‘ಫ್ರೆಂಡ್ಸ್’ನ ಚಾಂಡ್ಲರ್ ಪಾತ್ರಧಾರಿ ಮ್ಯಾಥ್ಯೂ ಪೆರ್ರಿ ನಿಧನ

ಲಾಸ್ ಎಂಜಲೀಸ್: ಪ್ರಖ್ಯಾತ ಕಾಮಿಡಿ ಸೀರೀಸ್ ‘ಫ್ರೆಂಡ್ಸ್’ನ ಚಾಂಡ್ಲರ್ ಪಾತ್ರಧಾರಿ ಮ್ಯಾಥ್ಯೂ ಪೆರ್ರಿ ಶನಿವಾರ ಆಕಸ್ಮಿಕವಾಗಿ ಜಕುಝಿಯಲ್ಲಿ ಮುಳುಗಿ ನಿಧನರಾಗಿದ್ದಾರೆ. ಅವರಿಗೆ 54 ವರ್ಷ ವಯಸ್ಸಾಗಿತ್ತು.

ವರದಿಗಳ ಪ್ರಕಾರ ಎರಡು ಗಂಟೆಗಳ ಪಿಕಲ್ ಬಾಲ್ ಗೇಮ್ ಆಟಗಳ ಬಳಿಕ ತನ್ನ ಲಾಸ್ ಎಂಜಲೀಸ್ ನ ಮನೆಗೆ ಹಿಂದಿರುಗಿದ ನಂತರ ಮ್ಯಾಥ್ಯೂ ನಿಧನರಾಗಿದ್ದಾರೆ.

Matthew Perry: I Have This "Recurring Nightmare" About a "Friends" Revival Disappointing Fans | Glamour

ಮಾಥ್ಯೂ ತನ್ನ ಸಹಾಯಕನನ್ನು ಕೆಲಸದ ನಿಮಿತ್ತ ಹೊರಗೆ ಕಳುಹಿಸಿದ್ದರು. ಸಹಾಯಕ ಸುಮಾರು ಎರಡು ಗಂಟೆಗಳ ನಂತರ ಹಿಂತಿರುಗಿದಾಗ ಜಕುಝಿಯಲ್ಲಿ ಪೆರ್ರಿ ಪ್ರತಿಕ್ರಿಯಿಸದಿರುವುದನ್ನು ಕಂಡು ತುರ್ತು ಸಹಾಯಕ್ಕಾಗಿ 911 ಅನ್ನು ಡಯಲ್ ಮಾಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಯಾವುದೇ ಔಷಧ ಪತ್ತೆಯಾಗಿಲ್ಲ. ಯಾವುದೇ ಮೋಸದ ಶಂಕೆ ಇಲ್ಲ ಎಂದು ವರದಿಯಾಗಿದೆ.

https://www.instagram.com/p/Cyuv2zDrL0r/?utm_source=ig_embed&ig_rid=bde4e1b7-348e-4f1f-aaea-aac11718931a

ಕೊನೆಯ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಅವರು ತಮ್ಮ ಜಕುಝಿಯಲ್ಲಿ ಚಂದ್ರನ ಬೆಳಕನ್ನು ಆಸ್ವಾದಿಸುತ್ತಿರುವುದನ್ನು ಹಂಚಿಕೊಂಡಿದ್ದರು.

ಲಾಸ್ ಏಂಜಲೀಸ್ ಪೊಲೀಸ್ ಇಲಾಖೆಯ ದರೋಡೆ-ಹತ್ಯೆ ಪತ್ತೆದಾರರು ಪ್ರಸ್ತುತ ಮ್ಯಾಥ್ಯೂ ಸಾವಿನ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ನಟನ ಸಾವಿಗೆ ವಿಶ್ವದಾದ್ಯಂತದ ಅಭಿಮಾನಿಗಳು ಸಂತಾಪ ಸೂಚಿಸುತ್ತಿದ್ದಾರೆ.