ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ : ಸಾಣೂರಿನ ಆಯುಷ್ ಶೆಟ್ಟಿಗೆ ಕಂಚು

ಕಾರ್ಕಳ: ಅಮೇರಿಕಾದಲ್ಲಿ ನಡೆದ ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ಚಾಂಪಿಯನ್ ಷಿಪ್ ನಲ್ಲಿ ಸಾಣೂರಿನ ಆಯುಷ್ ಶೆಟ್ಟಿ ಕಂಚಿನ ಪದಕ ಗೆದ್ದು ಭಾರತಕ್ಕೆ ಕೀರ್ತಿ ತಂದಿದ್ದಾರೆ.

ಶನಿವಾರ ನಡೆದ ಸೆಮಿಫೈನಲ್ ನಲ್ಲಿ ಆಯುಷ್ ಇಂಡೋನೇಷ್ಯಾ ಆಟಗಾರ ಅಲ್ವಿ ಫರ್ಹಾನ್ ಜೊತೆ ಸೆಣಸಾಡಿದ್ದು, ಕಂಚಿನ ಪದಕ ಗೆಲ್ಲುವಲ್ಲಿ ಸಫಲರಾಗಿದ್ದಾರೆ. ವಿಶ್ವ ಜೂನಿಯರ್ ಬ್ಯಾಡ್ಮಿಂಟನ್ ನಲ್ಲಿ ಪದಕ ಗೆದ್ದ ಭಾರತದ ೧೦ನೇ ಆಟಗಾರ ಎಂಬ ಗೌರವ ಆಯುಷ್ ಗೆ ಪ್ರಾಪ್ತವಾಗಿದೆ.