತೆಯನ್ನು ಪ್ರೋತ್ಸಾಹಿಸುವ ಧ್ಯೇಯವನ್ನು ಹೊಂದಿದ್ದು, ರಾಜ್ಯದ ಹೆಮ್ಮೆಯ ಎರಡು ಪ್ರತಿಷ್ಠಿತ ಬ್ರ್ಯಾಂಡ್‌ಗಳಾದ ‘ನಂದಿನಿ ಮತ್ತು ಆರ್‌ಸಿಬಿ’ ಒಂದಾಗಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ತಿಳಿಸಿದ್ದಾರೆ. […]
ಕೊಲಂಬಿಯಾ ಸೇನಾ ವಿಮಾನ ಅಪಘಾತ: 66 ಸೈನಿಕರು ಮೃತ್ಯು.

ಕೊಲಂಬಿಯಾ: ನಿನ್ನೆ ಕೊಲಂಬಿಯಾದ ಸೇನಾ ವಿಮಾನದ ಅಪಘಾತದಲ್ಲಿ ಮೃತ ಸೈನಿಕರ ಸಂಖ್ಯೆ 66 ಎಂದು ಕೊಲಂಬಿಯಾ ಸೇನಾ ವಕ್ತಾರರು ಅಧಿಕೃತ ಮಾಹಿತಿ ನೀಡಿದ್ದಾರೆ. ವಿಮಾನದಲ್ಲಿ ಸಿಬ್ಬಂದಿ ಸೇರಿ ಒಟ್ಟು 115 ಜನ ಇದ್ದರು ಎಂದು ತಿಳಿಸಿದ್ದಾರೆ. 66 ಶವಗಳನ್ನು ಶವಾಗಾರಕ್ಕೆ ಸ್ಥಳಾಂತರಿಸಲಾಗಿದ್ದು, ಇನ್ನೂ 15 ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಉಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವಿವರಿಸಿದ್ದಾರೆ. ಮೃತರಲ್ಲಿ 6 ವಾಯುಸೇನೆ ಇಬ್ಬರು ಪೊಲೀಸ್ ಅಧಿಕಾರಿಗಳು ಹಾಗೂ ಉಳಿದವರು ಸೇನೆಗೆ ಸಂಬಂಧಿಸಿದವರು ಎಂದು ತಿಳಿಸಿದ್ದಾರೆ. ಕೊಲಂಬಿಯಾದ ಈಕ್ವೆಡಾರ್ ಗಡಿ ಬಳಿ […]