ಸೆ.25-ವಿಶ್ವ ಫಾರ್ಮಸಿಸ್ಟ್‌ ದಿನ; ನಂಬಿಕೆಗೆ ಪ್ರತೀಕವಾದ ಫಾರ್ಮಸಿಸ್ಟ್‌ಗಳ ಸೇವೆಗೆ ನಮ್ಮದೊಂದು ಸಲಾಂ!

ವೈದ್ಯಕೀಯ ಕ್ಷೇತ್ರದಲ್ಲಿ ಫಾರ್ಮಸಿಸ್ಟ್‌ಗಳ ಸೇವೆ ಅನನ್ಯವಾಗಿದೆ. ವಿವಿಧ ರೋಗಗಳ ವಿರುದ್ಧ ಪರಿಣಾಮಕಾರಿ ಔಷಧ ಕಂಡುಹಿಡಿದು ರೋಗಿಗಳಿಗೆ ಸೂಕ್ತ ಪ್ರಮಾಣ ನೀಡುವಲ್ಲಿ ಮಹತ್ತರ ಪಾತ್ರ ಹೊಂದಿದ್ದಾರೆ. 2009ರಲ್ಲಿ ಇಂಟರ್‌ನ್ಯಾಶನಲ್‌ ಫಾರ್ಮಸುಟಿಕಲ್‌ ಫೆಡರೇಶನ್‌ನ ಆದೇಶದಂತೆ ಪ್ರತಿ ವರ್ಷ ಸೆಪ್ಟಂಬರ್‌ 25ರಂದು ವಿಶ್ವದಾದ್ಯಂತ ಫಾರ್ಮಸಿಸ್ಟ್‌ ದಿನ ಆಚರಿಸಲಾಗುತ್ತಿದೆ.

ಸೆ.25-ವಿಶ್ವ ಫಾರ್ಮಸಿಸ್ಟ್‌ ದಿನ; ನಂಬಿಕೆಗೆ ಪ್ರತೀಕವಾದ ಫಾರ್ಮಸಿಸ್ಟ್‌ಗಳ ಸೇವೆಗೆ ನಮ್ಮದೊಂದು ಸಲಾಂ!

ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗವೇ ಎನಿಸಿಕೊಂಡ ಫಾರ್ಮಸಿ ವಿಭಾಗ ಹಲವು ವರ್ಷಗಳಿಂದ ತನ್ನದೆ ಆದ ಛಾಪು ಮೂಡಿಸಿದೆ. 2009ರಲ್ಲಿ ಇಂಟರ್‌ನ್ಯಾಶನಲ್‌ ಫಾರ್ಮಸುಟಿಕಲ್‌ ಫೆಡರೇಶನ್‌ನ ಆದೇಶದಂತೆ ಪ್ರತಿ ವರ್ಷ ಸೆಪ್ಟಂಬರ್‌ 25ರಂದು ವಿಶ್ವದಾದ್ಯಂತ ಫಾರ್ಮಸಿಸ್ಟ್‌ ದಿನ ಆಚರಿಸಲಾಗುತ್ತಿದೆ.

ಆರೋಗ್ಯ ಕ್ಷೇತ್ರದ ಅವಿಭಾಜ್ಯ ಅಂಗವಾದ ಫಾರ್ಮಸಿ ವಿಭಾಗದ ತಜ್ಞರುಗಳು ತಮ್ಮ ವೃತ್ತಿ ಜೀವನದ ಏಳು-ಬೀಳುಗಳನ್ನು ವಿಮರ್ಶಿಸಿಕೊಂಡು ಕೊರತೆಗಳನ್ನು ಪರಾಮರ್ಶಿಸಿಕೊಂಡು ಮತ್ತೊಮ್ಮೆ ತಮ್ಮನ್ನು ತಾವು ತಮ್ಮ ವೃತ್ತಿಗೆ ಸಮರ್ಪಿಸಿಕೊಂಡು ಮುಂದುವರಿಯುತ್ತ ಶುಭಾಷಯ ವಿನಿಯಮ ಮಾಡಿಕೊಳ್ಳುವ ದಿನವಾಗಿದೆ.

ಔಷಧ ವಿತರಣೆ, ಮಾರಾಟ, ಸಂಗ್ರಹಗಳಲ್ಲಿ ಸಮನ್ವಯ ಸಾಧಿಸಿಕೊಂಡು ಜನಪರ ಕರ್ತವ್ಯ ನಿರ್ವಹಿಸುವ ಹೊಣೆಗಾರಿಕೆ ಫಾರ್ಮಸಿಸ್ಟ್‌ಗಳಿಗೆ ನಿರಂತರ. ವಿಶ್ವದಾದ್ಯಂತ ಸರಕಾರಿ ಆಸ್ಪತ್ರೆಗಳಲ್ಲಿ ಸೇವಾ ನಿಷ್ಠೆ, ಧ್ಯೇಯ ಹೊಂದಿದ ಸಾರ್ವಜನಿಕ ಸಂಸ್ಥೆಗಳಲ್ಲಿ ಅಪೇಕ್ಷಿತ ಜನರಿಗೆ, ರೋಗಿಗಳಿಗೆ ಉಚಿತ ಔಷಧ ಒದಗಿಸುತ್ತಾರೆ. ಈ ರೀತಿಯ ಔಷಧ ಪೂರೈಕೆಯಲ್ಲಿಯೂ ಫಾರ್ಮಸಿಸ್ಟ್‌ಗಳು ವೃತ್ತಿ ನಿರ್ವಹಿಸುತ್ತಾರೆ, ಸೇವೆ ಸಲ್ಲಿಸುತ್ತಾರೆ ಅನ್ನುವುದು ಗಮನಾರ್ಹ.

ವೈದ್ಯರ ನಿರ್ದೇಶನದಂತೆ ಔಷಧ ವಿತರಿಸುವುದು ಬಹುತೇಕ ಜನತೆಗೆ ತಿಳಿದಿರುತ್ತದೆ. ಸುಧಾರಣೆ, ಆವಿಷ್ಕಾರ, ಆಧುನಿಕ ತಂತ್ರಜ್ಞಾನ, ಔಷಧ ಸೇವಾ ಕೇಂದ್ರ ಮತ್ತು ಫಾರ್ಮಸಿಗಳಲ್ಲಿ ಈಗ ಆನ್‌ಲೈನ್‌ ವಹಿವಾಟುಗಳು ಕೂಡ ನಡೆಯುತ್ತದೆ.

ತಜ್ಞ ಫಾರ್ಮಸಿಸ್ಟರು ಜಗತ್ತಿನಾದ್ಯಂತ ಔಷಧ ಇಲ್ಲದ ಕೆಲವಾರು ರೋಗಗಳಿಗೆ ನೂತನ ಔಷಧಗಳಿಗಾಗಿ ಸಂಶೋಧನೆ ನಡೆಸುತ್ತಿದ್ದಾರೆ. ತಜ್ಞ ವೈದ್ಯ ವಿಜ್ಞಾನಿಗಳ ನಿರ್ದೇಶನ, ಸಲಹೆಗಳ ನೆರವು ಫಾರ್ಮಸಿಸ್ಟ್‌ಗಳಿಗೆ ಸಹಕಾರಿಯಾಗಿದೆ. ಔಷಧ ವಿಜ್ಞಾನ ಕ್ಷೇತ್ರದಲ್ಲಿ ಜಾಗತಿಕವಾದ ಜ್ಞಾನ ವಿನಿಮಯ, ಸಂಘಟನೆ, ಜನಪರ ಕಾಳಜಿ, ಗುಣಮಟ್ಟ ಕಾಯ್ದುಕೊಳ್ಳುವುದು ಇತ್ಯಾದಿ ಮಹತ್ತರ ಉದ್ದೇಶಗಳನ್ನು ಪ್ರತಿಪಾದಿಸುತ್ತಾ ಬಂದ ಅಂತಾರಾಷ್ಟ್ರೀಯ ಫಾರ್ಮಾಸ್ಯುಟಿಕಲ್ ಫೆಡರೇಷನ್‌ನ ಹಿನ್ನೆಲೆಯಾಗಿ ಈ ದಿನವನ್ನು ವಿಶ್ವ ಫಾರ್ಮಸಿಸ್ಟ್‌ ದಿನವಾಗಿ ಕಳೆದ 12 ವರ್ಷಗಳಿಂದ ಆಚರಿಸಲಾಗುತ್ತಿದೆ.

ತಜ್ಞ ಔಷಧ ವಿಜ್ಞಾನ ವಿದ್ಯಾವಂತರು, ಪ್ರಾಧ್ಯಾಪಕರು, ಔಷಧ ನಿಯಂತ್ರಣಾಧಿಕಾರಿಗಳು, ಔಷಧ ಪರಿವೀಕ್ಷಕರು, ಫಾರ್ಮಾಸ್ಯುಟಿಕಲ್‌ ಕೈಗಾರಿಕೆಗಳಲ್ಲಿ ಕರ್ತವ್ಯ ನಿರತರಾದ ಫಾರ್ಮಸಿಸ್ಟರು, ಸಂಶೋಧಕರು, ಸರಕಾರಿ, ಖಾಸಗಿ ಆಸ್ಪತ್ರೆಗಳ ಔಷಧಾಲಯಗಳಲ್ಲಿ ಸೇವೆ ಸಲ್ಲಿಸುವ ಫಾರ್ಮಸಿಸ್ಟರು, ಔಷಧ ಅಂಗಡಿಗಳಲ್ಲಿ ಕಾರ್ಯನಿರತ ಫಾರ್ಮಸಿಸ್ಟರು ಇವರೆಲ್ಲ ದಿನಾಚರಣೆಗೆ ಒಳಪಡುತ್ತಾರೆ.