ಉಡುಪಿ: ಬ್ರಹ್ಮಾವರ ತಾಲೂಕಿನ ಹೊಸೂರು ಗ್ರಾಮದ ಉದ್ದಳ್ಕ ಎಂಬಲ್ಲಿ ಭಾನುವಾರ (ಫೆ.14) ರಾತ್ರಿ ನಡೆದ ನವೀನ್ ನಾಯ್ಕ್ (ಗುಂಡ) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಇಂದು ಬಂಧಿಸಿದ್ದಾರೆ.
ಮಲ್ಪೆ ನಿವಾಸಿಗಳಾದ ಗೌತಮ್ ( 27 ), ಮನೋಜ್ ಭಂಡಾರಿ (30), ಧನುಷ್ (27), ಚೇತನ್ ಕುಮಾರ್ (24) ತಿಲಕ ರಾಜ್ (36) ಹಾಗೂ ಕದಿಕೆಯ ಸಿದ್ದಾರ್ಥ್( 23 )ಬಂಧಿತ ಆರೋಪಿಗಳು. ಬಂಧಿತ ಆರೋಪಿತಗಳಿಂದ ಕೃತ್ಯಕ್ಕೆ ಬಳಸಿದ ಮಾರುತಿ ರಿಟ್ಜ್ ಕಾರನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಘಟನೆಯ ವಿವರ:
ಹೊಸೂರು ಗ್ರಾಮದ ಉದ್ದಳ್ಕ ಎಂಬಲ್ಲಿ ನೆರೆಮನೆಯ ಮಹಿಳೆಯ ಅನೈತಿಕ ಸಂಬಂಧದ ಬಗ್ಗೆ ಪ್ರಶ್ನಿಸಿದ ನವೀನ್ ನಾಯ್ಕ್ ನನ್ನು ಆರು ಮಂದಿಯ ತಂಡ ಮಾರಕಾಸ್ತ್ರಗಳಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿದ್ದರು.
ಪ್ರಕರಣ ಬೇಧಿಸಲು ಎಸ್ಪಿ ವಿಷ್ಣುವರ್ಧನ ಮತ್ತು ಎಎಸ್ಪಿ ಕುಮಾರಚಂದ್ರ ಅವರ ಮಾರ್ಗದರ್ಶನದಂತೆ ಉಡುಪಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಸದಾನಂದ ಎಸ್ ನಾಯ್ಕ್ ನಿರ್ದೇಶನದಂತೆ ತನಿಖಾ ತಂಡಗಳನ್ನು ರಚಿಸಲಾಗಿತ್ತು.
ಕೊಲೆ ಪ್ರಕರಣ ನಡೆದು 24 ಗಂಟೆಯೊಳಗೆ ತಲೆಮರೆಸಿಕೊಂಡಿರುವ 6 ಜನ ಆರೋಪಿಗಳನ್ನು ಇಂದು ಉಡುಪಿಯಲ್ಲಿ ಪತ್ತೆ ಹಚ್ಚಿ ಬಂಧಿಸುವಲ್ಲಿ ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಅನಂತಪದ್ಮನಾಭ ಹಾಗೂ ಬ್ರಹ್ಮಾವರ ಪಿ.ಎಸ್.ಐ ಗುರುನಾಥ ಬಿ ಹಾದಿಮನಿ, ಮಲ್ಪೆ ಪಿ.ಎಸ್.ಐ ತಿಮ್ಮೇಶ ಬಿ.ಎನ್ ವಿಶೇಷ ತಂಡ ಯಶಸ್ವಿಯಾಗಿದೆ.
ಈ ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕ ಅನಂತಪದ್ಮನಾಭ, ವೃತ್ತ ಕಚೇರಿಯ ಎಎಸ್‌ಐ ಕೃಷ್ಣಪ್ಪ, ಚಾಲಕ ಸಂತೋಷ, ಬ್ರಹ್ಮಾವರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ಗುರುನಾಥ ಬಿ ಹಾದಿಮನಿ, ಸಿಬ್ಬಂದಿ ಸಿ.ಹೆಚ್.ಸಿ ಆಶೋಕ ಮೆಂಡನ್, ಪ್ರವೀಣ್ ಶೆಟ್ಟಿಗಾರ್, ಗಣೇಶ ದೇವಾಡಿಗ, ರಾಘವೇಂದ್ರ, ಸಂತೋಷ ಶೆಟ್ಟಿ ಸಿ.ಪಿ.ಸಿ.ಗಳಾದ ದಿಲೀಪ್ ಕುಮಾರ, ಮಹಮ್ಮದ್ ಅಜ್ಮಲ್, ಅಬ್ದುಲ್ ಬಶೀರ್, ನಿಂಗಪ್ಪ, ದೇವರಾಜ, ರಾಜೇಶ ಮತ್ತು ಮಪಿಸಿ ದಿವ್ಯಾ ಹಾಗೂ ಮಲ್ಪೆ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕ ತಿಮ್ಮೇಶ ಬಿ.ಎನ್, ಎಚ್‌ಸಿ ರತ್ನಾಕರ ಶೆಟ್ಟಿ, ಸಿಪಿಸಿ ರವಿರಾಜ ಹಾಗೂ ಉಡುಪಿ ಪೊಲೀಸ್ ಉಪಾಧೀಕ್ಷಕರ ಕಚೇರಿ ಸಿಬ್ಬಂದಿ ಎ.ಎಸ್.ಐ ಯೋಗೀಶ್ , ಸಿಪಿಸಿ ಕಿರಣ್ ಕುಮಾರ್ ಭಾಗವಹಿಸಿದ್ದರು.