ಉಡುಪಿ: ಬ್ಯಾನರ್, ಕಟೌಟ್‌ಗಳಿಗೆ ಅನುಮತಿ ಕಡ್ಡಾಯ: ನಗರಸಭೆ ಪೌರಾಯುಕ್ತರ ಪ್ರಕಟಣೆ

ಉಡುಪಿ: ಉಡುಪಿ ನಗರಸಭಾ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್, ಕಟೌಟ್ ಹಾಗೂ ಜಾಹೀರಾತು ಫಲಕಗಳನ್ನು ಅಳವಡಿಸಲು ನಗರಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದ್ದು, ಅನುಮತಿ ಪಡೆಯದೇ ಅಳವಡಿಸಿದ್ದಲ್ಲಿ, ಯಾವುದೇ ಮುನ್ಸೂಚನೆ ನೀಡದೇ ತೆರವುಗೊಳಿಸಿ, ದಂಡ ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪುರುಷರ ಡಬಲ್ಸ್ ಪ್ರಶಸ್ತಿ :ಬ್ಯಾಡ್ಮಿಂಟನ್ ಐತಿಹಾಸಿಕ ದಾಖಲೆ ನಿರ್ಮಿಸಿದ ಸಾತ್ವಿಕ್, ಚಿರಾಗ್ ಶೆಟ್ಟಿ

ಜಕಾರ್ತ(ಇಂಡೋನೇಷ್ಯಾ): ಸೂಪರ್ 1000 ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಗೆದ್ದ ಮೊದಲ ಭಾರತೀಯರಾಗಿದ್ದಾರೆ. ಸೂಪರ್​ 100, 300, 500,750 ಮತ್ತು 1000 ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಈ ಜೋಡಿ ಗೆದ್ದಿದೆ.ಇಂಡೋನೇಷ್ಯಾ ಓಪನ್ 2023 ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಮಲೇಷ್ಯಾದ ಆರೋನ್ ಚಿಯಾ ಮತ್ತು ಸೋಹ್ ವಿರುದ್ಧ ಗೆದ್ದ ಭಾರತದ ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಭಾನುವಾರ ಇತಿಹಾಸ ಬರೆದಿದ್ದಾರೆ.ಸೂಪರ್ 1000 ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಗೆದ್ದ ಮೊದಲ ಭಾರತೀಯರು ಎಂಬ ಖ್ಯಾತಿಯನ್ನು ಸಾತ್ವಿಕ್ ಮತ್ತು ಚಿರಾಗ್ ಶೆಟ್ಟಿ […]

800 ಸಿನಿಮಾಗಳಲ್ಲಿ ನಟಿಸಿದ್ದ ಜನಪ್ರಿಯ ಮಲಯಾಳಂ ನಟ ಪೂಜಾಪುರ ರವಿ ಇನ್ನಿಲ್ಲ

800 ಚಲನಚಿತ್ರಗಳು, 4,000 ನಾಟಕ: ಐದು ದಶಕಗಳಿಂದ ನಟನಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದ ಅವರು ಸುಮಾರು 800 ಚಲನಚಿತ್ರಗಳು ಮತ್ತು ಸುಮಾರು 4,000 ನಾಟಕಗಳಲ್ಲಿ ನಟಿಸಿದ್ದಾರೆ. ಅಪಾರ ಸಂಖ್ಯೆಯ ಅಭಿಮಾನಿಗಳನ್ನೂ ಸಂಪಾದಿಸಿದ್ದರು. ಇಂದು ಇಹಲೋಕ ತ್ಯಜಿಸಿದ್ದು, ರಂಗಭೂಮಿ, ಚಿತ್ರರಂಗ, ಅಭಿಮಾನಿ ಬಳಗದವರು ಕಣ್ಣೀರಿಟ್ಟಿದ್ದಾರೆ. ಜನಪ್ರಿಯ ನಟ ಪೂಜಾಪುರ ರವಿ ನಿಧನರಾಗಿದ್ದಾರೆ. ಇಡುಕ್ಕಿ ಜಿಲ್ಲೆಯ ಮರಯೂರಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಮರಯೂರಿನಲ್ಲಿರುವ ಮಗಳ ಮನೆಯಲ್ಲಿ ಜೀವನ ನಡೆಸುತ್ತಿದ್ದ ಇವರು ಭಾನುವಾರ ಬೆಳಗ್ಗೆ ಅನಾರೋಗ್ಯ ಹಿನ್ನೆಲೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ […]

​ಟಿವಿಯಲ್ಲಿ ಬಿಬಿಸಿ ಮುಷ್ಕರದಿಂದ ಪ್ರಸಾರವಾಗದ ಪಂದ್ಯ… ಕಪಿಲ್​ ದೇವ್​ ಅಜೇಯ ಶತಕದ ವಿಶ್ವಕಪ್​ ಇನ್ನಿಂಗ್ಸ್

ನವದೆಹಲಿ: ಇಂದಿನ ದಿನ ಅಂದರೆ ಜೂನ್ 18 ಭಾರತೀಯ ಕ್ರಿಕೆಟ್‌ಗೆ ತುಂಬಾ ವಿಶೇಷವಾಗಿದೆ.40 ವರ್ಷಗಳ ಹಿಂದೆ ಇದೇ ದಿನ ಭಾರತದ ಶ್ರೇಷ್ಠ ನಾಯಕ ಕಪಿಲ್ ದೇವ್ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ಈ ದಿನ ಜಿಂಬಾಬ್ವೆ ವಿರುದ್ಧ ಕಪಿಲ್ ದೇವ್ ಅಜೇಯ 175 ರನ್ ಗಳಿಸಿದ್ದು ದಾಖಲೆಯಾಗಿದೆ. ಈ ದಿನ ಭಾರತಕ್ಕೆ ಮೊದಲ ವಿಶ್ವಕಪ್ ಗೆದ್ದು ಕೊಟ್ಟ ಶ್ರೇಷ್ಠ ನಾಯಕ ಕಪಿಲ್ ದೇವ್ ಏಕದಿನ ಕ್ರಿಕೆಟ್‌ನ ಐತಿಹಾಸಿಕ ಇನ್ನಿಂಗ್ಸ್ ಆಡಿದರು. 1983ರ ವಿಶ್ವಕಪ್‌ನಲ್ಲಿ ಜಿಂಬಾಬ್ವೆ […]

ಗುರುಗ್ರಹಕ್ಕೆ ಮಿಂಚು ಬಂದರೆ ಹೇಗಿದೆ ನಾಸಾ ಸೆರೆಹಿಡಿದ ಅಪರೂಪದ ಚಿತ್ರ

ವಾಷಿಂಗ್ಟನ್ (ಅಮೆರಿಕ): ಜುನೋ ಮಿಷನ್​ ಡಿಸೆಂಬರ್ 30, 2020ರಂದು ಗುರುಗ್ರಹದ 31ನೇ ಪ್ರದಕ್ಷಿಣೆ ಪೂರ್ಣಗೊಳಿಸುತ್ತಿದ್ದಂತೆ ಈ ನೋಟವನ್ನು ದಾಖಲಿಸಿಕೊಂಡಿತ ಜುನೋ ಮಿಷನ್‌ಗೆ ಅಳವಡಿಸಿದ್ದ ವಿಶೇಷ ಕ್ಯಾಮರಾ ಗುರುಗ್ರಹದಲ್ಲಿ ಉಂಟಾಗಿದ್ದ ಮಿಂಚಿನ ಬೆಳಕನ್ನು ಸೆರೆಹಿಡಿದಿದೆ ಎಂದು ಅಮೆರಿಕದ ಪ್ರತಿಷ್ಟಿತ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ತಿಳಿಸಿದೆ.ಆಗಸ್ಟ್ 2011ರಲ್ಲಿ ಉಡಾವಣೆಯಾದ ನಾಸಾದ ಜುನೋ ಯೋಜನೆ ಜುಲೈ 2016ರಲ್ಲಿ ಗುರುಗ್ರಹ ತಲುಪಿತ್ತು. ಡಿಸೆಂಬರ್ 30, 2020ರಂದು ಈ ಗ್ರಹಕ್ಕೆ ಮಿಂಚು ಅಪ್ಪಳಿಸಿದಾಗ ಸೆರೆ ಹಿಡಿದ ಚಿತ್ರವಿದು. . ಚಿತ್ರದಲ್ಲಿ ಗುರುಗ್ರಹದ ಉತ್ತರ […]