ಚರ್ಮದ ಕಾಳಜಿ ಮಾಡದೇ ಕೊನೆಗೆ ನನ್ ಕರ್ಮ ಎನ್ನದಿರಿ: ಚರ್ಮದ ರಕ್ಷಣೆಗೆ ಬೊಂಬಾಟ್ ಟಿಪ್ಸ್ ಹೇಳಿದ್ದಾರೆ ಡಾ.ಹರ್ಷಾ ಕಾಮತ್

ನಿಮಗೆ ಗೊತ್ತಿದ್ಯೋ ಇಲ್ವೋ ಗೊತ್ತಿಲ್ಲ. ಮಾಡರ್ನ್ ಜೀವನ ಶೈಲಿ ಹಾಗೂ ಡಯಟ್ ನಿಂದ ಈಗೀಗ ನಮಗೆ ಚರ್ಮದ ಸಮಸ್ಯೆ ಅತೀಯಾಗಿ ಕಾಡ್ತಿದೆ. ಚರ್ಮವನ್ನು ಹೇಗೆ ಕೇರ್ ಮಾಡಿಕೊಳ್ಳಬೇಕು ಎನ್ನುವ ಕುರಿತು ನಮಗೆಲ್ಲಾ ಮಾಹಿತಿ ಕಮ್ಮಿ. ಅದಕ್ಕೋಸ್ಕರವೇ ಚರ್ಮವನ್ನು ಕಾಂತಿಯುತವಾಗಿ ಇಟ್ಟುಕೊಳ್ಳಲು ಏನೇನ್ ಮಾಡ್ಬೇಕು ಎನ್ನುವ ಕುರಿತು ಒಂದಷ್ಟ್ ಮಾಹಿತಿ ಇಲ್ಲಿದೆ ನೋಡಿ: ಚರ್ಮದ ರಕ್ಷಣೆಗೆ ಸಿಂಪಲ್ ಐಡಿಯಾಗಳು: *ಪಿಂಪಲ್ಸ್- ಇದು ಹಾರ್ಮೋನಲ್ ಇಂಬ್ಯಾಲೆನ್ಸ್, ಜಿಡ್ಡಿನ ಪದಾರ್ಥ, ಜಂಕ್ ಫುಡ್ ,ಸ್ಟ್ರೆಸ್ ಇಂದ ಬರುತ್ತದೆ .ಪಿಂಪಲ್ಸ್ ಬಂದಾಗ ಅದನ್ನು […]
ಬೇಸಿಗೆಯಲ್ಲಿ ಆರೋಗ್ಯ ಕಾಪಾಡಲು ಏನೇನ್ ಮಾಡ್ಬೇಕು?: ನೀವಿದನ್ನು ಪಾಲಿಸದೇ ಇದ್ರೆ ನಿಮ್ ಆರೋಗ್ಯ ಢಮಾರ್ !

ಮತ್ತೆ ಬೇಸಿಗೆ ಬಂದಿದೆ. ಗಂಠಲು ಒಣಗಿ ತಂಪಾದ ಪಾನೀಯಗಳಿಗೆ, ಐಸ್ ಕ್ರೀಮ್ ಗಳಿಗೆ ಮೊರೆಹೋಗುವ ಕಾಲವಿದು. ಸೆಕೆ ಆಗುತ್ತಂತ ಸಿಕ್ಕಿದ್ದನ್ನು ಕುಡಿದರೆ, ತಿಂದರೆ ಕೂಡ ತುಂಬಾ ಡೇಂಜರ್. ಬೇಸಿಗೆಯಲ್ಲಿ ನಮ್ಮ ಆರೋಗ್ಯ ಕಾಪಾಡೋದು ಒಂದು ದೊಡ್ಡ ಸವಾಲು. ಇಲ್ಲಿ ಬೇಸಿಗೆಗೆ ನಾವು ಯಾವ್ ತರ ಆಹಾರ ಸೇವಿಸ್ಬೇಕು? ಬೇಸಿಗೆಯಲ್ಲಿ ನಮ್ಮ ಜೀವನ ಶೈಲಿ ಹೇಗಿರ್ಬೇಕು? ಎನ್ನುವ ಬಗ್ಗೆ ಒಂದಷ್ಟು ಟಿಪ್ಸ್ ಕೊಡಲಾಗಿದೆ. ಫಾಲೋ ಮಾಡಿದರೆ ಈ ಬೇಸಿಗೆಯಲ್ಲಿ ಸೇಫಾಗಿರ್ತೀರಾ ಅಷ್ಟೆ. ಇಲ್ಲಾಂದ್ರೆ ನಿಮ್ ಆರೋಗ್ಯ ಢಮಾರ್ ಆಗೋದು […]
ಮಹಿಳೆಯರು ಆರೋಗ್ಯವನ್ನು ಹೇಗೆ ಕಾಪಾಡಬೇಕು?:ನಾರಿಗೊಂದು ಸಲಹೆ:ಡಾ.ಹರ್ಷಾ ಕಾಮತ್ ಕೊಟ್ಟ ಸ್ಪೆಷಲ್ ಟಿಪ್ಸ್

ಮಹಿಳೆಯರಿಗೆ ತಮ್ಮ ಕುಟುಂಬದ ಆರೈಕೆಯ ಜೊತೆ ಜೊತೆಗೆ ತಮ್ಮ ಆರೋಗ್ಯದತ್ತಲೂ ಗಮನ ಕೊಡಬೇಕಾದುದು ತೀರಾ ಅಗತ್ಯ. ಅದರಲ್ಲೂ ದೈಹಿಕ, ಮಾನಸಿಕ ಹಾಗೂ ಭಾವನಾತ್ಮಕ ಆರೋಗ್ಯವೇ ಮಹಿಳೆಗೆ ಭಾಗ್ಯ. ಮಹಿಳೆಯರು ಮಾಡಬೇಕಾದ ಆರೋಗ್ಯ ಕಾಳಜಿ ಕುರಿತು ಕಾರ್ಕಳದ ಡಾ.ಹರ್ಷಾ ಕಾಮತ್ ನೀಡಿರುವ ಮಾಹಿತಿ ಇಲ್ಲಿದೆ ನೋಡಿ. ಮಹಿಳೆಯರಿಗೆ ಪಥ್ಯ ಹೀಗಿದೆ ನೋಡಿ: 40 ಪ್ರಾಯದೊಳಗಿನ ಮಹಿಳೆಯರಿಗೆ ಅಷ್ಟೊಂದು ದೈಹಿಕ ಸಮಸ್ಯೆ ಕಾಡುವುದು ಕಮ್ಮಿ. ಆದರೆ 40 ದಾಟಿದ ಮೇಲೆ ಹಾರ್ಮೋನ್ ಏರುಪೇರಾಗಲು ಆರಂಭವಾಗುತ್ತದೆ . ಆದ್ದರಿಂದ ಅವಳ ಜೀವನ […]
ಆಹಾರದ ಸೇವನೆಗೂ ಒಂದ್ ಕ್ರಮ ಉಂಟು: ಆಹಾರ ಕ್ರಮದ ಬಗ್ಗೆ ಡಾ.ಹರ್ಷಾ ಕಾಮತ್ ಟಿಪ್ಸ್

ಆಹಾರ ಸೇವನೆಯ ಬಗ್ಗೆ ನಾವು ಈ ಬ್ಯುಸಿ ದಿನಗಳಲ್ಲಿ ಅಷ್ಟೊಂದು ಯೋಚಿಸುವುದೇ ಇಲ್ಲ. ಸಿಕ್ಕಿದನ್ನೆಲ್ಲಾ ತಿಂದು ಬಿಡುತ್ತೇವೆ. ಒಟ್ಟಾರೆ ಆಹಾರ ಹೊಟ್ಟೆಗೆ ಹೋದ್ರೆ ಆಯ್ತು ಎನ್ನುವ ಮನಃಸ್ಥಿತಿ ನಮ್ಮದು. ಆದರೆ ಆಹಾರ ಸೇವನೆಗೂ ಒಂದಷ್ಟು ಕ್ರಮಗಳಿವೆ. ನಮ್ಮ ದೇಹ ಪ್ರಕೃತಿಗೆ ಅನುಗುಣವಾಗಿ ಯಾವ ಆಹಾರ ತಿನ್ನಬೇಕು, ತಿನ್ನಬಾರದು ಎನ್ನುವ ಬಗ್ಗೆ ಕಾರ್ಕಳದ ಡಾ. ಹರ್ಷಾ ಕಾಮತ್ ಇಲ್ಲಿ ಒಂದಷ್ಟು ಸಲಹೆ ನೀಡಿದ್ದಾರೆ. ————————————————————————————————— ಒಂದೊಂದು ರೀತಿಯ ಆಹಾರಕ್ಕೂ ಒಂದೊಂದು ರೀತಿಯ ಗುಣಗಳಿವೆ. ಒಂದು ಆಹಾರ ನಮ್ಮ ದೇಹ ಪ್ರಕೃತಿಗೆ […]
ಮದುವೇನಾ?ಆ ದಿನದ ಸೆಂಟರ್ ಆಫ್ ಅಟ್ರಾಕ್ಷನ್ ನೀವೇ ಆಗೋದ್ರಿಂದ ನಿಮ್ಮ ತ್ವಚೆ ಬಗ್ಗೆಯೂ ಇರಲಿ ಕಾಳಜಿ. ಹೇಗೆ?

ಮದುವೆ ಎಂದರೆ ಯಾರಿಗಿರೋಲ್ಲ ಸಂಭ್ರಮ ಹೇಳಿ ? ಶಾಪಿಂಗ್, ಕೌನ್ಸೆಲಿಂಗ್, ಕೇರಿಂಗ್ ಎಲ್ಲವನ್ನೂ ಮಾಡಬೇಕು. ಆ ಮಹತ್ವದ ದಿನದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ನೀವೇ ಆಗೋದ್ರಿಂದ ನಿಮ್ಮ ತ್ವಚೆ ಬಗ್ಗೆಯೂ ಇರಲಿ ಕಾಳಜಿ. ಹೇಗೆ? ಮದುವೆಯ ದಿನಗಳು ಹತ್ತಿರ ಬರುತ್ತಿದ್ದಂತೆ ಕಾಳಜಿ ಹೆಚ್ಚಾದಷ್ಟು ಆತಂಕವೂ ಹೆಚ್ಚುತ್ತದೆ. ಆದರೆ ಕೆಲವೊಂದು ತಪ್ಪುಗಳು ಮದುವೆಯ ದಿನದಂದು ಎದ್ದು ಕಾಣುತ್ತದೆ. ಅಂಥ ಅನಾಹುತ ತಡೆಯಲು ಇಲ್ಲಿವೆ ಟಿಪ್ಸ್… ಸಾಮಾನ್ಯವಾಗಿ ಮದುವೆಗೆ ಒಂದು ವಾರ ಇದ್ದಂತೆ ಬ್ಯೂಟಿ ಪಾರ್ಲರ್‌ಗೆ ಮದುವೆಯ ಹೆಣ್ಣು ಹೋಗುತ್ತಾಳೆ. […]