ಆ ಕಪ್ಪು ಸುಂದರಿ, ನನ್ನ ಬಾಳಿಗೆ ಬಿಳುಪು ತಂದಳು..

ಅವಳು ಎಂದರೆ ನನಗೆ ಏನೋ ಸಂತೋಷ, ಹುರುಪು ಉತ್ಸಾಹ ಎಲ್ಲವೂ.  ಒಬ್ಬರ ಬಾಳಿನಲ್ಲಿ ತನ್ನ ಸಂಗಾತಿ ಬಂದರೆ ಮಾತ್ರ ಜೀವನ ಪಾವನವಾಗಲು ಸಾಧ್ಯ ಅಲ್ಲವೇ. ಹೌದು! ಇದು ಅಕ್ಷರಶಃ ಸತ್ಯ. ಹೀಗೆ ನಾನು ಸಹ ನನ್ನ ಸಂಗಾತಿಯನ್ನು ಹುಡುಕುವ ಭರದಲ್ಲಿದ್ದೆ. ಈ ಪಯಣ ಪ್ರಾರಂಭವಾದದ್ದು ಪದವಿ ಜೀವನದಲ್ಲಿ. ಆ ವಯಸ್ಸೇ ಹಾಗೆ ಅದು ಜೀವನದಲ್ಲಿ ಮರೆಯಲಾಗದ ಕಾಲಘಟ್ಟ. ಆಗ ವಯಸ್ಸು ಅರಳುತ್ತಿರುವ ಗುಲಾಬಿಯಂತೆ  ಅದರದೇ ಆದ ಛಾಪನ್ನು ಮೂಡಿಸುತ್ತದೆ. ಈ ವಯಸ್ಸಿನಲ್ಲಿ ತನ್ನ ಸಂಗಾತಿಯನ್ನು ಹುಡುಕುವ ಹಂಬಲ […]

ಮನದಲ್ಲೇ ಮುಚ್ಚಿಕೊಂಡೆಯಾ ವಿಧಿಯ ಮಾತು?

ಸುಂದರವಾದ ಪ್ರಾಥಮಿಕ ಶಾಲಾ ದಿನಗಳನ್ನು ಮುಗಿಸಿ ಪ್ರೌಢಶಾಲೆಗೆ ಹೆಜ್ಜೆ ಹಾಕಿದ್ದೆ. ಎಂಟನೆಯ ತರಗತಿಗೆ ದಾಖಲಾತಿಯಾಗಿ ಹೊಸ ಹೊಸ ಗೆಳೆಯರ ಪರಿಚಯವಾಗಿ ಅವರೊಂದಿಗೆ ಆಟ ಮತ್ತು ಪಾಠದಲ್ಲಿ ತೊಡಗಿಸಿಕೊಂಡಿದ್ದೆ. ಸಮಯದ ಓಟ ಅದಾಗಲೇ ಮುಂದೆ ಸಾಗಿತ್ತು. ಮಧ್ಯವಧಿ ಪರೀಕ್ಷೆ ಮುಗಿಸಿ, ರಜಾದಿನಗಳೂ ಮುಗಿದು, ಮತ್ತೆ ತರಗತಿ ಪ್ರಾರಂಭವಾದವು.ಬಹಳ ಆತ್ಮೀಯತೆಯ ಸ್ವಭಾವ ನನ್ನದು. ಹಾಸ್ಯಮಯ ಮಾತುಗಳನ್ನೇ ಜಾಸ್ತಿ ಮಾತಾಡುತ್ತಿದ್ದುದರಿಂದ ಎಲ್ಲರಿಗೂ ನಾನೆಂದರೆ ಅಚ್ಚು ಮೆಚ್ಚು, ಹೀಗೆ ದಿನ ಕಳೆಯುತ್ತಿರುವಾಗಲೇ ನನಗೊಂದು ಗೆಳತಿಯ ಪರಿಚಯವಾಗಿತ್ತು. ದ್ವಿತೀಯ ಪಿಯುಸಿಯಲ್ಲಿ ಓದುತ್ತಿದ್ದ ಆಕೆಗೆ ನನ್ನ […]