ನಾನ್-ಸ್ಟಿಕ್ ಪಾತ್ರೆಗಳಲ್ಲಿವೆ ಹಾನಿಕಾರಕ ಅಂಶಗಳು! ಎರಕಹೊಯ್ದ ಕಬ್ಬಿಣದ ಪಾತ್ರೆಯಲ್ಲಿದೆ ಹಲವಾರು ಪ್ರಯೋಜನಗಳು!

ಎರಕಹೊಯ್ದ ಕಬ್ಬಿಣದ ಅಡುಗೆ ಪಾತ್ರೆಗಳ ಶಾಖವನ್ನು ಉಳಿಸಿಕೊಳ್ಳುವ ಅತ್ಯುತ್ತಮ ಸಾಮರ್ಥ್ಯವನ್ನು ಹೊಂದಿವೆ. ಕಾಸ್ಟ್ ಐರನ್ ಅಥವಾ ಎರಕಹೊಯ್ದ ಕಬ್ಬಿಣದ ಅಡುಗೆ ಪಾತ್ರೆಗಳು ಇತ್ತೀಚಿನ ದಿನಗಳಲ್ಲಿ ತನ್ನ ಆರೋಗ್ಯ ಪ್ರಯೋಜನಗಳಿಂದಾಗಿ ಹೆಚ್ಚು ಪ್ರಚಾರ ಪಡೆಯುತ್ತಿದೆ. ಭಾರತದಲ್ಲಿ ಬಹಳ ಹಿಂದಿನ ಕಾಲದಿಂದಲೂ ಅಡುಗೆಗಾಗಿ ಮಣ್ಣಿನ ಅಥವಾ ಪರಿಶುದ್ದ ಕಬ್ಬಿಣದಿಂದ ಮಾಡಲಾದ ಅಡುಗೆ ಪಾತ್ರೆಗಳನ್ನು ಬಳಸಲಾಗುತ್ತಿತ್ತು. ಆದರೆ ಪಾಶ್ಚಾತ್ಯ ಪ್ರಭಾವದಿಂದ ಮಣ್ಣಿನ ಮಡಕೆಗಳು ಮತ್ತು ಕಬ್ಬಿಣದ ಪಾತ್ರೆಗಳು ಮೂಲೆಗುಂಪಾಗಿ ನಾನ್ ಸ್ಟಿಕ್ ಕುಕ್ ವೇರ್ ಗಳು ಹೆಚ್ಚು ಮುನ್ನೆಲೆಗೆ ಬಂದವು. ಆದರೀಗ, […]

ನವಗ್ರಹಗಳನ್ನು ಪ್ರತಿನಿಧಿಸುವ ನವರತ್ನ ಧಾರಣೆಯ ಮಾನಸಿಕ ಮತ್ತು ದೈಹಿಕ ಆರೋಗ್ಯ ಪ್ರಯೋಜನಗಳು

ನವರತ್ನಗಳು ಹಿಂದೂ ಜ್ಯೋತಿಷ್ಯ ಶಾಸ್ತ್ರದಲ್ಲಿ ನವಗ್ರಹಗಳನ್ನು ಪ್ರತಿನಿಧಿಸುವ 9 ರತ್ನಗಳಾಗಿವೆ. ರತ್ನಗಳ ಗುಣಸ್ವರೂಪ ಮತ್ತು ಬಣ್ಣಗಳ ಆಧಾರದಲ್ಲಿ ಪ್ರತಿಯೊಂದು ಗ್ರಹಕ್ಕೆ ಒಂದು ರತ್ನವನ್ನು ಸೂಚಿಸಲಾಗಿದೆ. ಗುಲಾಬಿ ಬಣ್ಣವನ್ನು ಹೊಂದಿರುವ ಮಾಣಿಕ್ಯ ಅಥವಾ ರೂಬಿ ಸೂರ್ಯನಿಗೂ, ಮುತ್ತು ಚಂದ್ರನಿಗೂ, ಹವಳವನ್ನು ಕುಜನಿಗೂ, ಮರಕತ ಅಥವಾ ಪಚ್ಚೆ ಬುಧನಿಗೂ, ಪುಷ್ಯರಾಗ ಗುರುವಿಗೂ, ಹೊಳೆಯುವ ವಜ್ರ ಶುಕ್ರನಿಗೂ, ನೀಲಮಣಿ ಶನಿಗೂ, ಗೋಮೇಧಿಕಾ ರಾಹು, ವೈಢೂರ್ಯ ಅಥವಾ ಬೆಕ್ಕಿನಕಣ್ಣು ಕೇತುಗ್ರಹಕ್ಕೂ ನಿಯೋಜಿತವಾಗಿದೆ. ನವರತ್ನ ಖಚಿತ ಉಂಗುರ ಅಥವಾ ಆಭರಣಗಳನ್ನು ನಿರ್ದಿಷ್ಟ ರೀತಿಯಲ್ಲಿ ತಯಾರಿಸಿ […]

ಡಾ. ಟಿಎಂಎ ಪೈ ಆಸ್ಪತ್ರೆ ಉಡುಪಿಯಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಆರೋಗ್ಯ ತಪಾಸಣೆ ಪ್ಯಾಕೇಜ್ ಗಳು

ಉಡುಪಿ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಆಶ್ರಯದಲ್ಲಿ ಮುಂಚೂಣಿಯಲ್ಲಿರುವ ಆರೋಗ್ಯ ಸಂಸ್ಥೆಯಾದ ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯು ವಿಶ್ವ ಆರೋಗ್ಯ ದಿನದ ಅಂಗವಾಗಿ ಉಡುಪಿ ಜಿಲ್ಲೆಯ ಸಾರ್ವಜನಿಕರಿಗಾಗಿ ವಿಶೇಷ ಆರೋಗ್ಯ ತಪಾಸಣೆ ಪ್ಯಾಕೇಜ್ ಗಳನ್ನು ನೀಡುತ್ತಿದೆ. “ಹೆಲ್ತ್ ಡೇ ಪ್ಯಾಕೇಜ್” ನಲ್ಲಿ ಸಮಗ್ರ ದೈಹಿಕ ಪರೀಕ್ಷೆ, ರಕ್ತ ಪರೀಕ್ಷೆಗಳು, ಮೂತ್ರ ಪರೀಕ್ಷೆಗಳು, ಇಸಿಜಿ, ಎದೆಯ ಎಕ್ಸ್-ರೇ, ಹೊಟ್ಟೆಯ ಅಲ್ಟ್ರಾಸೌಂಡ್ ಮತ್ತು ಜನರಲ್ ಮೆಡಿಸಿನ್‌ನ ತಜ್ಞರೊಂದಿಗೆ ಸಮಾಲೋಚನೆಯನ್ನು ಒಳಗೊಂಡಿದೆ. ಹೆಚ್ಚುವರಿಯಾಗಿ “ಹೆಲ್ತ್ ಡೇ ಕಾರ್ಡಿಯಾಕ್ ಪ್ಯಾಕೇಜ್” ನಲ್ಲಿ […]

ಬಿಸಿಲಿನ ಧಗೆಯಿಂದ ತನುವನ್ನು ತಂಪಾಗಿಸಿಕೊಳ್ಳಲು ನೈಸರ್ಗಿಕ ಆರೋಗ್ಯಕರ ಪೇಯಗಳನ್ನು ಸೇವಿಸಿರಿ

ಕರಾವಳಿಯ ಭಾಗದಲ್ಲಿ ಬಿಸಿಲು ಧಗಧಗಿಸುತ್ತಿದ್ದು, ಮಂಗಳೂರಿನಲ್ಲಿ 39ಡಿಗ್ರಿ ಸೆಲ್ಸಿಯಸ್ ನ ಅತ್ಯಾಧಿಕ ತಾಪಮಾನ ದಾಖಲಾಗಿದೆ. ಬಿಸಿಲಿನ ತಾಪಾಘಾತದಿಂದ ಜನರು ಮಾತ್ರವಲ್ಲದೆ ಪ್ರಾಣಿ ಪಕ್ಷಿಗಳು ಕೂಡಾ ಪ್ರಾಣಕಳೆದುಕೊಳ್ಳುವ ಘಟನೆಗಳು ಭಾರತದಲ್ಲಿ ಸರ್ವೇ ಸಾಮಾನ್ಯ. ಬೇಸಿಗೆ ಕಾಲದಲ್ಲಿ ದೇಹವು ಅತಿ ಹೆಚ್ಚು ನೀರನ್ನು ಕಳೆದುಕೊಳ್ಳುವುದರಿಂದ ಈ ಸಮಯದಲ್ಲಿ ನೀರಿನ ಸೇವನೆಯನ್ನು ಹೆಚ್ಚಿಸುವುದು ಅವಶ್ಯ. ಬರಿಯ ನೀರು ಕುಡಿಯುವ ಬದಲಿಗೆ ಕೆಲವೊಂದು ಆರೋಗ್ಯ ಪೇಯಗಳನ್ನು ಆಹಾರದ ಜೊತೆ ಸೇವಿಸಿದಲ್ಲಿ ತನುವನ್ನು ತಂಪಾಗಿಸುವ ಜೊತೆ ಮನಸ್ಸನ್ನೂ ಉಲ್ಲಾಸಭರಿತವಾಗಿಸಿಕೊಳ್ಳಬಹುದು. ನೀರು ಮಜ್ಜಿಗೆ: ಮಜ್ಜಿಗೆಯ ನಿಯಮಿತ […]

ನಿಮಗೆ ಗೊತ್ತಿರಲಿ ಬಿಪಿ ಇದ್ದವರಿಗೆ, ಇಂತಹ ಹಣ್ಣು- ತರಕಾರಿಗಳು ಬಹಳ ಒಳ್ಳೆಯದು!

How to lower blood pressure naturally: ತಜ್ಞರ ಪ್ರಕಾರ, ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಸುಲಭವಾದ ಮಾರ್ಗವೆಂದರೆ ಆರೋಗ್ಯಕಾರಿಯಾದ ಆಹಾರ ಪದ್ಧತಿ ಹಾಗೂ ಆರೋಗ್ಯಕರವಾದ ಜೀವನಶೈಲಿಯನ್ನು ಅನುಸರಿಸಿಕೊಂಡು ಹೋದರೆ, ಈ ಕಾಯಿಲೆಯನ್ನು ಅಚ್ಚುಕಟ್ಟಾಗಿ ನಿಯಂತ್ರಿಸಬಹುದು. ವೈದ್ಯರೇ ಹೇಳುವ ಪ್ರಕಾರ ಮನುಷ್ಯನ ರಕ್ತಸಂಚಾರದಲ್ಲಿ ಯಾವತ್ತಿಗೂ ಕೂಡ ಏರುಪೇರು ಉಂಟಾಗಬಾರದು. ಒಂದು ವೇಳೆ ರಕ್ತದಲ್ಲಿ ಏರುಪೇರು ಉಂಟಾದರೆ, ಅಧಿಕ ರಕ್ತದೊತ್ತಡದಂತಹ ಕಾಯಿಲೆ, ಕಂಡು ಬರಲು ಶುರು ವಾಗುತ್ತದೆ. ಅದರಲ್ಲೂ ಈ ಕಾಯಿಲೆಯನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ, ಮುಂದಿನ ದಿನಗಳಲ್ಲಿ […]