ಡಿ.10-11 ರಂದು ಕೆನರಾ ಬ್ಯಾಂಕ್ ವತಿಯಿಂದ ಹೊಸವರ್ಷದ ಪ್ರಯುಕ್ತ ಕೆನರಾ ರಿಟೈಲ್ ಮೇಳ-2022

ಉಡುಪಿ: ಕೆನರಾ ಬ್ಯಾಂಕ್ ವತಿಯಿಂದ ಹೊಸವರ್ಷದ ಪ್ರಯುಕ್ತ ಕೆನರಾ ರಿಟೈಲ್ ಮೇಳ-2022 ಅನ್ನು ಡಿ.10 ಮತ್ತು 11 ರಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ಉಡುಪಿಯ ಎಂಜಿಎಂ ಕಾಲೇಜ್ ಗ್ರೌಂಡ್ ನಲ್ಲಿ ಆಯೋಜಿಸಲಾಗಿದೆ.

ಆಕರ್ಷಣೆಗಳು:

ಬ್ಯಾಂಕ್ ನಿಂದ ಮನೆ ಮತ್ತು ವಾಹನಗಳ ಸಾಲ ಸೌಲಭ್ಯ. ಪ್ರವೇಶ ಶುಲ್ಕ ಇಲ್ಲ. ಆಕರ್ಷಕ ದರದಲ್ಲಿ ಸುಲಭ ಸಾಲ. ಯಾವುದೇ ಜಾಮೀನು ಇಲ್ಲ, ಆದಾಯ ತೆರಿಗೆ ವಿನಾಯಿತಿ, ವಾಹನ ಸಾಲಕ್ಕೆ ಕೇವಲ 10% ಪಾವತಿ, ಉಳಿದ ಹಣವನ್ನು ಮಾಸಿಕ 84 ಕಂತುಗಳಲ್ಲಿ ಪಾವತಿಸಲು ಸೌಲಭ್ಯ, ಗೃಹ ಸಾಲಕ್ಕೆ 30 ವರ್ಷಗಳವರೆಗೆ ಗರಿಷ್ಠ ಮರುಪಾವತಿ ಇತ್ಯಾದಿ ಸೌಲಭ್ಯಗಳು.

ಸ್ಥಳದಲ್ಲೇ ಸಾಲ ಮಂಜೂರಾತಿ ಪಡೆಯಲು ಪ್ಯಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್, 3 ವರ್ಷದ ಐ.ಟಿ ರಿಟರ್ನ್/ಫಾರ್ಮ್ 16/6 ತಿಂಗಳ ಸಂಬಳ ಚೀಟಿ ತರತಕ್ಕದ್ದು.

ಅದೃಷ್ಟ ಭೇಟಿದಾರರಿಗೆ ಆಕರ್ಷಕ ಉಡುಗೊರೆ ದೊರೆಯಲಿದೆ ಎಂದು ಬ್ಯಾಂಕ್ ವ್ಯವಸ್ಥಾಪಕರು ತಿಳಿಸಿದ್ದಾರೆ.