ಅಮೆರಿಕವು ಉಕ್ರೇನ್ ಪೈಲಟ್ಗಳಿಗೆ ಎಫ್-16 ಫೈಟರ್ ಜೆಟ್ ತರಬೇತಿ 

ವಾಶಿಂಗ್ಟನ್ : ಉಕ್ರೇನ್ನ ಪೈಲಟ್ಗಳಿಗೆ ಎಫ್-16 ಫೈಟರ್ ಜೆಟ್ ತರಬೇತಿ ನೀಡಲು ಅಮೆರಿಕ ಮುಂದಾಗಿದೆ. ಯುಎಸ್ ನೀಡಲಿರುವ ತರಬೇತಿಯು ಮೂಲಭೂತ ಫೈಟರ್ ಪೈಲಟ್ ತರಬೇತಿಯಾಗಿರುತ್ತದೆ ಎಂದು ಅವರು ಹೇಳಿದರು. ಉಕ್ರೇನಿಯನ್ ಪೈಲಟ್ಗಳ ಪಠ್ಯಕ್ರಮವು ಅವರ ಅನುಭವದ ಮಟ್ಟವನ್ನು ಅವಲಂಬಿಸಿರುತ್ತದೆ. ಇದರಲ್ಲಿ ಮೌಲ್ಯಮಾಪನವು ತರಬೇತಿ ಕಾರ್ಯಕ್ರಮದ ಭಾಗವಾಗಿದೆ ಎಂದು ವರದಿಗಳು ತಿಳಿಸಿವೆ. ದೇಶದ ದಕ್ಷಿಣದ ಎರಡು ರಾಜ್ಯಗಳಲ್ಲಿರುವ ವಾಯುಪಡೆಯ ನೆಲೆಗಳಲ್ಲಿ ಉಕ್ರೇನ್ ಪೈಲಟ್ಗಳಿಗೆ ಅಮೆರಿಕ ಸೆಪ್ಟೆಂಬರ್ನಿಂದ ಎಫ್-16 ಫೈಟರ್ ಜೆಟ್ ತರಬೇತಿ ನೀಡಲಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ […]

ರಷ್ಯಾ ಅಧ್ಯಕ್ಷ ಪುಟಿನ್ ಭಾರತದಲ್ಲಿ ನಡೆಯುವ ಜಿ20 ಶೃಂಗಸಭೆಯಲ್ಲಿ ಭಾಗವಹಿಸುವುದಿಲ್ಲ ಎಂದು ಮಾಹಿತಿ ನೀಡಿದ ರಷ್ಯಾ

ಮಾಸ್ಕೋ (ರಷ್ಯಾ): ಭಾರತದ ರಾಜಧಾನಿ ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ನಡೆಯಲಿರುವ ಜಿ20 ನಾಯಕರ ಶೃಂಗಸಭೆಯಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸುತ್ತಿಲ್ಲ.ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತದಲ್ಲಿ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ರಷ್ಯಾ ಅಧ್ಯಕ್ಷರ ವಕ್ತಾರರು ತಿಳಿಸಿದ್ದಾರೆ. ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಬ್ರಿಕ್ಸ್ ಶೃಂಗಸಭೆಯಲ್ಲೂ ಪುಟಿನ್ ಭಾಗವಹಿಸಿರಲಿಲ್ಲ. ಶೃಂಗದಲ್ಲಿ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಪಾಲ್ಗೊಂಡಿದ್ದರು. ಉಕ್ರೇನಿಯನ್ ಮಕ್ಕಳನ್ನು ರಷ್ಯಾಕ್ಕೆ ಗಡಿಪಾರು ಮಾಡುವ ಆಪಾದಿತ ಯೋಜನೆಗೆ […]

15ನೇ ಬ್ರಿಕ್ಸ್ ಶೃಂಗಸಭೆಯಲ್ಲಿ ಕೋರಿಕೆ ಮೇರೆಗೆ ಮಾತುಕತೆ ಎಂಬ ಹೇಳಿಕೆ ನೀಡಿದ ಚೀನಾ: ಹೇಳಿಕೆ ತಿರಸ್ಕರಿಸಿದ ಭಾರತ

ನವದೆಹಲಿ: 15ನೇ ಬ್ರಿಕ್ಸ್ ಶೃಂಗಸಭೆಯ ನಡುವಲ್ಲೇ ಕೋರಿಕೆ ಮೇರೆಗೆ ಭಾರತ-ಚೀನಾ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ನಡುವೆ ದ್ವಿಪಕ್ಷೀಯ ಮಾತುಕತೆ ನಡೆದಿದೆ ಎಂಬ ಚೀನಾ ಹೇಳಿಕೆಯನ್ನು ಭಾರತ ಸರ್ಕಾರ ಸಾರಾಸಗಟಾಗಿ ತಳ್ಳಿ ಹಾಕಿದೆ. ಚೀನಾ-ಭಾರತ ಮಾತುಕತೆಗಳು ನಂತರದ ಕೋರಿಕೆಯ ಮೇರೆಗೆ ದ್ವಿಪಕ್ಷೀಯ ಮಾತುಕತೆ ನಡೆದವು ಎಂದು ಚೀನಾ ಇತ್ತೀಚೆಗೆ ಮಾಡಿದ ಹೇಳಿಕೆಯನ್ನು ಭಾರತೀಯ ಮೂಲಗಳು ತಳ್ಳಿಹಾಕಿವೆ. ಚೀನಾದ ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ‘ಅಧ್ಯಕ್ಷ ಕ್ಸಿ ಜಿನ್ಪಿಂಗ್ […]

ಸುಡಾನ್ ಸಂಘರ್ಷದ ಹಿನ್ನೆಲೆ: 20 ಲಕ್ಷ ಮಕ್ಕಳು ಸ್ಥಳಾಂತರ, ಆಹಾರ ಕ್ಷಾಮ 

ಜಿನೀವಾ : ಸುಡಾನ್‌ನಲ್ಲಿ ನಡೆಯುತ್ತಿರುವ ಭೀಕರ ಸಂಘರ್ಷದಿಂದಾಗಿ 20 ಲಕ್ಷಕ್ಕೂ ಅಧಿಕ ಮಕ್ಕಳು ತಮ್ಮ ಮನೆಗಳಿಂದ ಬಲವಂತವಾಗಿ ಸ್ಥಳಾಂತರಗೊಳ್ಳುತ್ತಿದ್ದಾರೆ ಎಂದು ಯುನಿಸೆಫ್ ತಿಳಿಸಿದೆ.ಸುಡಾನ್ನಲ್ಲಿ ಭೀಕರ ಸಶಸ್ತ್ರ ಸಂಘರ್ಷ ಮುಂದುವರೆದಿದೆ. ದೇಶದಲ್ಲಿನ ಮಕ್ಕಳ ಸ್ಥಿತಿ ತೀರಾ ಆತಂಕಕಾರಿಯಾಗಿದೆ. “ಹಿಂಸಾಚಾರದಿಂದ ದೇಶದ ವಿನಾಶ ಮುಂದುವರೆದಿದ್ದು, 1.7 ದಶಲಕ್ಷಕ್ಕೂ ಹೆಚ್ಚು ಮಕ್ಕಳು ಸುಡಾನ್ ಗಡಿ ದಾಟಿ ಹೋಗಲು ಕಾಯುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ ಮತ್ತು ಮತ್ತು 470,000 ಕ್ಕೂ ಹೆಚ್ಚು ಮಕ್ಕಳು ಈಗಾಗಲೇ ನೆರೆಯ ದೇಶಗಳಿಗೆ ಸ್ಥಳಾಂತರಗೊಂಡಿದ್ದಾರೆ ” ಎಂದು ಯುನಿಸೆಫ್ ಗುರುವಾರ […]

ಮುಂದಿನ ದಿನಗಳಲ್ಲಿ ಶ್ರೀಲಂಕಾಗೆ ಭಾರತದಿಂದ ಅಗತ್ಯ ನೆರವು ಮುಂದುವರಿಕೆ: ಸಚಿವ ಎಸ್. ಜೈಶಂಕರ್

ಕೊಲಂಬೊ (ಶ್ರೀಲಂಕಾ) : ತಮಿಳು ಸಮುದಾಯದ ಆಕಾಂಕ್ಷೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಶ್ರೀಲಂಕಾದಲ್ಲಿ ತಮಿಳು ಸಮುದಾಯದೊಂದಿಗೆ ಸಾಮರಸ್ಯ ಪ್ರಕ್ರಿಯೆ ನಡೆಯಲಿದೆ ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಭರವಸೆ ವ್ಯಕ್ತಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಭಾರತವು ಶ್ರೀಲಂಕಾಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡುವುದನ್ನು ಮುಂದುವರಿಸುವುದಾಗಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ. ಶ್ರೀಲಂಕಾ – ಭಾರತ ಸಂಸದೀಯ ಸ್ನೇಹ ಸಂಘದ ಭಾಗವಾಗಿರುವ ಸಂಸದರನ್ನು ಉದ್ದೇಶಿಸಿ ವಿಡಿಯೋ ಲಿಂಕ್ ಮೂಲಕ ಮಾತನಾಡಿದ ಎಸ್ ಜೈಶಂಕರ್, ಭಾರತ-ಶ್ರೀಲಂಕಾ […]