ಬೈಂದೂರು: ಕಾಲು ಜಾರಿ ಬಿದ್ದು ಗಾಯಗೊಂಡಿದ್ದ ಮಹಿಳೆ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವು

ಬೈಂದೂರು: ಬೈಂದೂರು‌ ತಾಲೂಕಿನ ಕಾಲ್ತೋಡು ಗ್ರಾಮದ ಹುಂತನಹೊಳೆ ಎಂಬಲ್ಲಿ ಮನೆಯ ಬಳಿ‌ ಆಕಸ್ಮಿಕವಾಗಿ‌ ಕಾಲುಜಾರಿ ಬಿದ್ದು‌ ಗಾಯಗೊಂಡಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಫೆ‌. 1ರಂದು ನಡೆದಿದೆ.

ಕಾಲ್ತೋಡು ಗ್ರಾಮದ ಹುಂತನಹೊಳೆಯ ರಾಮಯ್ಯ ಗೌಡ ಅವರ ಮಗಳು ಲಲಿತ ಮೃತ ದುರ್ದೈವಿ. ಅವರಿಗೆ 36 ವರ್ಷ ವಯಸ್ಸಾಗಿತ್ತು. ಮೃತ ಲಲಿತಾ ಕಾಲ್ತೋಡು ಗ್ರಾಮದ ಹುಂತನಹೊಳೆ ಎಂಬಲ್ಲಿ ಗಂಡ ಹಾಗೂ ಮಕ್ಕಳ ಜೊತೆ ವಾಸ ಮಾಡಿಕೊಂಡಿದ್ದು, ಕೃಷಿ ಕೆಲಸ ಮಾಡಿಕೊಂಡಿದ್ದರು. ಜ.31ರಂದು ಸಹೋದರಿಯೊಂದಿಗೆ ಅಡಿಕೆ ಮರದ ಬುಡಕ್ಕೆ ತರಗೆಲೆಗಳನ್ನು ತರಲು ಹೋದವರು ವಾಪಾಸ್ಸು ಮನೆಗೆ ಬರುವ ವೇಳೆ ಮನೆಯ ಬಳಿಯ ಇಳಿಜಾರಿನಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದದ್ದರು. ಚಿಕಿತ್ಸೆಗಾಗಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ವೈದ್ಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ.

ಬಳಿಕ ವೈದ್ಯರ ಸಲಹೆಯಂತೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ಅಲ್ಲಿನ ವೈದ್ಯರು ಪರೀಕ್ಷೀಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಹೋಗುವಂತೆ ತಿಳಿಸಿದದ್ದಾರೆ. ಅದರಂತೆ ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ  ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಲಲಿತಾ, ಫೆ. 1ರಂದು ಚಿಕಿತ್ಸೆ ಫಲಕಾರಿಯಾಗದೇ  ಮೃತಪಟ್ಟಿದ್ದಾರೆ‌. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..