ಉಡುಪಿಯ ಶ್ರೀ ವಿಟ್ಟಲ್ ಟೀ ಕಾಫಿ ಹೌಸ್ ನ ಸಿಬ್ಬಂದಿ ಹೇಳುತ್ತಿರುವ ಉಪಹಾರ ಮೆನುವಿನ ಶೈಲಿಗೆ ಮನ ಸೋತಿರುವ ಹೆಸರಾಂತ ಉದ್ಯಮಿ ಆನಂದ್ ಮಹೀಂದ್ರಾ ಈ ಬಗ್ಗೆ X ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ವಿಸಿಟ್ ಉಡುಪಿ ಎನ್ನುವ ಪೇಜ್ ನಲ್ಲಿ ಶ್ರೀ ವಿಟ್ಟಲ್ ಟೀ ಕಾಫಿ ಹೌಸ್ನ ಸಿಬ್ಬಂದಿ ನಿರರ್ಗಳವಾಗಿ ಉಪಹಾರ ಮೆನು ಹೇಳುತ್ತಿರುವ ವಿಡೀಯೋವನ್ನು ಹಂಚಿಕೊಂಡಿರುವ ಆನಂದ್ ಮಹೀಂದ್ರಾ, “ಚಾಟ್-ಜಿಪಿಟಿ ಇಂದ ಜೆನೆರೇಟ್ ಮಾಡಲಾದ ಉಪಹಾರ ಮೆನು ಕೂಡ ಉಡುಪಿಯ ಶ್ರೀ ವಿಟ್ಟಲ್ ಟೀ ಕಾಫಿ ಹೌಸ್ನ ಈ ಸಂಭಾವಿತ ವ್ಯಕ್ತಿಯ ‘ಹುಡುಕಾಟ’ ಸಾಮರ್ಥ್ಯಕ್ಕೆ ಹೊಂದಿಕೆಯಾಗುವುದಿಲ್ಲ. ಇದು ನನ್ನ ನಿರಂತರವಾಗಿ ವಿಸ್ತರಿಸುತ್ತಿರುವ ಪ್ರಯಾಣ ಬಕೆಟ್ ಪಟ್ಟಿಯಲ್ಲಿ ಮುಂದಿನದು. ಇನ್ಕ್ರೆಡಿಬಲ್ ಉಡುಪಿ” ಎಂದಿದ್ದಾರೆ.
Even a ChatGPT generated breakfast menu wouldn’t match the ‘search’ capability of this gent from the Shree Vittal Tea Coffee House, Udupi. It’s next on my ever-expanding travel bucket list. Incredible Udupi. #SaturdayMood
— anand mahindra (@anandmahindra) November 11, 2023
pic.twitter.com/BTl9rQmDkD

















