ಬ್ರಹ್ಮಾವರ: ಕದ್ರಂಜೆಯ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾಚೀನ ಶಿವಲಿಂಗ ಪತ್ತೆ

ಬ್ರಹ್ಮಾವರ: ಇಲ್ಲಿನ ಬಿಲ್ಲಾಡಿ ಗ್ರಾಮದ ಕದ್ರಂಜೆಯ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಈ ವೇಳೆ ನೆಲಸಮವಾಗಿದ್ದ ಗರ್ಭಗುಡಿಯಲ್ಲಿ ಶೋಧ ನಡೆಸಿದಾಗ ಪ್ರಾಚೀನ ಶಿವಲಿಂಗವೊಂದು ಪತ್ತೆಯಾಗಿದೆ.

ಮಹಾಲಿಂಗೇಶ್ವರ ದೇಗುಲ ಕಳೆದ ಹಲವು ದಶಕಗಳ ಹಿಂದೆ ನಿರ್ವಹಣೆ ಇಲ್ಲದೆ ಪಾಳುಬಿದ್ದು ಹೋಗಿದ್ದು, ಇದೀಗ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳ ಮಾರ್ಗದರ್ಶನದಲ್ಲಿ ಊರಿನ ಜನರ ಸಹಕಾರದೊಂದಿಗೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ. ಅಲ್ಲದೆ, ಈಗಾಗಲೇ ಅಷ್ಟಮಂಗಲ ಪ್ರಶ್ನೆ ಚಿಂತನೆ ಕಾರ್ಯ ನಡೆದಿದ್ದು, ನವೀಕರಣ ಪ್ರಕ್ರಿಯೆಗಳ ಆರಂಭವಾಗಿದೆ.

ಈ ಶುಭಕಾರ್ಯದ ಹೊತ್ತಲ್ಲೇ ನೆಲಸಮವಾಗಿದ್ದ ಗರ್ಭಗುಡಿಯಲ್ಲಿ ಜಾಗದಲ್ಲಿ ಶಿವಲಿಂಗ ಪತ್ತೆಯಾಗಿರುವುದು ದೇಗುಲದ ಪುನರುತ್ಥಾನ ಕಾರ್ಯಕ್ಕೆ ನವೋತ್ಸಾಹದ ಸ್ಪರ್ಶವಾಗಿದೆ.