ಬ್ರಹ್ಮಾವರ: ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹ; ರಾ.ಹೆ. 66 ತಡೆದು ರೈತರಿಂದ ಪ್ರತಿಭಟನೆ
ಹೆದ್ದಾರಿಯಲ್ಲೇ ಹಡಿಮಂಚವನ್ನಿಟ್ಟು ಭತ್ತದ ತೆನೆಯನ್ನು ಬಡಿಯುವ ಮೂಲಕ ಪ್ರತಿಭಟಿಸಿದ ರೈತರು
ಬ್ರಹ್ಮಾವರ: ಭತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಜನಪರ ರೈತ ಹೋರಾಟ ಸಮಿತಿಯ ನೇತೃತ್ವದಲ್ಲಿ ರೈತರು ಇಂದು ರಾಷ್ಟ್ರೀಯ ಹೆದ್ದಾರಿ 66 ತಡೆದು ಪ್ರತಿಭಟನೆ ನಡೆಸಿದರು.
ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ರೈತರು ಹೋರಾಟಗಾರರು ಹೆದ್ದಾರಿಯಲ್ಲೇ ಹಡಿಮಂಚವನ್ನಿಟ್ಟು ಭತ್ತದ ತೆನೆಯನ್ನು ಬಡಿಯುವ ಮೂಲಕ ಆಕ್ರೋಶ ಹೊರಹಾಕಿದರು.
ಭತ್ತದ ಕಟಾವು ಆರಂಭವಾಗಿದ್ದು, ಸರ್ಕಾರ ಕೂಡಲೇ ಬೆಂಬಲ ಬೆಲೆ ನಿಗದಿ ಮಾಡಬೇಕು. ಕೂಡಲೇ ಪ್ರತಿ ಕ್ವಿಂಟಾಲ್ ಭತ್ತಕ್ಕೆ ಕನಿಷ್ಠ ₹2,500 ಬೆಂಬಲ ಬೆಲೆ ನೀಡಬೇಕು ಎಂದು ರೈತರು ಆಗ್ರಹಿಸಿದರು.
ಸಾಮಾಜಿಕ ಮುಖಂಡರಾದ ಜ್ಞಾನ ವಸಂತ ಶೆಟ್ಟಿ, ಬೈಕಾಡಿ ಸುಪ್ರಸಾದ್ ಶೆಟ್ಟಿ, ಸತ್ಯನಾರಾಯಣ ಉಡುಪ , ಶಾಂತಾರಾಮ ಶೆಟ್ಟಿ ಬಾರ್ಕೂರು, ಭೋಜ ಪೂಜಾರಿ ಗಿಳಿಯಾರು, ಕೋಟ ರೈತಧ್ವನಿ ಸಂಘಟನೆ ಅಧ್ಯಕ್ಷ ಮಣೂರು ಜಯರಾಮ್ ಶೆಟ್ಟಿ, ಭುಜಂಗ ಶೆಟ್ಟಿ ಬ್ರಹ್ಮಾವರ, ಡಾ. ಸುನೀತಾ ಶೆಟ್ಟಿ, ರೈತ ಸಂಘದ ಪ್ರಕಾಶ್ ಚಂದ್ರ ಶೆಟ್ಟಿ ಕಂಬದಕೋಣೆ, ಶಿವಮೂರ್ತಿ ಉಪಾಧ್ಯಾಯ ಪಾರಂಪಳ್ಳಿ, ಶಾನ್ಕಟ್ಟು ಉಮೇಶ್ ಶೆಟ್ಟಿ, ಉಮಾನಾಥ ಶೆಟ್ಟಿ, ಮನು ಹಂದಾಡಿ, ಮಂಜಯ್ಯ ಶೆಟ್ಟಿ, ರಘು ಮಧ್ಯಸ್ಥ ಪಾರಂಪಳ್ಳಿ, ಶೇಡಿಕೋಡ್ಲು ವಿಠಲ ಶೆಟ್ಟಿ, ರವೀಂದ್ರ ಐತಾಳ ಪಡುಕರೆ, ಶಿವಾನಂದ ಅಡಿಗ ಮಣೂರು, ಭಾಸ್ಕರ ಶೆಟ್ಟಿ ಮಣೂರು, ರಮೇಶ್ ಪೂಜಾರಿ, ಕೋಟ ಸಿ.ಎ. ಬ್ಯಾಂಕ್ ಅಧ್ಯಕ್ಷ ತಿಮ್ಮ ಪೂಜಾರಿ, ಭರತ್ ಶೆಟ್ಟಿ ಗಿಳಿಯಾರು, ಜಯಕರ್ನಾಟಕ ಸತೀಶ್ ಪೂಜಾರಿ, ಜನನಿ ದಿವಾಕರ ಶೆಟ್ಟಿ, ಪ್ರವೀಣ್ ಯಕ್ಷಿಮಠ, ವಿನಯ ಕುಮಾರ್ ಕಬ್ಯಾಡಿ, ಉಮೇಶ್ ಶೆಟ್ಟಿ ಶಂಕರಣರಾಯಣ, ರವಿ ಕುಲಾಲ್, ಗೌತಮ್ ಹೆಗ್ಡೆ, ಪ್ರಕಾಶ್ ಶೆಟ್ಟಿ ಹೇರಾಡಿ, ದಿನೇಶ್ ಗಾಣಿಗ ಕೋಟ, ಕುಶ ಆಚಾರ್ಯ, ಉದಯ್ ಶೆಟ್ಟಿ ಪಡುಕರೆ, ಆಲ್ವಿನ್ ಅಂದ್ರಾದೆ, ಜನಪರ ಹೋರಾಟ ಸಮಿತಿಯ ಸಂಚಾಲಕರಾದ ವಸಂತ್ ಗಿಳಿಯಾರ್, ಅನುಷಾ ನಾಯಕ್ ಮೊದಲಾದವರು ಇದ್ದರು.