ಉಡುಪಿಗೆ ಬ್ರಿಟನ್ ವೈರಸ್ ಭೀತಿ ಇಲ್ಲ: ಎಂಟು ಮಂದಿಯ ವರದಿ ನೆಗೆಟಿವ್

ಉಡುಪಿ: ಬ್ರಿಟಿನ್ ನಿಂದ ಉಡುಪಿ ಜಿಲ್ಲೆಗೆ ಎಂಟು ಮಂದಿ ಆಗಮಿಸಿದ್ದರಿಂದ ಜಿಲ್ಲೆಗೆ ಬ್ರಿಟನ್ ವೈರಸ್ ಭೀತಿ ಕಾಡಿತ್ತು. ಆದರೆ ಇದೀಗ ಆ ಎಂಟು ಮಂದಿಯ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದು, ಇದರಿಂದ ಜಿಲ್ಲೆಯ ಜನತೆಯ ಆತಂಕ ದೂರಾಗಿದೆ.

ಡಿಸೆಂಬರ್ 21ರಂದು ಇಂಗ್ಲೆಂಡ್ ನಿಂದ ಎಂಟು ಮಂದಿ ಜಿಲ್ಲೆಗೆ ಬಂದಿದ್ದರು. ಕಾರ್ಕಳ ತಾಲೂಕಿನ ನಾಲ್ವರು, ಉಡುಪಿ ತಾಲೂಕಿನ ಮೂವರು ಮತ್ತು ಕುಂದಾಪುರ ತಾಲೂಕಿನ ಒಬ್ಬರು ಸೇರಿ ಒಟ್ಟು 8ಮಂದಿ ಆಗಮಿಸಿದ್ದರು. ಇದರಿಂದ ಜಿಲ್ಲೆಯಾದ್ಯಂತ ಬ್ರಿಟನ್ ವೈರಸ್ ಹರಡುವ ಭೀತಿ‌ ಎದುರಾಗಿತ್ತು. ಆದರೆ, ಎಲ್ಲರ ಗಂಟಲ ದ್ರವದ ಮಾದರಿಯ ಪರೀಕ್ಷಾ ವರದಿ ಇಂದು ಬಂದಿದ್ದು, ಎಲ್ಲರ ವರದಿಯೂ ನೆಗೆಟಿವ್ ಆಗಿದೆ. ಆದ್ದರಿಂದ ಜಿಲ್ಲೆಯ ಜನತೆ ನೆಮ್ಮದಿಯ ನಿಟ್ಟುಸಿರುಬಿಡುವಂತಾಗಿದೆ.

ಎಂಟು ಮಂದಿಯ ವರದಿ ನೆಗೆಟಿವ್ ಬಂದರೂ ಅವರ ಹೋಮ್ ಕ್ವಾರಂಟೈನ್ ಅವಧಿ ಮುಂದುವರಿಯಲಿದ್ದು, 7 ದಿನಗಳ ಬಳಿಕ ಮತ್ತೆ ಗಂಟಲ ದ್ರವದ ಪರೀಕ್ಷೆ ನಡೆಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.