ಫೆ. 14ರಂದು ಬಸ್ರೂರು ಮಂಡಿಕೇರಿ ಮಹಾಲಸಾ ನಾರಾಯಣೀ ದೇವಸ್ಥಾನ ಬ್ರಹ್ಮರಥೋತ್ಸವ

ಕುಂದಾಪುರ : ಬಸ್ರೂರು ಮಂಡಿಕೇರಿಯ 475 ವರ್ಷ ಇತಿಹಾಸವುಳ್ಳ ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದ 15ನೇ ವರ್ಷದ ಬ್ರಹ್ಮರಥೋತ್ಸವ ಫೆ. 14ರಂದು ಜರಗಲಿದೆ.

ಶ್ರೀದೇವಿಗೆ ಪಂಚಾಮೃತ ಅಭಿಷೇಕ, ಕನಕಾಭಿಷೇಕ, ತುಲಾಭಾರ ಸೇವೆ, ಯಜ್ಞವಿಧಿಗಳು, ಪ್ರಾರ್ಥನೆ, ಮಹಾಪೂಜೆ, ಮಹಾಬಲಿಪ್ರದಾನ, ಸಂಜೆ ರಥಾರೋಹಣ, ಸಮಾರಾಧನೆ ಅನಂತರ ರಥೋತ್ಸವ, ಚೆಂಡೆ ವಾದನ, ಆಕರ್ಷಕ ಸುಡುಮದ್ದು ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿವೆ. ಫೆ. 11ರಿಂದ 15ರ ತನಕ ವಿವಿಧ ಧಾರ್ಮಿಕ ಕ್ರಿಯೆಗಳು ನೆರವೇರಲಿದ್ದು, ಫೆ. 15ರಂದು ಅವಭ್ರಥ ಉತ್ಸವ ನಡೆಯಲಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.