ಉಡುಪಿ ಗೀತಾಂಜಲಿ ಸಿಲ್ಕ್ಸ್ ನಲ್ಲಿ ಬೋನಸ್ ಪಿರಿಯಡ್ ಆಫರ್: ಕಡೆಯ ಎರಡು ದಿನ ಬಾಕಿ

ಉಡುಪಿ: ಕರಾವಳಿಯಾದ್ಯಂತ ಮನೆಮಾತಾಗಿರುವ ಉಡುಪಿಯ ಗೀತಾಂಜಲಿ ಸಿಲ್ಕ್ಸ್ ಗ್ರಾಹಕರಿಗೆ ಸಿಹಿ ಸುದ್ದಿಕೊಟ್ಟಿದೆ. ಅದೇನೆಂದರೆ ಬೋನಸ್ ಪಿರಿಯಡ್ ಆಫರ್ ಅನ್ನು ಫೆ. 28ರ ವರೆಗೆ ವಿಸ್ತರಣೆ ಮಾಡಿದೆ.

ಗೀತಾಂಜಲಿ ಸಿಲ್ಕ್ಸ್ ಹಬ್ಬಗಳಿಗೆ ನೀಡಿಸ್ದ ಭರ್ಜರಿ ಆಫರ್ ಗಳಿಗೆ ಗ್ರಾಹಕರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಲ್ಲದೆ, ಅವುಗಳಿಂದ ಸಾಕಷ್ಟು ಅನುಕೂಲತೆಗಳನ್ನು ಪಡೆದುಕೊಂಡಿದ್ದರು. ಫೆಬ್ರವರಿ ತಿಂಗಳಿನಲ್ಲಿ ಪ್ರಕಟಿಸಿದ್ದ ಬೋನಸ್ ಪಿರಿಯಡ್ ಆಫರ್ ಗೂ ನಿರೀಕ್ಷೆ ಮೀರಿ ಗ್ರಾಹಕರು ಸ್ಪಂದಿಸಿದ್ದು, ಇದೀಗ ಈ ಆಫರ್ ಅನ್ನು ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಫೆಬ್ರವರಿ 28 ವರೆಗೆ ಮುಂದುವರೆಸಲಾಗಿದೆ.

ಕರಾವಳಿಯ ಅತೀ ದೊಡ್ಡ ಬಟ್ಟೆ ಮಳಿಗೆ ಗೀತಾಂಜಲಿ ಸಿಲ್ಕ್ಸ್ ನಲ್ಲಿ ಎಲ್ಲಾ ವಯೋಮಿತಿಯರಿಗೆ ಬೇಕಾದ ವಿವಿಧ ವಿನ್ಯಾಸದ ಉಡುಪುಗಳನ್ನು ಹೊಂದಿದೆ. ಆಗಾಗ ಬದಲಾಗುತ್ತಿರುವ ನೂತನ ವಿನ್ಯಾಸಗಳ ಉಡುಪುಗಳನ್ನು ಭಾರತದ ನಾನಾ ಭಾಗಗಳಲ್ಲಿ ಇರುವ ಉತ್ಪಾದಕರಿಂದ ನೇರವಾಗಿ ತರಿಸಿಕೊಂಡು, ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಒದಗಿಸುವುದರಲ್ಲಿ ಮಳಿಗೆ ಯಶಸ್ವಿಯಾಗಿದೆ. ಪುರುಷರಿಗೆ ಬೇಕಾದ ಎಲ್ಲಾ ಉಡುಪುಗಳಿಗೆ ಮೆನ್ಸ್ ಗ್ಯಾಲರಿ ಎಂಬ ಪ್ರತ್ಯೇಕವಾದ ಬೃಹತ್ ಸಂಗ್ರಹವಿದೆ. ಮಹಿಳೆಯರಿಗೆ ಬೇಕಾದ ಎಲ್ಲಾ ತರಹದ ಸೀರೆಗಳ ಸಂಗ್ರಹ ಸಖಿ ಎಂಬ ಸಾರಿ ಸೆಕ್ಷನ್ ಅನ್ನು ಕೂಡ ಹೊಂದಿದೆ.

ಮದುವೆ ಸಮಾರಂಭಗಳಿಗೆ ಬೇಕಾದ ಉಡುಪುಗಳಿಗೆ ಪ್ರತ್ಯೇಕವಾಗಿ ವಿಶಾಲವಾದ ಮೇಕಪ್ ರೂಮಿನೊಂದಿಗೆ ಸಿದ್ಧವಾಗಿರುವ ಬ್ರೈಡಲ್ ಬೂಟಿಕ್ ಸೆಕ್ಷನ್ ಇದೆ. ಇವೆಲ್ಲದರ ಜೊತೆಗೆ ಪುಟಾಣಿಗಳಿಗೆ ಬೇಕಾದ ಎಲ್ಲಾ ರೀತಿಯ ಉಡುಪುಗಳು ಅತೀ ವಿಶಾಲವಾದ ಕಿಡ್ಸ್ ಜೋನ್ ನಲ್ಲಿ ದೊರೆಯುತ್ತದೆ. ಗ್ರಾಹಕರಿಗಾಗಿ ನೀಡಿರುವ ವಿಶೇಷ ಬೋನಸ್ ಪಿರಿಯಡ್ ಆಫರನ್ನು ಎಲ್ಲಾ ಗ್ರಾಹಕರು ಸದುಪಯೋಗ ಪಡಿಸಿಕೊಳ್ಳುವಂತೆ ಗೀತಾಂಜಲಿ ಸಿಲ್ಕ್ಸ್ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ