ಹ್ಯುಂಡೈ ಮೋಟಾರ್ ಇಂಡಿಯಾ ತನ್ನ ಬಹುನಿರೀಕ್ಷಿತ ‘ಎಕ್ಸ್‌ಟರ್’ ಮೈಕ್ರೋ ಎಸ್‌ಯುವಿ ಬುಕಿಂಗ್ ಅನ್ನು ಸ್ಪರ್ಧಾತ್ಮಕ ಬೆಲೆಯಲ್ಲಿ ಪ್ರಾರಂಭ ಮಾಡಿದ್ದು, ಆಸಕ್ತ ಗ್ರಾಹಕರು ಆನ್‌ಲೈನ್‌ನಲ್ಲಿ ಅಥವಾ ಸಮೀಪದ ಡೀಲರ್ ಗೆ ಭೇಟಿ ನೀಡಿ ರೂ.11,000 ಪಾವತಿಸಿ, ಕಾರಿನ ಬುಕಿಂಗ್ ಅನ್ನು ಕಾಯ್ದಿರಿಸಬಹುದಾಗಿದೆ. ಹಬ್ಬದ ಋತುವಿನಲ್ಲಿ ‘ಎಕ್ಸ್‌ಟರ್’ ಎಸ್‌ಯುವಿಯನ್ನು ರಸ್ತೆಗಿಳಿಸಲು ಕಂಪನಿ ಸಿದ್ದತೆ ನಡೆಸಿದೆ ಎಂದು ವರದಿಯಾಗಿದೆ.
ಹೆಚ್ಚಿನ ಸಂಖ್ಯೆಯ ಯುವ ಗ್ರಾಹಕರನ್ನು ಸೆಳೆಯಳು ಹ್ಯುಂಡೈ ಎಕ್ಸ್‌ಟರ್ ಅನ್ನು ವಿನ್ಯಾಸ ಮಾಡಲಾಗಿದ್ದು, ಮುಂಭಾಗವು ಹೆಚ್ ಆಕಾರದ LED DRLs ಜೊತೆ ಸ್ಪ್ಲಿಟ್ ಹೆಡ್‌ಲ್ಯಾಂಪ್ ಸೆಟಪ್ ಹೊಂದಲಿದೆ. ಮೇಲ್ಭಾಗ ಟರ್ನ್ ಇಂಡಿಕೇಟರ್ಸ್, ಕೆಳಭಾಗ ಪ್ರೊಜೆಕ್ಟರ್ ಲ್ಯಾಂಪ್‌ಗಳೊಂದಿಗೆ ಹೆಡ್‌ಲ್ಯಾಂಪ್ ಕ್ಲಸ್ಟರ್ ಒಳಗೊಂಡಿರಲಿದ್ದು, ಡ್ಯೂಯಲ್ ಟೋನ್ ಅಲಾಯ್ ವೀಲ್ಸ್ ಹೊಂದಿರಲಿದೆ. ಹಿಂಭಾಗದ ಡಿಸೈನ್ ಆಕರ್ಷಕವಾಗಿರಲಿದೆ ಎನ್ನಲಾಗಿದೆ.
ಎಂಜಿನ್ ಕ್ಷಮತೆ
ಎಂಜಿನ್ ಬಗ್ಗೆ ಹೇಳುವುದಾದರೆ, ಇದರಲ್ಲಿ ಹ್ಯುಂಡೈನ ಗ್ರ್ಯಾಂಡ್ i10 ನಿಯೋಸ್, ಔರಾ ಹಾಗೂ ಇತರೆ ಮಾದರಿಗಳಲ್ಲಿ ಬಳಸಿರುವಂತೆ 1.2 ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಉಪಯೋಗಿಸಲಾಗಿದೆ. ಇದು, ಕಳೆದ ಏಪ್ರಿಲ್ ತಿಂಗಳಿಂದ ಜಾರಿಗೆ ಬಂದ ಎಮಿಷನ್ ಮಾನದಂಡಗಳ ಪ್ರಕಾರವಾಗಿದೆ. ಜೊತೆಗೆ ಎಂಜಿನ್ ಅನ್ನು E20 ಫ್ಯುಯೆಲ್ (20% ಎಥನಾಲ್, 80 ಪೆಟ್ರೋಲ್)ಗೂ ಬೆಂಬಲಿಸುವಂತೆ ರೆಡಿ ಮಾಡಲಾಗಿದೆ.
1.2 ಲೀಟರ್ ನ್ಯಾಚುರಲ್ ಅಸ್ಪಿರೇಟೆಡ್ ಪೆಟ್ರೋಲ್ ಎಂಜಿನ್ ಪಡೆದಿರುವ ಇತರೆ ಹ್ಯುಂಡೈ ಕಾರುಗಳಂತೆ ‘ಎಕ್ಸ್‌ಟರ್’ ಮೈಕ್ರೋ ಎಸ್‌ಯುವಿ ಕೂಡ 82 bhp ಗರಿಷ್ಠ ಪವರ್ ಹಾಗೂ 113.8 Nm ಪೀಕ್ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯ ಹೊಂದಿರಲಿದ್ದು, 5 ಸ್ವೀಡ್ ಮ್ಯಾನುವಲ್ ಟ್ರಾಸ್ಮಿಷನ್ ಅಥವಾ 5 ಸ್ವೀಡ್ AMT ಗೇರ್ ಬಾಕ್ಸ್ ಆಯ್ಕೆಯಲ್ಲಿ ಪಡೆದಿರಲಿದೆ. ಜೊತೆಗೆ ಸಿ ಎನ್ ಜಿ ಕಿಟ್ ಸಹ ಒಳಗೊಂಡಿರಲಿದೆ.
ವೈಶಿಷ್ಟ್ಯಗಳು
ಹ್ಯುಂಡೈ ಎಕ್ಸ್‌ಟರ್ ಆಕರ್ಷಕ ಸನ್‌ರೂಫ್, 8 ಇಂಚಿನ ಫ್ಲೋಟಿಂಗ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಕನೆಕ್ಟೆಡ್ ಕಾರ್ ಟೆಕ್, ವೈರ್‌ಲೆಸ್ ಚಾರ್ಜರ್, ಆಪಲ್ ಕಾರ್ ಪ್ಲೇ, ಆಂಡ್ರಾಯ್ಡ್ ಆಟೋ, ಸೆಮಿ-ಡಿಜಿಟಲ್ ಕ್ಲಸ್ಟರ್ ಸೇರಿದಂತೆ ಹತ್ತು ಹಲವು ಫೀಚರ್ಸ್ ಪಡೆದಿರುವ ಸಾಧ್ಯತೆಯಿದೆ. ಎಕ್ಸ್, ಎಸ್, ಎಸ್‌ಎಕ್ಸ್, ಎಸ್‌ಎಕ್ಸ್ (ಒ) ಮತ್ತು ಎಸ್‌ಎಕ್ಸ್ (ಒ) ಎಂಬ ಐದು ವೇರಿಯೆಂಟ್ ಗಳಲ್ಲಿ ಗ್ರಾಹಕರಿಗೆ ಸಿಗಲಿದೆ.
ಹ್ಯುಂಡೈ ಎಕ್ಸ್‌ಟರ್ 6 ಏರ್‌ಬ್ಯಾಗ್ಸ್, ABS (ಆಂಟಿಲಾಕ್ ಬ್ರೇಕಿಂಗ್ ಸಿಸ್ಟಮ್), ESC (ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್), TPMS (ಟೈರ್ ಪ್ರೆಶರ್ ಮಾನಿಟರಿಂಗ್ ಸಿಸ್ಟಮ್), ರೇರ್ ಪಾರ್ಕಿಂಗ್ ಕ್ಯಾಮೆರಾ, ISOFIX ಚೈಲ್ಡ್-ಸೀಟ್ ಆಂಕಾರೇಜ್ ಗಳನ್ನು ಹೊಂದಿರುವ ನೀರಿಕ್ಷೆ ಇದೆ.
ಎಕ್ಸ್‌ಟರ್, ಭಾರತದ ಮಾರುಕಟ್ಟೆಯಲ್ಲಿ ಅಗ್ಗದ ಬೆಲೆಯಲ್ಲಿ ಖರೀದಿಗೆ ದೊರೆಯಲಿದೆ ಎಂದು ಅಂದಾಜಿಸಲಾಗಿದ್ದು, ಸುಮಾರು 6 ಲಕ್ಷ ಆರಂಭಿಕ ದರದಲ್ಲಿ ಸಿಗಬಹುದು. ಸಿ ಎನ್ ಜಿ ಕಿಟ್ ಹೊಂದಿರುವ ಮಾದರಿ 28-30 kmpl ಮೈಲೇಜ್ ನೀಡುವ ನಿರೀಕ್ಷೆಯಿದೆ. ಈ ಕಾರು, ಟಾಟಾ ಪಂಚ್, ನಿಸ್ಸಾನ್ ಮ್ಯಾಗ್ನೈಟ್, ರೆನಾಲ್ಟ್ ಕಿಗರ್, ಮಾರುತಿ ಸುಜುಕಿ ಫ್ರಾಂಕ್ಸ್ ಮತ್ತು ಸಿಟ್ರಸ್ ಸಿ3ಗೆ ಪ್ರತಿಸ್ಪರ್ಧೆ ಒಡ್ಡಲಿದೆ ಎನ್ನಲಾಗಿದೆ.