ಇಸ್ರೇಲ್ ಮಿಲಿಟರಿ : ಗಾಜಾ ಪಟ್ಟಿಗೆ ಇಂಧನ ಪೂರೈಸಲು ಅವಕಾಶ ನೀಡಲ್ಲ
ಜೆರುಸಲೇಂ : ಒತ್ತೆಯಾಳುಗಳ ಬಿಡುಗಡೆಗೆ ಬದಲಾಗಿ ಇಸ್ರೇಲ್ ಗಾಜಾಕ್ಕೆ ಇಂಧನ ಪೂರೈಕೆಗೆ ಅವಕಾಶ ನೀಡಲಿದೆಯಾ ಎಂಬ ಮಾಧ್ಯಮದವರ ಪ್ರಶ್ನೆಗೆ ಮಂಗಳವಾರ ತಡರಾತ್ರಿ ಉತ್ತರಿಸಿದ ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ವಕ್ತಾರ ರಿಯರ್ ಅಡ್ಮಿರಲ್ ಡೇನಿಯಲ್ ಹಗರಿ, ವಿಶ್ವಸಂಸ್ಥೆಯ ಪರಿಹಾರ ಕಾರ್ಯಾಚರಣೆ ಏಜೆನ್ಸಿಗೆ (UN Relief and Works Agency -UNRWA) ಕಳುಹಿಸಲಾದ ಇಂಧನವನ್ನು ಹಮಾಸ್ ಕದ್ದಿದೆ ಎಂದು ಹೇಳಿದರು. ಗಾಜಾ ಪಟ್ಟಿಗೆ ಇಂಧನ ತೀವ್ರ ಅಗತ್ಯವಾಗಿರುವುದು ನಿಜವಾದರೂ ಅಲ್ಲಿಗೆ ಕಳುಹಿಸುವ ಇಂಧನವನ್ನು ಹಮಾಸ್ ಕದ್ದು ಅದನ್ನು ತನ್ನ […]
ಇಸ್ರೇಲ್ ವಿರುದ್ಧ ಮುಂದಿನ ಕ್ರಮದ ಚರ್ಚೆ : ಹಿಜ್ಬುಲ್ಲಾ-ಹಮಾಸ್-ಇಸ್ಲಾಮಿಕ್ ಜಿಹಾದ್ ನಾಯಕರ ಸಭೆ
ಬೈರುತ್ (ಲೆಬನಾನ್): ಗಾಜಾದಲ್ಲಿ ಹಮಾಸ್ ಮತ್ತು ಇಸ್ರೇಲ್ ನಡುವೆ ಯುದ್ಧ ನಡೆಯುತ್ತಿರುವ ಮಧ್ಯೆ ಹಿಜ್ಬುಲ್ಲಾ ಗುಂಪಿನ ನಾಯಕ ಬುಧವಾರ ಹಿರಿಯ ಹಮಾಸ್ ಮತ್ತು ಪ್ಯಾಲೆಸ್ಟೈನ್ ಇಸ್ಲಾಮಿಕ್ ಜಿಹಾದ್ ನಾಯಕರೊಂದಿಗೆ ಮಾತುಕತೆ ನಡೆಸಿದರು.ಇಸ್ರೇಲ್ ವಿರುದ್ಧ ಸಂಚು ರೂಪಿಸುತ್ತಿರುವ ಮೂರು ಪ್ರಮುಖ ಉಗ್ರಗಾಮಿ ಸಂಘಟನೆಗಳ ನಾಯಕರು ಬೈರುತ್ನಲ್ಲಿ ಒಟ್ಟಾಗಿ ಸಭೆ ನಡೆಸಿದ್ದಾರೆ. ಹಿಜ್ಬುಲ್ಲಾ ನಿಯಂತ್ರಣದಲ್ಲಿರುವ ಲೆಬನಾನ್ ಸರ್ಕಾರಿ ಮಾಧ್ಯಮದ ಪ್ರಕಾರ- ಗಾಜಾ ಹಾಗೂ ಪಶ್ಚಿಮ ದಂಡೆಯಲ್ಲಿರುವ ತುಳಿತಕ್ಕೊಳಗಾದ ನಮ್ಮ ಜನರ ವಿರುದ್ಧ ಇಸ್ರೇಲ್ ನ ವಿಶ್ವಾಸಘಾತುಕ ಮತ್ತು ಕ್ರೂರ ಆಕ್ರಮಣವನ್ನು […]
ಮಾಜಿ ವಿಶ್ವಸುಂದರಿ ಸ್ಪರ್ಧಿ ಶೆರಿಕಾ ಡಿ ಅರ್ಮಾಸ್ ಕ್ಯಾನ್ಸರ್ ಜೊತೆ ಹೋರಾಡಿ 26ನೇ ವಯಸ್ಸಿಗೆ ನಿಧನ
ಕ್ಯಾನ್ಸರ್ನಿಂದ ಬಳಲುತ್ತಿದ್ದ ಶೆರಿಕಾ ಡಿ ಅರ್ಮಾಸ್ ಕಿಮೋಥೆರಪಿ ಹಾಗೂ ರೇಡಿಯೋಥೆರಪಿ ಚಿಕಿತ್ಸೆಗಳಿಗೆ ಒಳಗಾಗಿದ್ದರು. ಶೆರಿಕಾ ಡಿ ಅರ್ಮಾಸ್ ಅವರ ನಿಧನ ಉರುಗ್ವೆ ಮಾತ್ರವಲ್ಲದೆ ಪ್ರಪಂಚದಾದ್ಯಂತ ಅನೇಕರನ್ನು ದುಃಖಕ್ಕೀಡು ಮಾಡಿದೆ.ಶೆರಿಕ್ ಅವರು ಎರಡು ವರ್ಷಗಳ ಕಾಲ ಗರ್ಭಕಂಠದ ಕ್ಯಾನ್ಸರ್ ಜೊತೆ ಹೋರಾಡಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಶೆರಿಕಾ ಡಿ ಅರ್ಮಾಸ್ ನಿಧನಕ್ಕೆ ಅನೇಕ ವಿಶ್ವಸುಂದರಿ ವಿಜೇತರು ಸಾಮಾಜಿಕ ಜಾಲತಾಣಗಳಲ್ಲಿ ಸಂತಾಪ ಸೂಚಿಸಿದ್ದಾರೆ.2015ರ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಉರುಗ್ವೆಯನ್ನು ಪ್ರತಿನಿಧಿಸಿದ್ದ ಮಾಜಿ ವಿಶ್ವ ಸುಂದರಿ ಸ್ಪರ್ಧಿ ಶೆರಿಕಾ ಡಿ ಅರ್ಮಾಸ್ […]
ಯು.ಟಿ.ಖಾದರ್, ಬಸವರಾಜ ಹೊರಟ್ಟಿ ಲಂಡನ್ನಲ್ಲಿ ಬಸವೇಶ್ವರ ಪ್ರತಿಮೆಗೆ ನಮನ
ಲಂಡನ್: ಕರ್ನಾಟಕ ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಲಂಡನ್ಗೆ ಭೇಟಿ ನೀಡಿದ್ದು, ಭಾನುವಾರ ಲ್ಯಾಂಬೆತ್ ನಗರದ ಥೇಮ್ಸ್ ನದಿ ದಂಡೆ ಮೇಲಿರುವ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಲ್ಯಾಂಬೆತ್ ನಗರದಲ್ಲಿನ ಜಗಜ್ಯೋತಿ ಬಸವೇಶ್ವರರ ಪುತ್ಥಳಿಗೆ ಗೌರವ ಸಲ್ಲಿಸಿದರು. ಲ್ಯಾಂಬೆತ್‌ನ ಮಾಜಿ ಮೇಯರ್ ಡಾ.ನೀರಜ್ ಪಾಟೀಲ್ ಅವರು ಖಾದರ್ ಹಾಗೂ ಹೊರಟ್ಟಿ ಅವರನ್ನು […]
274 ಭಾರತೀಯರನ್ನು ಇಸ್ರೇಲ್ನಿಂದ ಹೊತ್ತು ಸ್ವದೇಶದತ್ತ ಬರುತ್ತಿರುವ ನಾಲ್ಕನೇ ವಿಮಾನ
ಟೆಲ್ ಅವೀವ್ (ಇಸ್ರೇಲ್) : ಇಸ್ರೇಲ್ ಮತ್ತು ಹಮಾಸ್ ಉಗ್ರರ ನಡುವೆ ಸಂಘರ್ಷ ಮುಂದುವರೆದಿದ್ದು, ಈ ಸಂಬಂಧ ಯುದ್ಧ ಪೀಡಿತ ಇಸ್ರೇಲ್ನಲ್ಲಿ ನೆಲೆಸಿರುವ ಭಾರತೀಯರನ್ನು ಕರೆತರುವ ಕಾರ್ಯ ಭರದಿಂದ ಸಾಗುತ್ತಿದೆ.ಆಪರೇಷನ್ ಅಜಯ್ ಕಾರ್ಯಾಚರಣೆಯ ಭಾಗವಾಗಿ 274 ಭಾರತೀಯರನ್ನು ಹೊತ್ತ ನಾಲ್ಕನೇ ವಿಮಾನವು ಭಾನುವಾರ ಮುಂಜಾನೆ ಇಸ್ರೇಲ್ನಿಂದ ಭಾರತಕ್ಕೆ ಹೊರಟಿದೆ ಎಂದು ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.ಸಂಘರ್ಷ ಪೀಡಿತ ಇಸ್ರೇಲ್ನಿಂದ 274 ಭಾರತೀಯರನ್ನು ಹೊತ್ತ ನಾಲ್ಕನೇ ವಿಮಾನ ಭಾರತಕ್ಕೆ ಆಗಮಿಸುತ್ತಿದೆ ಎಂದು ವಿದೇಶಾಂಗ ಸಚಿವ ಜೈಶಂಕರ್ ಹೇಳಿದ್ದಾರೆ. […]