ಮೃತ ಮೀನುಗಾರರಿಗೆ ಪರಿಹಾರ ನೀಡದ ಬಿಜೆಪಿಯಿಂದ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ: ಮಂಕಾಳ ವೈದ್ಯ

ಉಡುಪಿ:   ರಾಜ್ಯದಲ್ಲಿ ಶಾಂತಿ ಸೌಹಾರ್ದತೆ ನೆಲೆಸಬೇಕೆಂಬ ಉದ್ದೇಶದಿಂದ ಆ್ಯಂಟಿ ಕಮ್ಯುನಲ್ ವಿಂಗ್ ಸ್ಥಾಪಿಸಿದ್ದೇವೆ. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವವರ ವಿರುದ್ಧ ಕ್ರಮಕೈಗೊಳ್ಳುತ್ತೇವೆ. ಬಿಜೆಪಿ ವಿರೋಧ ಮಾಡುವುದು ಮಾಮೂಲಿ. ಮೃತಪಟ್ಟ ಮೀನುಗಾರರಿಗೆ ಅವರಿಂದ ಪರಿಹಾರ ಕೊಡಲು ಸಾಧ್ಯವಾಗಿಲ್ಲ. ಇನ್ನೂ ಅವರಿಂದ ಏನು ನಿರೀಕ್ಷಿಸಲು ಸಾಧ್ಯ ಎಂದು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಕಿಡಿಕಾರಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗರು ಬಾಯಿಗೆ ಬಂದ ಹಾಗೆ ಮಾತನಾಡ್ತಾರೆ ಅಂತಾ ನಾವು ಮಾತನಾಡಲ್ಲ. ನಾವು ಬಡವರ ಪರವಾಗಿ ಇದ್ದೇವೆ. ಸಾಮಾನ್ಯಜನರ ಮಾಡುತ್ತಿದ್ದೇವೆ. ಇಷ್ಟೇ ನಮಗೂ ಅವರಿಗೂ ಇರುವ ವ್ಯತ್ಯಾಸ ಎಂದ್ರು. ಕಾಂಗ್ರೆಸ್ ಹಿಂದಿನ ಬಾಗಿಲಿನಿಂದ ಬಂದು ಎಸ್ ಡಿಪಿಐ ಜೊತೆ ಕೈಜೋಡಿಸಿದೆ ಎಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನಮಗೆ ಮುಂದಿನ ಬಾಗಿಲ ಬಗ್ಗೆ ಮಾತ್ರ ಗೊತ್ತಿದೆ. ಹಿಂದಿನ ಬಾಗಿಲ ಬಗ್ಗೆ ಅವರಿಗೆ ಗೊತ್ತು. ಯಾರ ಯಾರ ಮನೆಗೆ, ಯಾರ ಯಾರ ಆಫೀಸ್ ಗೆ ಎಷ್ಟು ಬಾಗಿಲು ಇದೆಯೆಂದು‌ ನನಗೆ ಗೊತ್ತಿಲ್ಲ ಎಂದು ಹೇಳಿದರು.