ಉಡುಪಿ: ಜವಳಿ ಉದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ‘ಸತ್ಯನಾಥ ಸ್ಟೋರ್ಸ್’, ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಮನೆಮಾತಾಗಿರುವ ವಸ್ತ್ರ ಮಳಿಗೆಯಾಗಿದೆ.
ಕಳೆದ ಏಳು ದಶಕಗಳಿಂದ ಜವಳಿ ವ್ಯಾಪರದ ಮೂಲಕ ಸತ್ಯನಾಥ ಸ್ಟೋರ್ಸ್ ಗ್ರಾಹಕರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗಿದೆ. ಇದೀಗ ತನ್ನ ಗ್ರಾಹಕರಿಗೆ ವಿಶೇಷ ರಿಯಾಯಿತಿ ದರದಲ್ಲಿ ಜವಳಿ ಖರೀದಿಸಲು ಸದಾವಕಾಶವನ್ನು ಕಲ್ಪಿಸಿಕೊಡುತ್ತಿದೆ.
ಹೌದು, ಬ್ರಹ್ಮಾವರ, ತೀರ್ಥಹಳ್ಳಿ ಹಾಗೂ ಕೊಪ್ಪ ದಲ್ಲಿರುವ ಸತ್ಯನಾಥ ಸ್ಟೋರ್ಸ್ನ ಬೃಹತ್ ವಸ್ತ್ರಮಳಿಗೆಗಳಲ್ಲಿ ಆಗಸ್ಟ್ 1 ರಿಂದ *ಬಿಗ್ ಡಿಸ್ಕೌಂಟ್ ಸೇಲ್* ವಿಶೇಷ ರಿಯಾಯಿತಿ ದರದಲ್ಲಿ ಉಡುಪು ಮಾರಾಟ ಮೇಳ ನಡೆಯಲಿದೆ.
ಪ್ರತಿಷ್ಠಿತ ಬ್ರ್ಯಾಂಡೆಡ್ ಉಡುಪುಗಳ ಸಂಗ್ರಹ: ದೇಶದ ಪ್ರತಿಷ್ಠಿತ ಕಂಪನಿಗಳ ಬ್ರ್ಯಾಂಡೆಡ್, ಸಾಂಪ್ರದಾಯಿಕ, ಆಧುನಿಕ ಶೈಲಿಯ ಉಡುಪುಗಳು ಲಭ್ಯವಿದ್ದು, ಎಲ್ಲಾ ವಯಸ್ಸಿನವರಿಗೆ ಒಪ್ಪುವ ನವೀನ ಬಟ್ಟೆಗಳ ಸಂಗ್ರಹವಿದೆ. ಇಪ್ಪತ್ತಕ್ಕೂ ಅಧಿಕ ರಾಜ್ಯಗಳ ವೈವಿಧ್ಯಮಯ ಜವಳಿಯ ಅಪಾರ ಸಂಗ್ರಹವಿದ್ದು, ಪರಿಪೂರ್ಣ ಮದುವೆ ಜವಳಿ ಮಳಿಗೆಗೆ ಸತ್ಯನಾಥ ಸ್ಟೋರ್ಸ್ ಹೆಸರುವಾಸಿಯಾಗಿದೆ.
ಸೀರೆಗಳ ಮೇಲೆ ವಿಶೇಷ ರಿಯಾಯಿತಿ:
ಇದೇ ವೇಳೆ ನವೀನ ಬ್ರ್ಯಾಂಡ್ ನ ಬೃಹತ್ ಸೀರೆ ಮೇಳವನ್ನೂ ಆಯೋಜಿಸಲಾಗಿದೆ. ಕಂಚಿವರಂ, ಅರಣಿ, ಧರ್ಮಾವರಮ್, ಸತ್ಯಮಂಗಳ, ಹಿಂದೂಪುರ, ಸೇಲಂ, ಬನಾರಸ್, ಕೊಲ್ಕತ್ತಾ, ಸೂರತ್, ಮಧುಬನಿ, ಚಪಾ, ಮೀನಾ, ಖಾತಾ, ಮಸಭಾ, ಕೋಟ, ಪೋಚಂಪಲ್ಲಿ, ಇಕ್ಕತ್, ಪೈತನಿ, ನಾರಾಯಣಪೇಟ್ ಸಹಿತ ಅನೇಕ ತರಹದ ರೇಷ್ಮೆ ಸೀರೆಗಳ ಸಂಗ್ರಹವಿದೆ.
ಅನೇಕ ಪ್ರತಿಷ್ಟಿತ ಕಂಪೆನಿಗಳ ಫ್ಯಾನ್ಸಿ ಡಿಸೈನರ್ ಸೀರೆಗಳು ಈ ಮೇಳದಲ್ಲಿ ಲಭ್ಯವಿದೆ. ಮಹಿಳೆಯರ ಕುರ್ತಿಸ್, ಬ್ರೈಡಲ್ ಲೆಹೆಂಗಾ, ಚೂಡಿದಾರ್ಸ್, ಗೌನ್ಸ್, ಡ್ರೆಸ್ ಮೆಟಿರೀಯಲ್ಸ್, ಪುರುಷರ ಶರ್ಟ್, ಟೀಶರ್ಟ್, ಜೀನ್ಸ್ ಪ್ಯಾಂಟ್, ಮಕ್ಕಳ ವೆಸ್ಟರ್ನ್ಸ್ ಡ್ರೆಸ್, ಫ್ರಾಕ್, ಚೂಡಿದಾರ್, ಗೌನ್ಸ್, ಹ್ಯಾಂಡ್ಲೂಮ್ಸ್, ಬೆಡ್ಶೀಟ್, ಬೆಡ್ಸ್ಪ್ರಿಡ್, ಬ್ಲಾೃಂಕೆಟ್ಸ್ ಇನ್ನಿತರೆ ಬಟ್ಟೆಗಳ ವಿಫುಲ ಸಂಗ್ರಹವಿದ್ದು, ವಿಶೇಷ ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದೆ.
ಸತ್ಯನಾಥ ಸ್ಟೋರ್ಸ್ ನಲ್ಲಿ ಕೋವಿಡ್-19 ಸರ್ಕಾರದ ಮಾರ್ಗಸೂಚಿಯನ್ನು ವ್ಯವಸ್ಥಿತವಾಗಿ ಪಾಲಿಸಲಾಗುತ್ತಿದೆ. ಮಳಿಗೆಯಲ್ಲಿ ಸಾಮಾಜಿಕ ಅಂತರ ಪಾಲನೆ, ದಿನನಿತ್ಯ ಸ್ಯಾನಿಟೈಸ್ ಪ್ರಕ್ರಿಯೆ ನಡೆಸಲಾಗುತ್ತದೆ. ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.