ಬೈಂದೂರು: ಕಡವೆ ಮಾಂಸ ಸಾಗಾಟ; ಇಬ್ಬರು ಆರೋಪಿಗಳ ಬಂಧನ

ಬೈಂದೂರು: ಕಡವೆ ಕೊಂದು ಅಕ್ರಮವಾಗಿ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬೈಂದೂರಿನ ಯಡ್ತರೆ ಗ್ರಾಮದ ಮದ್ದೋಡಿ ಸಮೀಪ ಸೋಮವಾರ ಬಂಧಿಸಿದ್ದಾರೆ.

ಯಡ್ತರೆ ನಿವಾಸಿಗಳಾದ ಮಮ್ಮಿಶಾಹ್ ಫೈಜಲ್, ಖರುರಿ ನಿಜಾಮುದ್ದೀನ್ ಬಂಧಿತ ಆರೋಪಿಗಳು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಎರಡು ಬೈಕ್, ಕಡವೆ ಮಾಂಸ ಹಾಗೂ 2 ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಇನ್ನು ಕೆಲವು ಮಂದಿ ಭಾಗಿಯಾಗಿದ್ದು, ಅವರು ಕಾರ್ಯಾಚರಣೆ ವೇಳೆ ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿ ಆಶಿಸ್ ರೆಡ್ಡಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಜಿ. ಅವರ ಮಾರ್ಗದರ್ಶನದಂತೆ ಬೈಂದೂರು ವಲಯ ಅರಣ್ಯಾಧಿಕಾರಿ ಟಿ ಕಿರಣ್ ಬಾಬು ನೇತೃತ್ವ ಸಿಬ್ಬಂದಿಗಳು ತಂಡ ಕಾರ್ಯಾಚರಣೆ ನಡೆಸಿ ಬೈಂದೂರಿನ ಯಡ್ತರೆ ಗ್ರಾಮದ ಮದ್ದೋಡಿ ಸಮೀಪ ಕುಂಜಳ್ಳಿ ಹೋಗುವ ರಸ್ತೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ.