ಚಂದ್ರಯಾನ ಯೋಜನೆಯೇ ಒಂದು ದೊಡ್ಡ ಯಶಸ್ಸು: ನಾಸಾ ಮಾಜಿ ಅಧಿಕಾರಿ ಮೈಕ್ ಗೋಲ್ಡ್ ಮೆಚ್ಚುಗೆ

ಟೆಕ್ಸಾಸ್( ಅಮೆರಿಕ): ಭಾರತದ ಚಂದ್ರಯಾನ-3 ಯೋಜನೆಯೇ ಒಂದು ದೊಡ್ಡ ಯಶಸ್ಸು ಎಂದು ನಾಸಾದ ಮಾಜಿ ಅಧಿಕಾರಿ ಮತ್ತು ರೆಡ್ವೈರ್ನ ಮುಖ್ಯ ಅಭಿವೃದ್ಧಿ ಅಧಿಕಾರಿ ಮೈಕ್ ಗೋಲ್ಡ್ ಪ್ರಶಂಸಿದ್ದಾರೆ.ಇಂದು ಸಂಜೆ ಚಂದ್ರಯಾನ-3 ಯೋಜನೆ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಸಾಫ್ಟ್ ಲ್ಯಾಂಡಿಂಗ್ ಮಾಡುವಲ್ಲಿ ಯಶಸ್ವಿಯಾಗಲಿ ಅಥವಾ ಬಿಡಲಿ, ಭಾರತದ ಈ ಯೋಜನೆಯೇ ಒಂದು ಮಹತ್ವದ್ದಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಭಾರತದ ಚಂದ್ರಯಾನ-3 ಯಶಸ್ಸಿಗೆ ಇಂದು ಇಡೀ ವಿಶ್ವವೇ ಕಾದು ಕುಳಿತಿದ್ದು, ಭಾರತದ ಈ ಯೋಜನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಾರತದ […]
ಮುಂಬರುವ ವರ್ಷಗಳಲ್ಲಿ ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್: ಬ್ರಿಕ್ಸ್ ನಲ್ಲಿ ಪ್ರಧಾನಿ ಮೋದಿ

ಜೋಹಾನ್ಸ್ಬರ್ಗ್ (ದಕ್ಷಿಣ ಆಫ್ರಿಕಾ): ಅಸ್ಥಿರವಾದ ಜಾಗತಿಕ ಆರ್ಥಿಕತೆಯ ಹೊರತಾಗಿಯೂ ಭಾರತವು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ.ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಪಿಎಂ ಮೋದಿ ಮಂಗಳವಾರ ಬ್ರಿಕ್ಸ್ ಬಿಸಿನೆಸ್ ಫೋರಂ ನಾಯಕರ ಸಂವಾದದಲ್ಲಿ ಮಾತನಾಡಿ, ”ಮುಂಬರುವ ವರ್ಷಗಳಲ್ಲಿ ಭಾರತವು ವಿಶ್ವದ ಬೆಳವಣಿಗೆಯ ಎಂಜಿನ್ ಆಗಲಿದೆ” ಎಂದೂ ಹೇಳಿದರು. ”ಭಾರತವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆ ಹೊಂದಿದ್ದು, 100ಕ್ಕೂ ಹೆಚ್ಚು ಯುನಿಕಾರ್ನ್ಗಳಿವೆ. ಸರ್ಕಾರ ಕೈಗೊಂಡಿರುವ ಮಿಷನ್ ಮೋಡ್ ಸುಧಾರಣೆಗಳ ಪರಿಣಾಮ ವ್ಯಾಪಾರ ಸುಲಭತೆಯು (Ease […]
ಬ್ರಿಕ್ಸ್ ಶೃಂಗಸಭೆ ಭಾಗವಹಿಸಲುಜೋಹಾನ್ಸ್ಬರ್ಗ್ಗೆ ಬಂದಿಳಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ

ಜೋಹಾನ್ಸ್ಬರ್ಗ್ (ದಕ್ಷಿಣ ಆಫ್ರಿಕಾ) : ಬ್ರಿಕ್ಸ್ ಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಕೋರಲಾಗಿದೆ.ಆಫ್ರಿಕಾದ ನೃತ್ಯಗಾರರು ಸಾಂಪ್ರದಾಯಿಕ ನೃತ್ಯ ಪ್ರದರ್ಶನ ನೀಡಿದರು. ಇದೇ ವೇಳೆ ಭಾರತೀಯ ಶೈಲಿಯ ಡೋಲು, ವಾದ್ಯಗಳು ಮೊಳಗಿದವು.ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಂದು ರಾಜಧಾನಿ ಜೋಹಾನ್ಸ್ಬರ್ಗ್ಗೆ ಬಂದಿಳಿದರು. ಈ ಸಂದರ್ಭದಲ್ಲಿ ದಕ್ಷಿಣ ಆಫ್ರಿಕಾ ಸಾಂಪ್ರದಾಯಿಕ ಶೈಲಿಯಲ್ಲಿ ಭವ್ಯ ಸ್ವಾಗತ ಕೋರಲಾಯಿತು. ನಂತರ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ […]
7 ಮಕ್ಕಳ ಕೊಲೆಗಾತಿ ಬ್ರಿಟನ್ ನರ್ಸ್ಗೆ ಕೋರ್ಟ್ನಿಂದ ಜೀವಾವಧಿ ಶಿಕ್ಷೆ ಆದೇಶ

ಲಂಡನ್( ಯುಕೆ) : ಮಕ್ಕಳನ್ನು ಅಮಾನುಷವಾಗಿ ಕೊಲೆ ಮಾಡಿದ್ದ ಬ್ರಿಟನ್ ನರ್ಸ್ಗೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.”ನರ್ಸ್ ಲೂಸಿ ಲೆಟ್ಬಿ (33) ಓರ್ವ ಕ್ರೂರಿ ಎಂದು ಉಲ್ಲೇಖ ಮಾಡಿರುವ ನ್ಯಾಯಾಧೀಶರು, ಇನ್ನೆಂದು ಅಕೆಯ ಬಿಡುಗಡೆಗೆ ಅವಕಾಶವಿಲ್ಲ” ಎಂದು ಹೇಳಿದ್ದಾರೆ.ಆಸ್ಪತ್ರೆಯೊಂದರಲ್ಲಿ ಏಳು ಶಿಶುಗಳ ಹತ್ಯೆ ಮಾಡಿದ ಮತ್ತು ಇತರ ಆರು ಮಕ್ಕಳನ್ನು ಹತ್ಯೆಗೆ ಯತ್ನಿಸಿದ ಬ್ರಿಟನ್ ನರ್ಸ್ಗೆ ಅಲ್ಲಿನ ನ್ಯಾಯಾಲಯವು ಸೋಮವಾರ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ. ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿರುವ […]
ಆಗಸ್ಟ್ 23, ಸಂಜೆ 6.04 ನಿಮಿಷಕ್ಕೆ ಚಂದ್ರನ ಮೇಲೆ ಇಳಿಯುವ ‘ವಿಕ್ರಮ್’

ನವದೆಹಲಿ : ಇನ್ನು ಮೂರೇ ದಿನಗಳಲ್ಲಿ ಭಾರತ ಐತಿಹಾಸಿಕ ದಾಖಲೆ ನಿರ್ಮಾಣಕ್ಕೆ ಸಜ್ಜಾಗಿದೆ.ಭಾರತ ಸೇರಿದಂತೆ ವಿಶ್ವವೇ ತುದಿಗಾಲ ಮೇಲೆ ನಿಂತು ಕಾಯುತ್ತಿರುವ ಚಂದ್ರಯಾನ-3 ನೌಕೆಯ ಲ್ಯಾಂಡಿಂಗ್ನ ದಿನ ಮತ್ತು ಸಮಯವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಅಧಿಕೃತವಾಗಿ ಪ್ರಕಟಿಸಿದೆ.ಚಂದ್ರಯಾನ-3 ನೌಕೆಯನ್ನು ಚಂದಮಾಮನ ದಕ್ಷಿಣ ಧ್ರುವದ ಮೇಲೆ ಇಳಿಸುವ ದಿನಾಂಕ, ಮುಹೂರ್ತವನ್ನು ಇಸ್ರೋ ಅಧಿಕೃತವಾಗಿ ಘೋಷಿಸಿದೆ. ಐತಿಹಾಸಿಕ ಕ್ಷಣಗಳ ನೇರಪ್ರಸಾರ ಕೂಡ ಇರಲಿದೆ ಎಂದಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನಿಗದಿಪಡಿಸಲಾದ ಜಾಗದಲ್ಲಿ ಚಂದ್ರಯಾನ-3 ನೌಕೆಯ ಲ್ಯಾಂಡರ್ ಆಗಸ್ಟ್ 23 […]