World Yoga Day : ಯೋಗದಲ್ಲಿ ನಟಿ ರಾಗಿಣಿ ದ್ವಿವೇದಿ ಕಂಡಂತೆ

ಸ್ಯಾಂಡಲ್‌ವುಡ್ (Sandalwood) ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಅವರು ಆರೋಗ್ಯಕ್ಕೂ ಸಾಕಷ್ಟು ಸಮಯ ಕೊಡುತ್ತಾರೆ. ಸದಾ ಒಂದಲ್ಲಾ ಒಂದು ಫೋಟೋಶೂಟ್‌ನಿಂದ ನಿದ್ದೆಗೆಡಿಸುವ ನಟಿ ರಾಗಿಣಿ ಈ ಬಾರಿ ಯೋಗ ಲುಕ್ ಮೂಲಕ ಗಮನ ಸೆಳೆದಿದ್ದಾರೆ. ಹಲವು ಯೋಗಗಳನ್ನು ಮಾಡಿ ಅವುಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿದಿದ್ದಾರೆ.

ಕೈಕೊಟ್ಟ ಕೊಟ್ಟಿದೆ ಮುಂಗಾರು,ಎಪಿಎಂಸಿ ಮಾರುಕಟ್ಟೆಗೆ ತರಕಾರಿಯ ಆವಕ ಪ್ರಮಾಣವೂ ಕಡಿಮೆ…ಹೆಚ್ಚಿದೆ ತರಕಾರಿ ಬೆಲೆ..

ವಿಜಯಪುರ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಜಿಲ್ಲೆಯಲ್ಲಿ ಅನ್ನದಾತರು ಇನ್ನೂ ಬಿತ್ತನೆಯನ್ನೇ ಆರಂಭಿಸಿಲ್ಲ. ಜೊತೆಗೆ ಬಿಸಿಲಿನ ತಾಪಮಾನವೂ ಏರಿರುವ ಕಾರಣ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ಆವಕ ಪ್ರಮಾಣವೂ ಕಡಿಮೆಯಾಗಿ ಸಗಟು ಮಾರುಕಟ್ಟೆಯಲ್ಲೇ ಬೆಲೆ ಗಗನಕ್ಕೇರಿದೆ.ವಿಜಯಪುರ ಜಿಲ್ಲೆಯ ಸುತ್ತಮುತ್ತಲಿನ ಭಾಗದಲ್ಲಿ ರೈತರು ತರಕಾರಿಯನ್ನು ಸಮೃದ್ಧವಾಗಿ ಬೆಳೆಯುತ್ತಾರೆ. ಆದರೆ ಮಳೆಯ ಅಭಾವದಿಂದ ತರಕಾರಿ ಬೆಳೆ ಒಣಗಿದ್ದು, ಮಾರುಕಟ್ಟೆಗೆ ಆವಕ ಪ್ರಮಾಣ ಗಣನೀಯ ಕ್ಷೀಣಿಸಿದೆ. ತರಕಾರಿ ಬೆಲೆ ಏರಿಕೆಯಿಂದ ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ. ಇದರ ಪರಿಣಾಮ ವಾರದ ಸಂತೆಯಲ್ಲೂ ತರಕಾರಿ […]

ನಟ ಜಗ್ಗೇ​ಶ್​ಗೆ 6 ವಾರ ದಿಗ್ಬಂಧನ ಅಚಾತುರ್ಯ ನಡಿಗೆಯಿಂದ ಪಾದದ ಮೂಳೆ ಮುರಿತ.. !

ನಟ ಹಾಗೂ ರಾಜ್ಯಸಭಾ ಸದಸ್ಯರಾಗಿರುವ ನವರಸ ನಾಯಕ ಜಗ್ಗೇಶ್​ ಅವಸರದ ನಡಿಗೆಯಿಂದ ಕಾಲು ಮುರಿದುಕೊಂಡಿದ್ದಾರೆ‌. ಈ ವಿಷಯವನ್ನು ಸ್ವತಃ ಜಗ್ಗೇಶ್ ಅವರೇ ಸೋಷಿಯಲ್ ಮೀಡಿಯಾದ ಮೂಲಕ ತಿಳಿಸಿದ್ದಾರೆ.ನವರಸ ನಾಯಕ ಜಗ್ಗೇಶ್​ ಅವಸರದ ನಡಿಗೆಯಿಂದ ಕಾಲು ಮುರಿದುಕೊಂಡಿದ್ದಾರೆ‌. ಈ ವಿಷಯವನ್ನು ನಟ ಸೋಷಿಯಲ್​ ಮೀಡಿಯಾ ಮೂಲಕ ತಿಳಿಸಿದ್ದಾರೆ. ಕಾಲು ಮುರಿದುಕೊಂಡು ಚಿಕಿತ್ಸೆ ಪಡೆದುಕೊಂಡಿರುವ ಫೋಟೋವನ್ನು ಹಂಚಿಕೊಂಡಿರುವ ಅವರು, “ಸಣ್ಣ ಅಚಾತುರ್ಯ ನಡಿಗೆಯಿಂದ ಪಾದದ ಮೂಳೆ ಮುರಿತ! 6 ವಾರದ ದಿಘ್ಭಂಧನ ನಡಿಗೆಗೆ” ಎಂದು ಬರೆದುಕೊಂಡಿದ್ದಾರೆ. ಇತ್ತೀಚೆಗಷ್ಟೇ ನಟ ಜಗ್ಗೇಶ್​ […]

ಸಮತೋಲಿತ ಆಹಾರ ಸೇವಿಸಿರಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಿರಿ

ಕಣ್ಣು ಮಾನವನ ದೇಹದ ಬಹುಮುಖ್ಯ ಅಂಗಗಳಲ್ಲಿ ಒಂದು. ಕಣ್ಣಿನ ಆರೋಗ್ಯವನ್ನು ಕಾಪಾಡುವುದು ಅತ್ಯಂತ ಮುಖ್ಯವಾಗಿದೆ. ಇಂದಿನ ಕಲುಷಿತ ವಾತಾವರಣ ಮತ್ತು ಅತಿಯಾದ ಮೊಬೈಲ್, ಕಂಪ್ಯೂಟರ್ ಬಳಕೆಯಿಂದ ಚಿಕ್ಕ ಮಕ್ಕಳಿಂದ ಹಿಡಿದು, ವೃದ್ದವರೆಗೂ ದೃಷ್ಟಿ ದೋಷ ಎಲ್ಲರನ್ನೂ ಬಾಧಿಸುತ್ತದೆ. ಕಣ್ಣಿನ ಆರೋಗ್ಯಕ್ಕಾಗಿ ಪೌಷ್ಠಿಕಾರಕ ಆಹಾರವನ್ನು ಸೇವಿಸುವುದು ಅವಶ್ಯವಾಗಿದ್ದು, ಅವುಗಳ ಮಾಹಿತಿ ಇಲ್ಲಿದೆ. ಲುಟೀನ್ ಮತ್ತು ಝೀಕ್ಸಾಂಥಿನ್ ಲುಟೀನ್ ಮತ್ತು ಝೀಕ್ಸಾಂಥಿನ್ ಎಂಬ ಈ ಉತ್ಕರ್ಷಣ ನಿರೋಧಕಗಳು ಸೂರ್ಯನ ಬೆಳಕಿನಲ್ಲಿರುವ ಯುವಿ ಕಿರಣಗಳಂತಹ ಹಾನಿಕಾರಕ ಅಧಿಕ ಶಕ್ತಿಯ ಬೆಳಕಿನ ಅಲೆಗಳಿಂದ […]

ನಾನ್-ಸ್ಟಿಕ್ ಪಾತ್ರೆಗಳಲ್ಲಿವೆ ಹಾನಿಕಾರಕ ಅಂಶಗಳು! ಎರಕಹೊಯ್ದ ಕಬ್ಬಿಣದ ಪಾತ್ರೆಯಲ್ಲಿದೆ ಹಲವಾರು ಪ್ರಯೋಜನಗಳು!

ಎರಕಹೊಯ್ದ ಕಬ್ಬಿಣದ ಅಡುಗೆ ಪಾತ್ರೆಗಳ ಶಾಖವನ್ನು ಉಳಿಸಿಕೊಳ್ಳುವ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿವೆ. ಕಾಸ್ಟ್ ಐರನ್ ಅಥವಾ ಎರಕಹೊಯ್ದ ಕಬ್ಬಿಣದ ಅಡುಗೆ ಪಾತ್ರೆಗಳು ಇತ್ತೀಚಿನ ದಿನಗಳಲ್ಲಿ ತನ್ನ ಆರೋಗ್ಯ ಪ್ರಯೋಜನಗಳಿಂದಾಗಿ ಹೆಚ್ಚು ಪ್ರಚಾರ ಪಡೆಯುತ್ತಿದೆ. ಭಾರತದಲ್ಲಿ ಬಹಳ ಹಿಂದಿನ ಕಾಲದಿಂದಲೂ ಅಡುಗೆಗಾಗಿ ಮಣ್ಣಿನ ಅಥವಾ ಪರಿಶುದ್ದ ಕಬ್ಬಿಣದಿಂದ ಮಾಡಲಾದ ಅಡುಗೆ ಪಾತ್ರೆಗಳನ್ನು ಬಳಸಲಾಗುತ್ತಿತ್ತು. ಆದರೆ ಪಾಶ್ಚಾತ್ಯ ಪ್ರಭಾವದಿಂದ ಮಣ್ಣಿನ ಮಡಕೆಗಳು ಮತ್ತು ಕಬ್ಬಿಣದ ಪಾತ್ರೆಗಳು ಮೂಲೆಗುಂಪಾಗಿ ನಾನ್ ಸ್ಟಿಕ್ ಕುಕ್ ವೇರ್ ಗಳು ಹೆಚ್ಚು ಮುನ್ನೆಲೆಗೆ ಬಂದವು. ಆದರೀಗ, […]