ಅವಸಾನದತ್ತ ಪ್ಯಾಲೆಸ್ಟೈನ್​ನ ತಂತ್ರಜ್ಞಾನ-ಸ್ಟಾರ್ಟ್ ಅಪ್ ಉದ್ಯಮ : ಯುದ್ಧದ ಎಫೆಕ್ಟ್​

ಜೆರುಸಲೇಮ್​: ಇಸ್ರೇಲ್-ಹಮಾಸ್ ಯುದ್ಧದಿಂದ ಪ್ಯಾಲೆಸ್ಟೈನ್ ನಲ್ಲಿ ಈಗ ತಾನೇ ಚಿಗುರೊಡೆಯುತ್ತಿದ್ದ ತಂತ್ರಜ್ಞಾನ ಮತ್ತು ಸ್ಟಾರ್ಟ್ ಅಪ್ ಉದ್ಯಮ ಅವಸಾನದ ಅಂಚಿಗೆ ತಲುಪಿದೆ.ಇಸ್ರೇಲ್ ಮತ್ತು ಹಮಾಸ್​ ಯುದ್ಧದಿಂದ ಗಾಜಾದಲ್ಲಿ ಬೆಳೆಯುತ್ತಿದ್ದ ಉದ್ಯಮ ವಲಯ ಬಹುತೇಕ ವಿನಾಶವಾಗುವ ಭೀತಿ ಎದುರಾಗಿದೆ.ಆರ್ಥಿಕವಾಗಿ ವಿಶ್ವದಲ್ಲಿಯೇ ಅತ್ಯಂತ ಕಠಿಣ ಸವಾಲಿನ ಪರಿಸ್ಥಿತಿಗಳ ಮಧ್ಯೆ ಗಾಜಾದಲ್ಲಿ ಕೆಲ ಉನ್ನತ ದರ್ಜೆಯ ತಂತ್ರಜ್ಞಾನ ಕಂಪನಿಗಳು ಕಾರ್ಯಾಚರಣೆ ಆರಂಭಿಸಿದ್ದವು. ಆದರೆ ಸದ್ಯದ ಯುದ್ಧ ಇವುಗಳ ಪಾಲಿಗೆ ಅವಸಾನವನ್ನು ತಂದಿಟ್ಟಿದೆ. ಇತ್ತೀಚೆಗೆ ಪ್ಯಾಲೆಸ್ಟೈನ್ ಟೆಕ್ ಉದ್ಯಮ ವ್ಯವಸ್ಥೆಯಲ್ಲಿ 10 ಮಿಲಿಯನ್ […]

ಇಸ್ರೇಲ್: ವೈಮಾನಿಕ ದಾಳಿಯಲ್ಲಿ ಹಮಾಸ್‌ ವಾಯುಪಡೆ ಮುಖ್ಯಸ್ಥ ಮುರಾದ್ ಅಬು ಹತ್ಯೆ

ಟೆಲ್ ಅವಿವ್ (ಇಸ್ರೇಲ್): ಇಸ್ರೇಲ್ ಹಾಗೂ ಪ್ಯಾಲೆಸ್ಟೀನ್​ ನಡುವೆ ಸಂಘರ್ಷ ಮುಂದುವರೆದಿದೆ. ರಾತ್ರಿಯಿಡೀ ನಡೆಸಿದ ವೈಮಾನಿಕ ದಾಳಿಯಲ್ಲಿ ಹಮಾಸ್‌ ಸಂಘಟನೆಯ ವಾಯುಪಡೆಯ ಮುಖ್ಯಸ್ಥ ಮುರಾದ್ ಅಬು ಮುರಾದ್‌ ಹತ್ಯೆಯಾಗಿರುವುದಾಗಿ ಇಸ್ರೇಲ್ ವಾಯುಪಡೆ ಹೇಳಿದೆ.ಶನಿವಾರ ನಡೆದ ಹತ್ಯಾಕಾಂಡದ ಸಮಯದಲ್ಲಿ ಭಯೋತ್ಪಾದಕರಿಗೆ ನಿರ್ದೇಶನ ನೀಡುವಲ್ಲಿ ಅಬು ಮುರಾದ್‌ ಹೆಚ್ಚು ಹೊಣೆಗಾರನಾಗಿದ್ದಾನೆ ಎಂದು ತಿಳಿಸಿದೆ. ”ಕಳೆದ ರಾತ್ರಿ ಇಸ್ರೇಲ್​ ವಾಯುಪಡೆಯ ಫೈಟರ್ ಜೆಟ್‌ಗಳು ಗಾಜಾ ಪಟ್ಟಿಯಾದ್ಯಂತ ವ್ಯಾಪಕವಾದ ದಾಳಿಗಳನ್ನು ನಡೆಸಿವೆ. ಹಮಾಸ್‌ ಭಯೋತ್ಪಾದನಾ ತಾಣಗಳು ಮತ್ತು ಗಾಜಾ ಪಟ್ಟಿಯಲ್ಲಿರುವ ನುಖ್ಬಾ ಭಯೋತ್ಪಾದಕ […]

ಇಸ್ರೇಲ್ – ಹಮಾಸ್ ಯುದ್ಧ: ಗಾಜಾಪಟ್ಟಿ ಮೇಲೆ 6000 ಬಾಂಬ್‌ ಎಸೆದ ಇಸ್ರೇಲ್​ ವಾಯುಪಡೆ

ಹೈದರಾಬಾದ್ : ಇಸ್ರೇಲ್ – ಹಮಾಸ್ ಯುದ್ಧ ಪ್ರಾರಂಭವಾದಾಗಿನಿಂದ ಗಾಜಾದ ಮೇಲೆ ಸುಮಾರು 6,000 ಬಾಂಬ್‌ಗಳನ್ನು ಹಾಕಲಾಗಿದೆ ಎಂದು ಇಸ್ರೇಲಿ ಸೇನೆ ಹೇಳಿದೆ. ಅಂದರೆ ಕಳೆದ ಆರು ದಿನಗಳಿಂದ ಇಸ್ರೇಲ್ ದಿನಕ್ಕೆ ಕನಿಷ್ಠ ಒಂದು ಸಾವಿರ ಬಾಂಬ್‌ಗಳನ್ನು ಹಾಕಿದೆ.ಇಸ್ರೇಲ್ – ಹಮಾಸ್ ಯುದ್ಧ ಮುಂದುವರೆದಿದೆ. ಯುದ್ಧ ಘೋಷಿಸಿದ ದಿನದಿಂದ ಗಾಜಾದ ಮೇಲೆ ಸುಮಾರು 6,000 ಬಾಂಬ್‌ಗಳನ್ನು ಹಾಕಲಾಗಿದೆ ಎಂದು ಇಸ್ರೇಲ್​ ಸೇನೆ ಹೇಳಿದೆ. ಅಕ್ಟೋಬರ್ 7 ರಂದು ಪ್ಯಾಲೆಸ್ತೀನ್‌ನ ಮೂಲಭೂತವಾದಿ ಭಯೋತ್ಪಾದಕ ಸಂಘಟನೆ ಹಮಾಸ್, ಇಸ್ರೇಲ್ ಮೇಲೆ […]

ಬೈಡನ್​ರನ್ನು 4 ಅಂಕಗಳಿಂದ ಹಿಂದಿಕ್ಕಿದ ನಿಕ್ಕಿ ಹ್ಯಾಲೆ : ಯುಎಸ್​ ಅಧ್ಯಕ್ಷೀಯ ಚುನಾವಣಾ ಸಮೀಕ್ಷೆ

ನ್ಯೂಯಾರ್ಕ್ (ಅಮೆರಿಕ): ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿಗಳಾದ ನಿಕ್ಕಿ ಹ್ಯಾಲೆ ಮತ್ತು ರಾನ್ ಡೆಸಾಂಟಿಸ್ ವಿರುದ್ಧ ಸೋಲು ಕಾಣಲಿದ್ದಾರೆ ಮತ್ತು 2024 ರ ಚುನಾವಣೆ ಈಗ ನಡೆದರೆ ಹಿಂದಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಕೊಂಚ ಮುನ್ನಡೆ ಸಾಧಿಸಬಹುದು ಎಂದು ಹೊಸ ಸಮೀಕ್ಷೆಯೊಂದು ತಿಳಿಸಿದೆ.ಕಾಲ್ಪನಿಕ ಮುಖಾಮುಖಿ ಸ್ಪರ್ಧೆಯಲ್ಲಿ ಬೈಡನ್ ಟ್ರಂಪ್ (49 ಪ್ರತಿಶತದಿಂದ 48 ಪ್ರತಿಶತ) ಗಿಂತ ಒಂದು ಪಾಯಿಂಟ್ ಮುನ್ನಡೆ ಸಾಧಿಸಿದರೆ, ಹ್ಯಾಲೆ ಬೈಡನ್ ಅವರಿಗಿಂತ ನಾಲ್ಕು ಅಂಕಗಳಿಂದ […]

17 ಮಂದಿ ನಾಪತ್ತೆ: ಹಮಾಸ್​ ದಾಳಿಯಲ್ಲಿ 22 ಅಮೆರಿಕನ್ನರು ಬಲಿ

ವಾಷಿಂಗ್ಟನ್(ಅಮೆರಿಕ): ಇಸ್ರೇಲ್​ ಮೇಲೆ ಹಮಾಸ್​ನ ದಾಳಿಯಿಂದ ಕೇವಲ ಇಸ್ರೇಲಿಯನ್ನರು ಮಾತ್ರವಲ್ಲದೇ, ಇಸ್ರೇಲ್​ನಲ್ಲಿ ನೆಲೆಸಿದ್ದ ಇತರ ದೇಶದ ಪ್ರಜೆಗಳು ಯುದ್ಧದಲ್ಲಿ ಸಾವನ್ನಪ್ಪಿದ್ದಾರೆ. ಹೌದು ಈ ಕುರಿತು ಅಮೆರಿಕವು ತನ್ನ ದೇಶದ ಪ್ರಜೆಗಳು ಪ್ರಾಣ ಕಳೆದುಕೊಂಡಿರುವುದನ್ನು ತಿಳಿಸಿದೆ. ಅಮೆರಿಕ ಶ್ವೇತಭವನವು ಇಸ್ರೇಲ್​ ಹಮಾಸ್​​ ದಾಳಿಯಲ್ಲಿ 22 ಅಮೆರಿಕನ್ನರು ಪ್ರಾಣ ಕಳೆದುಕೊಂಡಿದ್ದು, 17 ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ಬುಧವಾರ ವರದಿ ಮಾಡಿದೆ. ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಿದೆ.ಅಮೆರಿಕ ಶ್ವೇತಭವನವು ಇಸ್ರೇಲ್ ಮೇಲೆ ಹಮಾಸ್​ ನಡೆಸಿರುವ […]