ನಾನ್ ವೆಜ್ ತಿಂತಾ ಕೋಲ್ಡ್ ಡ್ರಿಂಕ್ ಕುಡಿಯೋ ಅಭ್ಯಾಸ ನಿಮಗಿದ್ಯಾ: ಹಾಗಾದ್ರೆ ಇಲ್ಲಿ ಕೇಳಿ !

ಯಾವುದಾದ್ರೂ ಪಾರ್ಟಿ ಗೆಟ್ ಟುಗೆದರ್ ಅಥವಾ ಮನೆಯಲ್ಲಿ ನಾನ್ ವೆಜ್ ಅಡುಗೆ ಮಾಡಿದಾಗ ತುಂಬ ಮಂದಿಗೆ ಊಟದ ಜೊತೆಗೆ ಕೋಲ್ಡ್ ಡ್ರಿಂಕ್ ಕುಡಿಯುವ ಅಭ್ಯಾಸ ಇದ್ದೇ ಇರುತ್ತದೆ. ಬಿಸಿಬಿಸಿ ಊಟದ ಜೊತೆಗೆ ತಂಪು ಪಾನೀಯ ಹಾಯೆನ್ನಿಸುತ್ತದೆ ಎಂದೇ ಕುಡಿಯುವವರು ತುಂಬಾ ಮಂದಿ ಇದ್ದಾರೆ. ಆದರೆ ಊಟದ ಜೊತೆಗೆ ಅಥವಾ ಊಟವಾದ ಕೂಡಲೇ ಕೋಲ್ಡ್ ಡ್ರಿಂಕ್ ಕುಡಿದರೆ ಆಗುವ ಅಪಾಯ ತುಂಬಾನೇ ಇದೆ. ಈ ಮಾಹಿತಿ ಓದಿ ಇನ್ನಾದರೂ ಊಟದ ಸಮಯದಲ್ಲಿ ಅದೂ ನಾನ್ ವೆಜ್ ಜೊತೆಯಲ್ಲಿ ಕೋಲ್ಡ್ […]

ಈ ಮಹಿಳೆ ಕೊಟ್ಟ ಸಿಂಪಲ್ ಟಿಪ್ಸ್ ಫಾಲೋ ಮಾಡಿದ್ರೆ ಕೆಲ ದಿನಗಳಲ್ಲೇ ತೂಕ ಇಳಿಸಬಹುದು !

ತೂಕ ಇಳಿಸೋದೇ ಈ ಕಾಲದ ಬಹುತೇಕ ಮಂದಿಯ ದೊಡ್ಡ ಸಮಸ್ಯೆ, ಸುಲಭದಲ್ಲಿ ತೂಕ ಇಳಿಸಲು ಏನಾದ್ರೂ ಟಿಪ್ಸ್ ಇದ್ರೆ ಹೇಳಿ ಎಂದು ಕೇಳುವವರಿದ್ದಾರೆ. ಅಂತವರಿಗೆ  ಇತ್ತೀಚೆಗೆ ಸಿಂಪಲ್ಲಾಗಿ ಕೆಲವು ದಿನಗಳಲ್ಲೇ 33 ಕೆ ಜಿ ತೂಕ ಇಳಿಸಿಕೊಂಡ ತರಬೇತುದಾರರಾದ ನಿಧಿ ಗುಪ್ತಾ ಕೆಲವು ಸಿಂಪಲ್ ಟಿಪ್ಸ್ ಗಳನ್ನು ಕೊಟ್ಟಿದ್ದಾರೆ. ನೀವೂ ತೂಕ ಇಳಿಸುವ ಯೋಚನೆಯಲ್ಲಿದ್ರೆ ಈ ಟಿಪ್ಸ್ ಮಿಸ್ ಮಾಡದೇ ಫಾಲೋ ಮಾಡಿ. ನೇರ ಪ್ರೋಟೀನ್, ತಾಜಾ ತರಕಾರಿಗಳು, ಹಣ್ಣುಗಳು, ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳಂತಹ ಸಂಪೂರ್ಣ, […]

ಮಹಿಳೆಯರೇ, ನೀವಿನ್ನೂ ಪೋಸ್ಟ್ ಆಫೀಸ್ ನ ಈ ಸ್ಕೀಮ್ ಪ್ರಯೋಜನ ಪಡೆದಿಲ್ಲಾಂದ್ರೆ ತಡ ಮಾಡ್ಬೇಡಿ!!

ಸದಾ ಜನಸ್ನೇಹಿಯಾಗಿ ಹಳ್ಳಿಗಳ ಮೂಲೆ ಮೂಲೆಗೂ ಪತ್ರ ಮಾತ್ರವಲ್ಲದೇ, ಬ್ಯಾಂಕಿಂಗ್, ಇನ್ಸೂರೆನ್ಸ್ ಮುಂತಾದ ಎಲ್ಲಾ ರೀತಿಯ ಸೇವೆಗಳು ಜನರ ಮನೆ ಬಾಗಿಲಿಗೇ ದೊರಕಬೇಕೆಂದು ಶ್ರಮಿಸುತ್ತಿದೆ ಅಂಚೆ ಇಲಾಖೆ. ಈ ನಿಟ್ಟಿನಲ್ಲಿ ಹಳ್ಳಿಯ ಅಂಚೆ ಕಚೇರಿಗಳಂತೂ ಮುಖ್ಯ ಪಾತ್ರ ವಹಿಸುತ್ತವೆ. ಅಂಚೆಯಣ್ಣಂದಿರು ಮನೆ ಬಾಗಿಲಿಗೇ ಸೇವೆ ನೀಡುವಲ್ಲಿ ಶ್ರಮಿಸುತ್ತಿದ್ದಾರೆ. ಏಪ್ರಿಲ್ 2023 ರಿಂದ ಎರಡು ವರ್ಷಗಳಿಗೆ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಘೋಷಿಸಿದ ಉಳಿತಾಯ ಯೋಜನೆ “ಮಹಿಳಾ ಸಮ್ಮಾನ್ ಉಳಿತಾಯ ಯೋಜನೆ” Mahila Samman Saving Certificate(MSSC). ಸರ್ಕಾರದ ಹೇಳಿಕೆಯ […]

ಹೊಸ ವರ್ಷ ನೆಮ್ಮದಿಯಿಂದಿರೋಕೆ ನೀವು ಈ ಸಂಕಲ್ಪಗಳನ್ನು ಮಾಡಲೇಬೇಕು!

ಮೊನ್ನೆ ಮೊನ್ನೆಯಷ್ಟೇ 2024 ನೇ ಇಸವಿಗೆ ಕಾಲಿಟ್ಟ ನೆನಪು, ಅಷ್ಟರಲ್ಲಾಗಲೇ ಈ ವರ್ಷ ಕಳೆದು ಮತ್ತೆ ಹೊಸವರ್ಷ ಬರಲು ಸಿದ್ಧವಾಗಿದೆ. ನಾವು ದಿನಗಳು, ತಿಂಗಳುಗಳು ಉರುಳುವುದೇ ಗೊತ್ತಾಗದಷ್ಟು ಬ್ಯುಸಿಯೂ ಆಗಿದ್ದೇವೆ. ಇದರ ಮಧ್ಯೆಯೂ ಪ್ರತಿವರ್ಷ ಹೊಸವರ್ಷಕ್ಕೊಂದಿಷ್ಟು ರೆಸೊಲ್ಯೂಷನ್, ಸಂಕಲ್ಪಗಳನ್ನು ಮರೆಯದೇ ಕೈಗೊಳ್ಳುತ್ತೇವೆ. ಆದರೆ ವರ್ಷದ ಕೊನೆಯಲ್ಲಿ ನೋಡಿದಾಗ ಅದರಲ್ಲಿ ಕಾಲು ಭಾಗದಷ್ಟನ್ನು ನಾವು ಪೂರೈಸಿದ್ದರೆ ಅದೇ ಗ್ರೇಟ್. ಹಾಗಾದ್ರೆ ಈ ವರ್ಷವೀ ನಮ್ಮ ಸಂಕಲ್ಪಗಳು ನೀರಿನಲ್ಲಿ ಮಾಡಿದ ಹೋಮವಾಗದೇ, ಸಂಕಲ್ಪಗಳು ಕೈಗೂಡಬೇಕಾದ್ರೆ ಏನ್ ಮಾಡ್ಬೇಕು ಇಲ್ಲಿ ನೋಡಿ.1• […]

ಹುಡುಗಿಯರು ಹುಡುಗನಿಂದ ನಿಜಕ್ಕೂ ನಿರೀಕ್ಷೆ ಮಾಡೋದೇನು ? ನಿಮ್ಮ ಪ್ರೀತಿಯ ಹುಡುಗಿಗೆ ನೀವೇನ್ ಕೊಡ್ಬೇಕು?

ಹುಡುಗಿಯರು ಕೇವಲ ಸುಂದರ, ಆಕರ್ಷಕವಾಗಿರುವ ಹುಡುಗನನ್ನು ಮಾತ್ರ ಇಷ್ಟಪಡ್ತಾರೆ ಅನ್ನೋ ಯೋಚ್ನೆ ಖಂಡಿತಾ ತಪ್ಪು. ಹಾಗಾಗಿ ನೀವು ನಾನು ನೋಡಲು ಚೆನ್ನಾಗಿಲ್ಲ ಎಂದು ಚಿಂತಿಸಬೇಕಿಲ್ಲ. ಹುಡುಗಿಯರನ್ನು ಹೇಗೆ ಒಲಿಸ್ಕೊಳ್ಬೋದು ಅಂತ ಯೋಚಿಸಿದ್ರೆ ಸಾಕು. ಹುಡುಗಿಯರು ಸಾಮಾನ್ಯವಾಗಿ ಇಷ್ಟಪಡೋದು ಅವಳಿಗಿಂತಾ ಅವಳನ್ನು ಹೆಚ್ಚು ಇಷ್ಟಪಡೋ ಹುಡುಗರನ್ನ. ಪರಿಶುದ್ಧ ಪ್ರೀತಿಯನ್ನು ನೀಡಿ ಪ್ರೀತಿ ಗಳಿಸಬಹುದು.ನಿಮ್ಮ ಮಾತಿನಂತೆಯೇ ನಿಮ್ಮ ನಡೆಯಿದ್ದರೆ ಚೆನ್ನ. ನೀವು ಹೇಳುವುದೊಂದು ಮಾಡುವುದೊಂದು ಆದರೆ ಯಾರೂ ನಿಮ್ಮತ್ತ ಆಕರ್ಷಿತರಾಗುವುದಿಲ್ಲ. ಹಾಗಾಗಿ ನಿಮ್ಮ ನಡೆ ನುಡಿ ಒಂದೇ ಆಗಿರಲಿ. ದುಬಾರಿ […]