ಬೈಂದೂರು: ಹೊಳೆಯಲ್ಲಿ ಮುಳುಗಿ ವೃದ್ಧೆ ಮೃತ್ಯು

ಬೈಂದೂರು: ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಯೊಬ್ಬರು ಹೊಳೆಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೈಂದೂರು ಗ್ರಾಮದ ತೋಗ್ತಿ ಎಂಬಲ್ಲಿ ಮಾ. 11ರಂದು ಬೆಳಕಿಗೆ ಬಂದಿದೆ.

ಬೈಂದೂರು ಗ್ರಾಮದ ತೋಗ್ತಿ ನಿವಾಸಿ ಪುಟ್ಟಿ ಮರಾಠಿ (85) ಮೃತ ವೃದ್ಧೆ. ಇವರು 15 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದರು. ಮಾ. 9ರ ಮಧ್ಯಾಹ್ನದಿಂದ ಮನೆಯಿಂದ ಕಾಣೆಯಾಗಿದ್ದರು. ಮನೆಯ ಸುತ್ತಮುತ್ತ ಹುಡುಕಾಡಿ ಸಂಬಂಧಿಕರಲ್ಲಿ ವಿಚಾರಿಸಿದರೂ ಪತ್ತೆಯಾಗಿರಲಿಲ್ಲ.

ಮಾ. 11ರಂದು ಬೆಳಿಗ್ಗೆ ಮನೆಯ ಸಮೀಪದ ಹೊಳೆಯಲ್ಲಿ ಪುಟ್ಟಿ ಮರಾಠಿಯವರ ಮೃತದೇಹ ಪತ್ತೆಯಾಗಿತ್ತು. ಅವರು ಹೊಳೆ ದಾಟಿಕೊಂಡು ಹೋಗುವಾಗ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.