ನಮ್ಮ ಈ ಕೆಲವು ಕೆಟ್ಟ ಅಭ್ಯಾಸಗಳನ್ನು ಬಿಟ್ಟರೆ  ಹೃದಯವನ್ನು ಸೇಫಾಗಿಡಬಹುದು!

ನಾವು ತಿನ್ನುವ ಆಹಾರ ಮತ್ತು ನಮ್ಮ ಮನಸ್ಸಿನ ಒತ್ತಡದ ಮಟ್ಟ ಹೃದಯದ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ. ದಿನನಿತ್ಯ ಉತ್ತಮ ಅಭ್ಯಾಸಗಳನ್ನು ಅನುಸರಿಸಿದರೆ ಹೃದಯ ಬಲವಾಗಿರುತ್ತದೆ. ಹೃದ್ರೋಗ ತಜ್ಞರಾದ ಡಾ. ಜೆರೆಮಿ ಲಂಡನ್ ಅವರು ಕೆಲ ತಪ್ಪು ಅಭ್ಯಾಸಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಅವು ನಮ್ಮ ಆರೋಗ್ಯವನ್ನು ನಿಧಾನವಾಗಿ ಹಾನಿಗೊಳಿಸುತ್ತವೆ. ಅವನ್ನು ಬಿಟ್ಟುಬಿಟ್ಟರೆ ಹೃದಯವನ್ನು ರಕ್ಷಿಸಬಹುದು. 1. ಧೂಮಪಾನ ಮತ್ತು ಇ-ಸಿಗರೇಟ್ ಅನ್ನು ತ್ಯಜಿಸಿ ಧೂಮಪಾನ ಮಾಡುವವರಲ್ಲಿ ಹೃದಯರೋಗದ ಅಪಾಯ ಹೆಚ್ಚು. ತಂಬಾಕಿನಲ್ಲಿರುವ ರಾಸಾಯನಿಕಗಳು ರಕ್ತನಾಳಗಳಲ್ಲಿ […]

ಎಟಿಂಎಂ ಕಾರ್ಡ್ ಮರೆತಿದ್ದೀರಿ ಅನ್ನೋ ಚಿಂತೆ ಬೇಡ: ಕಾರ್ಡ್ ಇಲ್ಲದೇ ಎಟಿಎಂನಲ್ಲಿ ಹಣ ತೆಗೆಯುವ ಹೊಸ ವಿಧಾನ

ಇದೀಗ ಎಟಿಎಂನಿಂದ ಹಣ ತೆಗೆಯಲು ಡೆಬಿಟ್ ಕಾರ್ಡ್ ಅಗತ್ಯವಿಲ್ಲ. ಯುಪಿಐ ಬಳಸಿ ನೇರವಾಗಿ ಎಟಿಎಂನಲ್ಲೇ ಹಣ ತೆಗೆಯಬಹುದು. ದೇಶದ ಅನೇಕ ಬ್ಯಾಂಕುಗಳು ಈಗ ಯುಪಿಐ ಕಾರ್ಡ್ಲೆಸ್ ಕ್ಯಾಶ್ ವಿತ್ಡ್ರಾವಲ್ ಸೌಲಭ್ಯವನ್ನು ನೀಡಿವೆ. ಕಾರ್ಡ್ ಮರೆತರೂ ಅಥವಾ ಕಳೆದುಕೊಂಡರೂ ಚಿಂತೆಯೇ ಇಲ್ಲ. ಈ ವಿಧಾನ ಏಕೆ ಉಪಯುಕ್ತ? ಹಣ ತೆಗೆಯುವ ವಿಧಾನ 1. UPI ಬೆಂಬಲಿತ ATM ಗೆ ಹೋಗಿ. 2. ಪರದೆ ಮೇಲೆ “UPI Cash Withdrawal” ಅಥವಾ “ICCW” ಎಂಬ ಆಯ್ಕೆಯನ್ನು ಆರಿಸಿ. 3. ನೀವು […]

ಸೆಲೆಬ್ರಿಟಿಗಳೂ ಕೂಡ ಆರೋಗ್ಯಕ್ಕಾಗಿ ಈ ಹಣ್ಣಿನ ಜ್ಯೂಸ್  ತಪ್ಪದೇ ಕುಡಿತಾರೆ: ನೀವೂ ಮಿಸ್ ಮಾಡದೇ ಕುಡೀರಿ ಯಾಕಂದ್ರೆ!

ಸಾಮಾನ್ಯ ಜನರಿಗೆ ಜಾಹೀರಾತುಗಳಲ್ಲಿ ಪೆಪ್ಸಿ, ಕೋಲಾ ಕುಡಿಯೋಕೆ ಪ್ರೇರೇಪಿಸುವ ಸೆಲೆಬ್ರಿಟಿಗಳು ಮಾತ್ರ ನಿಜ ಜೀವನದಲ್ಲಿ ಪೆಪ್ಸಿ, ಕೋಲಾ ಕುಡಿಯದೇ ಈ ಹಣ್ಣಿನ ಜ್ಯೂಸ್ ಅನ್ನೇ ಇಷ್ಟಪಟ್ಟು ಕುಡಿತಾರೆ. ಸಿನಿಮಾ ನಟರು, ಕ್ರಿಕೆಟ್ ಸ್ಟಾರ್ ಗಳಿಗೆ ಈ ಜ್ಯೂಸ್ ಅಂದ್ರೆ ಭಾರೀ ಇಷ್ಟವಂತೆ. ದೇಹದ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಅವರೆಲ್ಲಾ ಇದೇ ಜ್ಯೂಸ್ ಅನ್ನು ಕುಡಿತಾರೆ. ಇತ್ತೀಚೆಗೆ ಕ್ರೀಡಾ ತಾರೆಯರ ಡಯಟ್ ಲಿಸ್ಟ್ ನಲ್ಲಿ, ದಿನಚರಿಯಲ್ಲಿ ಈ ಜ್ಯೂಸ್ ಇದೆ ಎಂದು ಸಮೀಕ್ಷೆ ಹೇಳಿದೆ ಬೆಳಿಗ್ಗೆ ಎದ್ದ ತಕ್ಷಣ ಒಂದು […]

ಬ್ಯಾಂಕ್ ಖಾತೆ ಮತ್ತು ಲಾಕರ್ ನಿಯಮಗಳಲ್ಲಿ ಮಹತ್ವದ ಬದಲಾವಣೆ: ಏನೆಲ್ಲಾ ಬದಲಾವಣೆ, ಹೊಸ ರೂಲ್ಸ್ ಏನು?

ನಮ್ಮ ಬ್ಯಾಂಕ್ ಖಾತೆ ಮತ್ತು ಲಾಕರ್‌ಗಳಿಗೆ ಸಂಬಂಧಿಸಿದಂತೆ ಒಂದು ದೊಡ್ಡ ಸುದ್ದಿ ಬಂದಿದೆ. ಮುಂದಿನ ತಿಂಗಳು, ಅಂದರೆ ನವೆಂಬರ್ 1ರಿಂದ, ಬ್ಯಾಂಕಿಂಗ್ ನಿಯಮಗಳಲ್ಲಿ ಪ್ರಮುಖ ಬದಲಾವಣೆಗಳು ಜಾರಿಗೆ ಬರಲಿವೆ. ಕೇಂದ್ರ ಸರ್ಕಾರವು “ಬ್ಯಾಂಕಿಂಗ್ ಕಾನೂನು (ತಿದ್ದುಪಡಿ) ಕಾಯ್ದೆ, 2025” ಅಡಿಯಲ್ಲಿ ಈ ಹೊಸ ನಿಯಮಗಳನ್ನು ತರಲು ನಿರ್ಧರಿಸಿದೆ. ಖಾತೆಗೆ ನಾಲ್ಕು ನಾಮಿನಿ ಹಾಕಬಹುದು: ಇದುವರೆಗೂ ಬ್ಯಾಂಕ್ ಖಾತೆಗೆ ಕೇವಲ ಒಬ್ಬರ ಹೆಸರನ್ನು ಮಾತ್ರ ನಾಮಿನಿಯಾಗಿ ಸೇರಿಸಲು ಸಾಧ್ಯವಿತ್ತು. ಆದರೆ ಹೊಸ ನಿಯಮದ ಪ್ರಕಾರ, ಈಗಿನಿಂದ ನೀವು ನಿಮ್ಮ […]

ಸ್ತನಕ್ಯಾನ್ಸರ್ ಕುರಿತ ಇಷ್ಟೆಲ್ಲಾ ಮಾಹಿತಿಗಳು ನಿಮಗೆ ತಿಳಿದಿರಲೇಬೇಕು:ಸ್ತನ ಕ್ಯಾನ್ಸರ್ ತಡೆಗಟ್ಟಲು ಏನ್ ಮಾಡ್ಬೇಕು?

ಬರಹ-ಶ್ರೇಯಾ ಶಿವಪ್ರಕಾಶ್ ಈಗ ಸ್ತನ ಕ್ಯಾನ್ಸರ್ ತುಂಬಾ ಸಾಮಾನ್ಯವಾಗಿಬಿಟ್ಟಿದೆ. ನಮ್ಮ ನಿಮ್ಮ ನಡುವೆಯೇ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವವರನ್ನು ನೋಡಬಹುದಾಗಿದೆ. ಅಕ್ಟೋಬರ್ ತಿಂಗಳೆಂದರೆ ಸ್ತನ ಕ್ಯಾನ್ಸರ್ ಜಾಗೃತಿ ತಿಂಗಳು. ಈ ಸಂದರ್ಭದಲ್ಲಿ ಹಲವೆಡೆ ಜಾಗೃತಿ ಕಾರ್ಯಕ್ರಮಗಳು, ಲೇಖನಗಳು, ವೀಡಿಯೋಗಳು ಹೊರಬರುತ್ತವೆ. ಸಾಂಕೇತಿಕವಾಗಿ ಪಿಂಕ್ ರಿಬ್ಬನ್ ಗಳು ಮಿಂಚುತ್ತವೆ. ಆದರೆ ಇದರ ಹಿಂದೊಂದು ಅರಿಯದ ಸತ್ಯವಿದೆ, ನಮ್ಮ ಸ್ತನಗಳೊಂದಿಗಿನ ನಮ್ಮ ಸಂಬಂಧವು ಹೆಚ್ಚಾಗಿ ಆರೋಗ್ಯ ಜಾಗೃತಿಗಿಂತ ಸೌಂದರ್ಯದ ಮಾನದಂಡಗಳಾಗಿದೆ, ಲೈಂಗಿಕತೆಯ ದ್ಯೋತಕವಾಗಿದೆ. ಆದರೆ ನಾವು ಅವುಗಳ ಆರೈಕೆ, ರಕ್ಷಣೆ […]