ಸಣ್ಣ ಪುಟ್ಟ ಸಮಸ್ಯೆಗಳಿಗೂ ಮದ್ದು ತಗೊಳ್ಳುವ ಅಭ್ಯಾಸ ಇದ್ರೆ ಬಿಟ್ಟು ಬಿಡಿ: ರಾಜ್ಯದಲ್ಲೀಗ ಕಳಪೆ ಔಷಧಗಳದ್ದೇ ಸದ್ದು,98 ಕಳಪೆ ಗುಣಮಟ್ಟದ ಔಷಧ ಪತ್ತೆ

ಬೆಂಗಳೂರು: ರಾಜ್ಯದಲ್ಲಿ ಕಳಪೆ ಗುಣಮಟ್ಟದ ಔಷಧಗಳ ಪೂರೈಕೆ ಆತಂಕ ಮೂಡಿಸಿದ್ದು, 2021ರಿಂದ 2026ರ ಆಗಸ್ಟ್ವರೆಗೆ ಒಟ್ಟು 98 ಔಷಧಗಳು ನಿಗದಿತ ಗುಣಮಟ್ಟದ ಮಾನದಂಡ (NSQ) ಪರೀಕ್ಷೆಯಲ್ಲಿ ವಿಫಲವಾಗಿವೆ. ಮಾತ್ರೆ, ಸಿರಪ್, ಟಾನಿಕ್ ಸೇರಿದಂತೆ ವಿವಿಧ ಔಷಧಗಳು ಗುಣಮಟ್ಟ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿರುವುದು ಬೆಳಕಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಕೆಯಾದ ಕೆಲವು ಔಷಧಗಳಲ್ಲೂ ಗುಣಮಟ್ಟದ ಲೋಪ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಪೂರೈಕೆಯಲ್ಲಿ 26 ಔಷಧ ಕಂಪನಿಗಳ ಲೋಪ ದಾಖಲಾಗಿದ್ದು, ಈ ಪೈಕಿ ಕೇವಲ 6 ಕಂಪನಿಗಳ ವಿರುದ್ಧ ಮಾತ್ರ […]
ಲೂಸ್ ಅಡುಗೆ ಎಣ್ಣೆ ಮಾರಾಟ ಶೀಘ್ರವೇ ನಿಷೇಧ? ಸರ್ಕಾರದಿಂದ ಮಹತ್ವದ ಹೆಜ್ಜೆ

ಬೆಂಗಳೂರು: ಲೂಸ್ ಅಡುಗೆ ಎಣ್ಣೆ ಹೆಸರಿನಲ್ಲಿ ನಡೆಯುತ್ತಿರುವ ಕಲಬೆರಕೆ ದಂಧೆಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮಹತ್ವದ ಕ್ರಮಕ್ಕೆ ಮುಂದಾಗಿದೆ. ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಲೂಸ್ ಅಡುಗೆ ಎಣ್ಣೆ ಮಾರಾಟವನ್ನೇ ಸಂಪೂರ್ಣವಾಗಿ ನಿಷೇಧಿಸುವ ಕುರಿತು ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಲೂಸ್ ಎಣ್ಣೆಯಲ್ಲಿ ಕಲಬೆರಕೆ ಮಾಡುವ ಸಾಧ್ಯತೆ ಹೆಚ್ಚಿರುವ ಹಿನ್ನೆಲೆಯಲ್ಲಿ, ಮಾರಾಟ ವ್ಯವಸ್ಥೆಯನ್ನು ನಿಯಂತ್ರಿಸಲು ಆಹಾರ ಸುರಕ್ಷತಾ ಇಲಾಖೆ ಮಾಸ್ಟರ್ ಪ್ಲಾನ್ ರೂಪಿಸುತ್ತಿದೆ. ಈ ಸಂಬಂಧ ಆಹಾರ ಸುರಕ್ಷತಾ ಸಚಿವ ಯು.ಟಿ. […]
ಭಾರತಕ್ಕೆ ಒಂದು ರೆಸಿಪಿ, ವಿದೇಶಕ್ಕೆ ಮತ್ತೊಂದು: ಜನಪ್ರಿಯ ಕಂಪೆನಿಗಳ ಆಹಾರ ಉತ್ಪನ್ನಗಳನ್ನು ತಿನ್ನುವ ಮೊದಲು ಎಚ್ಚರ, ಭಾರತದ ಜನರಿಗೆ ಕಳಪೆ ಗುಣಮಟ್ಟದ ಆಹಾರ ಏಕೆ?

ಸಕ್ಕರೆ, ಉಪ್ಪು ಮತ್ತು ಕೊಬ್ಬಿನ ಅಂಶ ಹೆಚ್ಚಿರುವ ಚಿಪ್ಸ್, ಕೂಲ್ಡ್ರಿಂಕ್ಸ್ ಸೇರಿದಂತೆ ಪ್ಯಾಕೆಟ್ ಆಹಾರಗಳ ಮೇಲೆ ಗ್ರಾಹಕರಿಗೆ ಎಚ್ಚರಿಕೆ ನೀಡಲು ಮುಂಭಾಗದಲ್ಲಿ ಕೆಂಪು ಬಣ್ಣದ ಲೇಬಲ್ ಅಳವಡಿಸುವ ಪ್ರಸ್ತಾವದಿಂದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಹಿಂದೆ ಸರಿದಿದೆ ಎಂದು ರಾಯಿಟರ್ಸ್ ವರದಿ ಮಾಡಿದೆ. ಆಹಾರ ಉದ್ಯಮದ ಪ್ರತಿನಿಧಿಗಳೊಂದಿಗೆ ನಡೆದ ಸಭೆಯ ಬಳಿಕ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಪ್ಯಾಕೆಟ್ಗಳ ಮುಂಭಾಗದಲ್ಲಿ ಕೆಂಪು-ಹಸಿರು ಬಣ್ಣದ ಪೌಷ್ಟಿಕಾಂಶ ಎಚ್ಚರಿಕೆ ಲೇಬಲ್ ಅಳವಡಿಸುವುದಕ್ಕೆ ಆಹಾರ ಕಂಪನಿಗಳು ವಿರೋಧ […]
ರಾಜ್ಯಾದ್ಯಂತ ಒಂದು ವರ್ಷ ಕೃತಕ ಪನ್ನೀರ್’ ನಿಷೇಧ

ಬೆಂಗಳೂರು: ಪನ್ನೀರ್ ಪ್ರಿಯರಿಗೆ ಹಾಗೂ ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಮಹತ್ವದ ಕ್ರಮ ಕೈಗೊಂಡಿದೆ. ಕೃತಕ ‘ಅನಲಾಗ್ ಪನ್ನೀರ್’ ಬಳಕೆಯನ್ನು ಒಂದು ವರ್ಷದ ಅವಧಿಗೆ ರಾಜ್ಯಾದ್ಯಂತ ಸಂಪೂರ್ಣವಾಗಿ ನಿಷೇಧಿಸಿ ಅಧಿಕೃತ ಆದೇಶ ಹೊರಡಿಸಿದೆ. ಸಾಮಾನ್ಯವಾಗಿ ಅಸಲಿ ಪನ್ನೀರ್ನ್ನು ಹಾಲು ಹಾಗೂ ಹಾಲಿನ ಉತ್ಪನ್ನಗಳಿಂದ ತಯಾರಿಸಲಾಗುತ್ತದೆ. ಆದರೆ, ವೆಚ್ಚ ಕಡಿಮೆ ಮಾಡಿ ಹೆಚ್ಚಿನ ಲಾಭ ಗಳಿಸುವ ಉದ್ದೇಶದಿಂದ ಕೆಲ ಹೋಟೆಲ್ಗಳು ಮತ್ತು ರೆಸ್ಟೋರೆಂಟ್ಗಳಲ್ಲಿ ಹಾಲಿನ ಬದಲಿಗೆ ಸಸ್ಯಜನ್ಯ ಎಣ್ಣೆ, ಪಿಷ್ಟ ಹಾಗೂ […]
ಆಹಾರ ಸುರಕ್ಷತಾ ತಪಾಸಣೆಯಲ್ಲಿ ಎಷ್ಟೇ ದೊಡ್ಡವರಾಗಿದ್ದರೂ ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯಿಲ್ಲ: ಆರೋಗ್ಯ ಸಚಿವ ಯು.ಟಿ. ಖಾದರ್

ಮಂಗಳೂರು: ಆಹಾರ ಸುರಕ್ಷತಾ ತಪಾಸಣೆಯಲ್ಲಿ ಎಷ್ಟೇ ದೊಡ್ಡವರಾಗಿದ್ದರೂ, ಸಣ್ಣವರಾಗಿದ್ದರೂ ಯಾರನ್ನೂ ಬಿಡುವುದಿಲ್ಲ. ಜನರ ಆರೋಗ್ಯವೇ ಸರ್ಕಾರದ ಮೊದಲ ಆದ್ಯತೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ. ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವ ಉದ್ದೇಶದಿಂದ ಆಹಾರ ತಯಾರಿಸುವ ಹಾಗೂ ವಿತರಿಸುವ ಸ್ಥಳಗಳು ಮತ್ತು ಆಹಾರ ಉತ್ಪಾದನಾ ಕೇಂದ್ರಗಳನ್ನು ಗುರುತಿಸಿ ರಾಜ್ಯಾದ್ಯಂತ ತಪಾಸಣೆ ಆರಂಭಿಸಲಾಗಿದೆ. ಈ ತಪಾಸಣೆ ಯಾರ ಮೇಲಿನ ವೈಯಕ್ತಿಕ ಕೋಪದಿಂದ ನಡೆಸುತ್ತಿರುವುದಲ್ಲ. ಆಹಾರ ಸುರಕ್ಷತೆ ಹಾಗೂ ನೈರ್ಮಲ್ಯದಲ್ಲಿ ಏನಾದರೂ ಲೋಪಗಳಿದ್ದರೆ ಅವುಗಳನ್ನು ಗುರುತಿಸಿ, ವಾಸ್ತವ ಪರಿಸ್ಥಿತಿಯನ್ನು […]