ಮಂಗಳೂರು-ಪೂನಾ, ಉಡುಪಿ-ಹೈದ್ರಾಬಾದ್ ಮಾರ್ಗದ ಬಸ್ ಸಂಚಾರ ಪುನರಾರಂಭ

ಉಡುಪಿ: ಪ್ರಸ್ತುತ ಕೋವಿಡ್-19 ಲಾಕ್‌ಡೌನ್ ಸಡಿಲಗೊಂಡ ಹಿನ್ನಲೆಯಲ್ಲಿ ಕ.ರಾ.ರ.ಸ. ನಿಗಮದ ವತಿಯಿಂದ ಮಂಗಳೂರು-ಪೂನಾ ಮಾರ್ಗದಲ್ಲಿ ಅಂಬಾರಿ ಡ್ರೀಮ್‌ಕ್ಲಾಸ್ ವೋಲ್ವೋ ಎಸಿ ಸ್ಲೀಪರ್ ಸಾರಿಗೆಯನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಜೂನ್ 28 ರಿಂದ ಪುನರಾರಂಭ ಆಗಲಿದೆ.

ಬಸ್ ಸಂಚಾರದ ವಿವರ:
ಅಂಬಾರಿ ಡ್ರೀಮ್‌ಕ್ಲಾಸ್ ವೋಲ್ವೋ ಎಸಿ ಸ್ಲೀಪರ್ ಸಾರಿಗೆಯು ಮಧ್ಯಾಹ್ನ 4 ಗಂಟೆಗೆ ಮಂಗಳೂರಿನಿಂದ ಹೊರಟು ಉಡುಪಿ, ಮಣಿಪಾಲ, ಕುಂದಾಪುರ, ಕುಮಟ, ಬೆಳಗಾವಿ, ಕರಾಡ, ಸತಾರ ಮಾರ್ಗವಾಗಿ ಬೆಳಿಗ್ಗೆ 6 ಗಂಟೆಗೆ ಪೂನಾ ತಲುಪಲಿದೆ. ಮರು ಪ್ರಯಾಣದಲ್ಲಿ ಸಂಜೆ 6.30 ಕ್ಕೆ ಪೂನಾದಿಂದ ಹೊರಟು ಮರುದಿನ ಬೆಳಿಗ್ಗೆ 7 ಗಂಟೆಗೆ ಮಂಗಳೂರು ತಲುಪಲಿದೆ.

ಉಡುಪಿ-ಹೈದ್ರಾಬಾದ್ ಗೆ ಬಸ್ ಸಂಚಾರ ಆರಂಭ:
ಉಡುಪಿಯಿಂದ ಹೈದ್ರಾಬಾದ್‌ಗೆ ಇಂದಿನಿಂದ ರಾಜಹಂಸ ಸಾರಿಗೆ ಬಸ್ ಗಳ ಸಂಚಾರ ಆರಂಭಗೊಂಡಿದ್ದು, ಉಡುಪಿಯಿಂದ ಬೆಳಿಗ್ಗೆ 11.30ಕ್ಕೆ ಹೊರಟು ಕುಂದಾಪುರ, ತೀರ್ಥಹಳ್ಳಿ, ಶಿವಮೊಗ್ಗ, ಹೊಸಪೇಟೆ, ರಾಯಚೂರು, ಮೆಹಬೂಬನಗರ ಮಾರ್ಗವಾಗಿ ಬೆಳಿಗ್ಗೆ 6 ಗಂಟೆಗೆ ಹೈದ್ರಾಬಾದ್ ತಲುಪಲಿದೆ. ಮರು ಪ್ರಯಾಣದಲ್ಲಿ ಸಂಜೆ 5.45ಕ್ಕೆ ಹೈದ್ರಾಬಾದ್‌ನಿಂದ ಹೊರಟು ಮರುದಿನ ಬೆಳಿಗ್ಗೆ 11 ಗಂಟೆಗೆ ಉಡುಪಿ ತಲುಪಲಿದೆ.

ಆನ್‌ಲೈನ್‌ ಮುಂಗಡ ಟಿಕೆಟ್‌ ಬುಕ್ಕಿಂಗ್‌ ಸೌಲಭ್ಯಕ್ಕೆ www.ksrtc.in  ಅಥವಾ ಹತ್ತಿರದ ರಿಸರ್ವೇಶನ್‌ ಕೌಂಟರನ್ನು ಸಂಪರ್ಕಿಸುವಂತೆ ಮಂಗಳೂರು ವಿಭಾಗೀಯ ನಿಯಂತ್ರಣಾಧಿ ಕಾರಿ ತಿಳಿಸಿದ್ದಾರೆ.